ಈ ದಿನ ಪ್ರಕಟಗೊಳ್ಳಲಿದೆ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಟೀಂ ಇಂಡಿಯಾ ತಂಡ: ಈ ಆಟಗಾರರಿಗೆ ಸ್ಥಾನ ಖಚಿತ!

Champions Trophy 2025: ವಿಶ್ವ ಟೆಸ್ಟ್ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಮಾರ್ಚ್ 9 ರಂದು ನಡೆಯಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ಆತಿಥ್ಯಕ್ಕೆ ಸಂಬಂಧಿಸಿದಂತೆ ಬಹಳ ಸಮಯದಿಂದ ಉದ್ವಿಗ್ನತೆ ಇತ್ತು.

Written by - Bhavishya Shetty | Last Updated : Jan 6, 2025, 08:10 PM IST
    • ವಿಶ್ವ ಟೆಸ್ಟ್ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಪ್ರಾರಂಭ
    • ಭಾರತ ತಂಡಕ್ಕೆ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲಲು ಅವಕಾಶ
    • ಟೀಂ ಇಂಡಿಯಾ ಯಾವಾಗ ಘೋಷಣೆ ಮಾಡಲಾಗುವುದು
ಈ ದಿನ ಪ್ರಕಟಗೊಳ್ಳಲಿದೆ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಟೀಂ ಇಂಡಿಯಾ ತಂಡ: ಈ ಆಟಗಾರರಿಗೆ ಸ್ಥಾನ ಖಚಿತ! title=
Champions Trophy 2025

Champions Trophy 2025: ಬಾರ್ಡರ್ ಗವಾಸ್ಕರ್ ಟ್ರೋಫಿ ಮುಗಿದ ಬಳಿಕ ಎಲ್ಲರ ಗಮನ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯತ್ತ ನೆಟ್ಟಿದೆ. ಭಾರತ ತಂಡಕ್ಕೆ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲಲು ಅವಕಾಶ ಸಿಗಲಿದೆ. ಇನ್ನು ಈ ಮೆಗಾ ಈವೆಂಟ್‌ಗೆ ಟೀಂ ಇಂಡಿಯಾ ಯಾವಾಗ ಘೋಷಣೆ ಮಾಡಲಾಗುವುದು ಎಂಬ ದಿನಾಂಕವೂ ಬಹಿರಂಗವಾಗಿದೆ.

ಇದನ್ನೂ ಓದಿ: ಮಲಗುವ ಮುನ್ನ ಈ 5 ಆಸನ ಮಾಡಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ತಕ್ಷಣ ಕಡಿಮೆಯಾಗುತ್ತೆ..!

ವಿಶ್ವ ಟೆಸ್ಟ್ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಮಾರ್ಚ್ 9 ರಂದು ನಡೆಯಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ಆತಿಥ್ಯಕ್ಕೆ ಸಂಬಂಧಿಸಿದಂತೆ ಬಹಳ ಸಮಯದಿಂದ ಉದ್ವಿಗ್ನತೆ ಇತ್ತು. ಆದರೆ ಅಂತಿಮವಾಗಿ ಐಸಿಸಿ ಇದನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವ ನಿಲುವು ತಳೆದಿದೆ.

ಚಾಂಪಿಯನ್ಸ್ ಟ್ರೋಫಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ತಯಾರಿಯಲ್ಲಿ ನಿರತವಾಗಿವೆ. ಭಾರತ ತಂಡ ಫೆಬ್ರವರಿ 22 ರಿಂದ ತನ್ನ ಅಭಿಯಾನವನ್ನು ಆರಂಭಿಸಲಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಪಂದ್ಯಾವಳಿಗಾಗಿ ಎಲ್ಲಾ ತಂಡಗಳನ್ನು ಜನವರಿ 12 ರೊಳಗೆ ಪ್ರಕಟಿಸಲಾಗುವುದು. ಜನವರಿ 12 ರೊಳಗೆ ಎಲ್ಲಾ ತಂಡಗಳು ತಮ್ಮ ತಾತ್ಕಾಲಿಕ ತಂಡವನ್ನು ಸಲ್ಲಿಸಬೇಕು ಎಂದು ಐಸಿಸಿ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಎಲ್ಲಾ ಮಂಡಳಿಗಳು ಸ್ಕ್ವಾಡ್ ಬದಲಾವಣೆಗಳನ್ನು ಮಾಡಲು ಸುಮಾರು ಒಂದು ತಿಂಗಳ ಕಾಲಾವಕಾಶವನ್ನು ಹೊಂದಿರುತ್ತದೆ. ಫೆಬ್ರವರಿ 13ರವರೆಗೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

ಟೀಂ ಇಂಡಿಯಾ ಘೋಷಣೆ ಯಾವಾಗ?
ಫೆಬ್ರವರಿ 13 ರೊಳಗೆ ಚಾಂಪಿಯನ್ಸ್ ಟ್ರೋಫಿಗಾಗಿ ಎಲ್ಲಾ ತಂಡಗಳನ್ನು ಐಸಿಸಿ ಸ್ಟ್ಯಾಂಪ್ ಮಾಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜನವರಿ 12 ರೊಳಗೆ ಭಾರತ ತಂಡವನ್ನು ಪ್ರಕಟಿಸಲಾಗುವುದು.

ಇದನ್ನೂ ಓದಿ: ಇದು ತರಕಾರಿಯಲ್ಲ, ಸಂಜೀವಿನಿ!ಮಧುಮೇಹದಿಂದ ಕ್ಯಾನ್ಸರ್ ವರೆಗೆ ಮುಕ್ತಿ ನೀಡಬಲ್ಲ ಪರಮೌಷಧ! ವರ್ಷದಲ್ಲಿ ಮೂರೇ ತಿಂಗಳು ಸಿಗುವ ಕಾಯಿ ಇದು !

ಚಾಂಪಿಯನ್ಸ್ ಟ್ರೋಫಿಗೆ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News