Viral Video: ಕೆಸರಿನಲ್ಲಿಯೇ ಮುಂಗುಸಿಯ ಮೇಲೆ ದಾಳಿ ಇಟ್ಟ ಕೋಬ್ರಾ, ಯಾರು ಯಾರಿಗೆ ಮಣ್ಣುಮುಕ್ಕಿಸಿದರು?

Cobra VS Mongoose: ಸಾಮಾಜಿಕ ಮಾಧ್ಯಮದಲ್ಲಿ ಅಪಾಯಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಾವು ಕಾಳಿಂಗ ಸರ್ಪ ಹಾಗೂ ಮುಂಗುಸಿಯ ತುರುಸಿನ ಕಾಳಗವನ್ನು ವೀಕ್ಷಿಸಬಹುದು. ಈ ವಿಡಿಯೋ ಸಾಕಷ್ಟು ವೀಕ್ಷಣೆಗಳನ್ನು ಸಂಪಾದಿಸುತ್ತದೆ.  

Written by - Nitin Tabib | Last Updated : Aug 31, 2022, 05:07 PM IST
  • ಸಾಮಾಜಿಕ ಮಾಧ್ಯಮದಲ್ಲಿ ಹಲವು ರೀತಿಯ ವಿಷಯಗಳನ್ನು ಹಂಚಿಕೊಳ್ಳಲಾಗುತ್ತದೆ.
  • ಈ ವೇದಿಕೆಗಳಲ್ಲಿ ಹಲವು ಜನರು ಹಾವುಗಳ ಕಾದಾಡದ ವಿಡಿಯೋಗಳನ್ನೂ ವೀಕ್ಷಿಸಲು ಇಷ್ಟಪಡುತ್ತಾರೆ.
  • ಇಂತಹ ಕಾಳಗದಲ್ಲಿ ಎದುರಾಳಿಗಳನ್ನು ಮಣಿಸಿ ಯಾರು ಗೆಲ್ಲುತ್ತಾರೆ ಎಂಬ ಸಸ್ಪೆನ್ಸ್ ಕೊನೆಯ ಹಂತದವರೆಗೂ ಇರುತ್ತದೆ.
Viral Video: ಕೆಸರಿನಲ್ಲಿಯೇ ಮುಂಗುಸಿಯ ಮೇಲೆ ದಾಳಿ ಇಟ್ಟ ಕೋಬ್ರಾ, ಯಾರು ಯಾರಿಗೆ ಮಣ್ಣುಮುಕ್ಕಿಸಿದರು? title=
Cobra-Mongoose Fight

Trending Video On Internet: ಸಾಮಾಜಿಕ ಮಾಧ್ಯಮದಲ್ಲಿ ಹಲವು ರೀತಿಯ ವಿಷಯಗಳನ್ನು ಹಂಚಿಕೊಳ್ಳಲಾಗುತ್ತದೆ. ಈ ವೇದಿಕೆಗಳಲ್ಲಿ ಹಲವು ಜನರು ಹಾವುಗಳ ಕಾದಾಡದ ವಿಡಿಯೋಗಳನ್ನೂ ವೀಕ್ಷಿಸಲು ಇಷ್ಟಪಡುತ್ತಾರೆ. ಇಂತಹ ಕಾಳಗದಲ್ಲಿ ಎದುರಾಳಿಗಳನ್ನು ಮಣಿಸಿ ಯಾರು ಗೆಲ್ಲುತ್ತಾರೆ ಎಂಬ ಸಸ್ಪೆನ್ಸ್ ಕೊನೆಯ ಹಂತದವರೆಗೂ ಇರುತ್ತದೆ. ಇವುಗಳಲ್ಲಿ ನಾಗರ ಹಾವು ಮತ್ತು ಮುಂಗುಸಿಗಳ ಕಾದಾಟದ ವೀಡಿಯೋಗಳೂ ಹೆಚ್ಚಾಗಿ ಕಂಡುಬರುತ್ತಿವೆ.

ಕೇಸರಿನಲ್ಲಿಯೇ ಮುಂಗುಸಿಯ ಮೇಲೆ ದಾಳಿ ಇಟ್ಟ ಕಾಳಿಂಗ ಸರ್ಪ
ಮುಂಗುಸಿಯ ಜೀವನದ ಆಟವನ್ನು ಕೆಸರಿನಲ್ಲಿಯೇ ಮುಗಿಸಲು ತೀರ್ಮಾನಿಸಿರುವ ಒಂದು ನಾಗರ ಹಾವು, ಅದರ ಮೇಲೆ ಹಲವಾರು ಬಾರಿ ದಾಳಿ ಮಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದಾಗ್ಯೂ, ಮುಂಗುಸಿಯು ಅಪಾಯಕಾರಿ ಹಾವನ್ನು ಎದುರಿಸುತ್ತದೆ ಮತ್ತು ಹಿಂದೇಟು ಹಾಕುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಮೊದಲು ನೀವೂ ನೋಡಲೇಬೇಕು..

 
 
 
 

 
 
 
 
 
 
 
 
 
 
 

A post shared by 🐍SNAKES OF INDIA🐍 (@snakes_of_india)

ಇದನ್ನೂ ಓದಿ-Python Attack Video: ಸೀಲಿಂಗ್ ನಿಂದ ಕೆಳಕ್ಕೆ ಬಿದ್ದ ಅಪಾಯಕಾರಿ ಹೆಬ್ಬಾವು, ಹತ್ತಿರದ ವ್ಯಕ್ತಿಯ ಮೇಲೆ ಅಟ್ಯಾಕ್

ಪ್ರತಿದಾಳಿ ನಡೆಸಿದ ಮುಂಗುಸಿ
ಆರಂಭದಲ್ಲಿ, ಎರಡೂ ಪ್ರಾಣಿಗಳು ತನ್ನ ರಕ್ತದಾಹವನ್ನು ತೀರಿಸಿಕೊಳ್ಳಲು ಹವಣಿಸುತ್ತಿವೆ. ಕಿಂಗ್ ಕೋಬ್ರಾ ಮುಂಗುಸಿಯನ್ನು ಪದೇ ಪದೇ ಕಚ್ಚಲು ಪ್ರಯತ್ನಿಸುತ್ತದೆ. ಆದರೆ ಮುಂಗುಸಿ ಕೂಡ ತಾನೇನು ಕಮ್ಮಿ ಇಲ್ಲ ಎಂಬಂತೆ ಪ್ರತಿದಾಳಿ ಮಾಡುವುದನ್ನು ವೀಡಿಯೊದಲ್ಲಿ ಕಾಣಬಹುದು. ಕೊನೆಯಲ್ಲಿ, ಮುಂಗುಸಿಯು ನಾಗರಹಾವನ್ನು ಹತ್ತಿಕ್ಕಲು ಪ್ರಾರಂಭಿಸುತ್ತದೆ, ಆದ್ದರಿಂದ ನಾಗರಹಾವು ಓಡಿಹೋಗಲು ಪ್ರಾರಂಭಿಸುತ್ತದೆ. ಅಂತಿಮವಾಗಿ ಮುಂಗುಸಿ ಈ ಕಾದಾಟವನ್ನು ಗೆಲ್ಲುತ್ತದೆ ಮತ್ತು ಅಪಾಯಕಾರಿ ಕಿಂಗ್ ಕೋಬ್ರಾಗೆ ಸೋಲಿನ ರುಚಿಯನ್ನು ತೋರಿಸುತ್ತದೆ.

ಇದನ್ನೂ ಓದಿ-Viral Video: ಪಿತ್ತ ನೆತ್ತಿಗೇರಿರುವ ಗೂಳಿಯ ಜೊತೆಗೆ ವ್ಯಕ್ತಿಯ ಚೆಲ್ಲಾಟ.. ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ

ವಿಡಿಯೋ ನೋಡಿದ ಬೆಚ್ಚಿಬಿದ್ದ ಜನ
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಹಲವು ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ, ಈ ಹಾವು - ಮುಂಗುಸಿಯ ಕಾದಾಟದ ವೀಡಿಯೊವನ್ನು ಸಾವಿರಾರು ಜನರು (ಸೋಷಿಯಲ್ ಮೀಡಿಯಾ ಬಳಕೆದಾರರು) ಲೈಕ್ ಮಾಡಿದ್ದಾರೆ ಮತ್ತು ಅನೇಕ ಜನರು ತಮ್ಮ ವಿಭಿನ್ನ ಪ್ರತಿಕ್ರಿಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ನೀಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News