Viral Video: ನರೇಂದ್ರ ಮೋದಿ ಯಾರು? ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ ಪತ್ರಕರ್ತೆ, ಉತ್ತರ ಕೇಳಿ ನೀವೂ...!

Funny Viral Video: ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕೆಲ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತೆ ವಿದ್ಯಾರ್ಥಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳುತ್ತಾಳೆ. ಅದಕ್ಕೆ ವಿದ್ಯಾರ್ಥಿಗಳಿಂದ ಬಂದ ಉತ್ತರ ಕೇಳಿ ನೀವೂ ಕೂಡ ಹೊಟ್ಟೆಹಿಡಿದುಕೊಂಡು ನಗುವಿರಿ. (Viral News In Kannada)  

Written by - Nitin Tabib | Last Updated : Mar 3, 2024, 07:40 PM IST
  • ವೈರಲ್ ಆಗುತ್ತಿರುವ ಈ ವೀಡಿಯೊವನ್ನು Instagram ನಲ್ಲಿ @pshyco_rider_143 ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ.
  • ಈ ವಿಡಿಯೋಗೆ ಸಾಕಷ್ಟು ಜನರಿಂದ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಕಾಮೆಂಟ್ ಮಾಡಿದ ಓರ್ವ ಬಳಕೆದಾರರು
  • 'ಬಿಹಾರದಲ್ಲಿ ಶಿಕ್ಷಣದ ಮಟ್ಟವು ತುಂಬಾ ಹೆಚ್ಚಾಗಿದೆ, ಇದು ಒಂದು ಸಣ್ಣ ಉದಾಹರಣೆಯಾಗಿದೆ' ಎಂದು ಬರೆದಿದ್ದಾರೆ.
Viral Video: ನರೇಂದ್ರ ಮೋದಿ ಯಾರು? ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ ಪತ್ರಕರ್ತೆ, ಉತ್ತರ ಕೇಳಿ ನೀವೂ...! title=

Viral Funny Video : ಸಾಮಾಜಿಕ ಜಾಲತಾಣಗಳಲ್ಲಿ ದಿನನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲ ವಿಡಿಯೋಗಳು ನಿಮಗೆ ಯೋಚನೆಗೆ ಈಡು ಮಾಡಿದರೆ, ಕೆಲ ವಿಡಿಯೋಗಳು ನಿಮಗೆ ಹೊಟ್ಟೆ ಹಿಡಿದು ನಗುವಂತೆ ಮಾಡುತ್ತವೆ. ಅಂತಹುದ್ದೇ ಒಂದು ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದ್ದು (Viral Video), ಅದನ್ನು ನೋಡಿ ನೀವು ಹೊಟ್ಟೆ ಹುಣ್ಣಾಗುವಂತೆ ನಗುವಿರಿ.  ವೀಡಿಯೋದಲ್ಲಿ (Funny Video) ಖಾಸಗಿ ಸುದ್ದಿವಾಹಿನಿಯ ಪತ್ರಕರ್ತೆ ವಿದ್ಯಾರ್ಥಿಗಳಿಗೆ ನರೇಂದ್ರ ಮೋದಿ ಯಾರು? ಲಾಲು ಯಾದವ್ ಯಾರು ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ವಿದ್ಯಾರ್ಥಿಗಳು ನೀಡಿದ ಉತ್ತರ ಮಾತ್ರ ಹುಚ್ಚೆದ್ದು ಕುಣಿದಾಡಿ ನಗುವಂತಿದೆ. (Viral News In Kannada)

ನರೇಂದ್ರ ಮೋದಿ ಬಗೆಗಿನ ಪ್ರಶ್ನೆಗೆ ವಿದ್ಯಾರ್ಥಿಗಳ ಉತ್ತರ ಕೇಳಿ
ಈ ವಿಡಿಯೋ ವೈರಲ್ ವಿಡಿಯೋದಲ್ಲಿ (Trending Video)  ಕೆಲವು ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಖಾಸಗಿ ಸುದ್ದಿವಾಹಿನಿ ಪತ್ರಕರ್ತೆ ಬಂದು ಆ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾಳೆ. ಪತ್ರಕರ್ತೆ ಮೊದಲು ವಿದ್ಯಾರ್ಥಿಗೆ 'ಲಾಲು ಪ್ರಸಾದ್ ಯಾದವ್ ಗೊತ್ತಾ?' ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಉತ್ತರಿಸಿದ ವಿದ್ಯಾರ್ಥಿ ಗೊತ್ತು ಎನ್ನುತ್ತಾನೆ. ಪತ್ರಕರ್ತೆ ಪುನಃ 'ಯಾರು?' ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ವಿದ್ಯಾರ್ಥಿ ಸಿಕ್ಕಾಪಟ್ಟೆ ನಾಚಿಕೊಂಡು ಉತ್ತರಿಸುವುದರಿಂದ ನುಣುಚಿಕೊಳ್ಳುತ್ತಾನೆ. ಪತ್ರಕರ್ತೆ ಒಂದು ಹೆಜ್ಜೆ ಮುಂದಿತ್ತು ಮತ್ತೊರ್ವ ವಿದ್ಯಾರ್ಥಿನಿಗೆ 'ನರೇಂದ್ರ ಮೋದಿ ಯಾರು?' ಎಂದು ಪ್ರಶ್ನಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿನಿ ನೀಡಿದ ಉತ್ತರ ಕೇಳಿ ನೀವೂ ಬೆಚ್ಚಿಬೀಳುವಿರಿ. ಹೌದು,  ನರೇಂದ್ರ ಮೋದಿ ಯಾರು? ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿನಿ, 'ಬಿಹಾರದ ಪ್ರಧಾನ ಮಂತ್ರಿ' ಎಂದು ಹೇಳುತ್ತಾಳೆ. ವಿದ್ಯಾರ್ಥಿಗಳ ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ (Trending News In Kannada) ಆಗುತ್ತಿದೆ.

ಜನರು ಕಾಮೆಂಟ್ ಹೇಗಿವೆ?
ವೈರಲ್ ಆಗುತ್ತಿರುವ ಈ ವೀಡಿಯೊವನ್ನು Instagram ನಲ್ಲಿ @pshyco_rider_143 ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಸಾಕಷ್ಟು ಜನರಿಂದ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಕಾಮೆಂಟ್ ಮಾಡಿದ ಓರ್ವ ಬಳಕೆದಾರರು 'ಬಿಹಾರದಲ್ಲಿ ಶಿಕ್ಷಣದ ಮಟ್ಟವು ತುಂಬಾ ಹೆಚ್ಚಾಗಿದೆ, ಇದು ಒಂದು ಸಣ್ಣ ಉದಾಹರಣೆಯಾಗಿದೆ' ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರ, 'ನಂತರ ನೀಡಿದ ಉತ್ತರ ಸರಿಯಾಗಿದೆ. ಆರಂಭದಲ್ಲಿ ಹುಡುಗಿ ಸ್ವಲ್ಪ ನರ್ವಸ್ ಆಗಿದ್ದಳು' ಎಂದು ಬರೆದಿದ್ದಾರೆ. ಮೂರನೇ ಬಳಕೆದಾರರು, 'ಇಷ್ಟೂ ನಿಜ ಹೇಳಬಾರದು' ಎಂದು ಪ್ರತಿಕ್ರಿಯಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News