Viral Video: ಮಹಿಳೆಯ ಕಿವಿಯೊಳಗಿಂದ ಹೊರಬಂದ ಜೇಡ! ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ

ಮಹಿಳೆಯೊಬ್ಬಳು ಕಿವಿ ನೋವಿನಿಂದ ಬಳಲುತ್ತಿದ್ದಳು. ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಆಕೆಯ ಕಿವಿ ಪರಿಶೀಲಿಸಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಆಕೆಯ ಕಿವಿಯಲ್ಲಿ ಜೀವಂತ ಜೇಡವೊಂದು ಪತ್ತೆಯಾಗಿದೆ.

Written by - Puttaraj K Alur | Last Updated : Dec 13, 2022, 07:13 PM IST
  • ಕಿವಿ ನೋವು ಅಂತಾ ಆಸ್ಪತ್ರೆಗೆ ಹೋದ ಮಹಿಳೆಗೆ ಶಾಕ್
  • ಮಹಿಳೆಯ ಕಿವಿಯೊಳಗಿಂದ ಹೊರಬಂದ ಜೀವಂತ ಜೇಡ
  • ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್
Viral Video: ಮಹಿಳೆಯ ಕಿವಿಯೊಳಗಿಂದ ಹೊರಬಂದ ಜೇಡ! ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ title=
ಮಹಿಳೆ ಕಿವಿಯಲ್ಲಿ ‘ಜೇಡ’

ನವದೆಹಲಿ: ಅನೇಕರು ಕಿವಿ ನೋವಿನಿಂದ ಬಳಲುತ್ತಿರುತ್ತಾರೆ. ಕಿವಿ ನೋವಿಗೆ ಕಾರಣವೇನು ಅನ್ನೋದು ತಲೆನೋವು ತಂದಿರುತ್ತದೆ. ಹಲ್ಲು ನೋವು, ಕಿವಿಯಲ್ಲಿನ ಸೋಂಕು ಮತ್ತು ಗಂಟಲಿನಲ್ಲಿ ಏನಾದ್ರೂ ಸೋಂಕಾಗಿದ್ರೆ ಕಿವಿಯಲ್ಲಿ ನೋವು ಕಂಡುಬರುತ್ತದೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸಖತ್ ಸೌಂಡ್ ಮಾಡುತ್ತಿದೆ. ಈ ವಿಡಿಯೋ ನೋಡಿದ್ರೆ ನೀವೂ ಸಹ ಹೌಹಾರುವುದು ಗ್ಯಾರಂಟಿ. ಯಾಕಂದ್ರೆ ನೋವು ಅಂತಾ ಕ್ಲಿನಿಕ್‍ಗೆ ತೆರಳಿದ್ದ ಮಹಿಳೆಯ ಕಿವಿಯೊಳಗೆ ಜೇಡ ಪತ್ತೆಯಾಗಿ ವೈದ್ಯರಿಗೆ ಭಯವನ್ನುಂಟು ಮಾಡಿತ್ತು.  

ಇದನ್ನೂ ಓದಿ: Wedding Viral Video: ಮದುವೆ ಮನೆಯಲ್ಲಿ ಪಾತ್ರೆ ಹಿಡಿದು ಕುಣಿದಾಡಿದ ಅತಿಥಿಗಳು: ವಧು-ವರನ ಕಥೆ ಏನು ನೋಡಿ

ಹೌದು, ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದಳು. ಈ ವೇಳೆ ಆಕೆಗೆ ಚಿಕಿತ್ಸೆ ನೀಡಲು ಕಿವಿ ಪರಿಶೀಲಿಸಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಸಣ್ಣ ಬ್ಯಾಟರಿ ಹಾಕಿ ಕಿವಿ ಪರಿಶೀಲಿಸಿದ ವೈದ್ಯರಿಗೆ ಜೀವಂತವಾಗಿದ್ದ ಜೇಡವಿರುವುದು ಗೊತ್ತಾಗಿದೆ. ಕೂಡಲೇ Ear Drops ಹಾಕಿ ಅದನ್ನು ಹೊರತೆಗೆಯುವಲ್ಲಿ ಯಶಸ್ಸಿಯಾಗಿದ್ದಾರೆ.

 
 
 
 

 
 
 
 
 
 
 
 
 
 
 

A post shared by UNILAD (@unilad)

ಈ ವಿಡಿಯೋ ನೋಡಿದ್ರೆ ನಿಮಗೆ ಕಸಿವಿಸಿಯಾಗುತ್ತದೆ. ಆದರೆ ಕಿವಿ ನೋವಿನಿಂದ ಬಳಲುತ್ತಿದ್ದ ಮಹಿಳೆ ಜೇಡ ಹೊರಬಂದ ಮೇಲೆ ನಿರಾಳವಾಗಿದ್ದಾಳೆ. ಮಹಿಳೆಯ ಕಿವಿಯಿಂದ ಜೇಡ ಹೊರಬರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. Unilad ಇನ್‍ಸ್ಟಾಗ್ರಾಮ್‍ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ‘Imagine finding out this is what's causing your earache’ ಅಂತಾ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

ಇದನ್ನೂ ಓದಿViral Video: 52 ವರ್ಷದ ಆಂಟಿಯನ್ನು ಮದುವೆಯಾದ 21 ರ ಯುವಕ! ಬಲು ರೋಚಕ ಈ ಲವ್‌ ಸ್ಟೋರಿ

ವಿಡಿಯೋ ನೋಡಿದ ಬಹುತೇಕರು ಅಸಹ್ಯಕರವಾಗಿದೆ ಅಂತಾ ಕಾಮೆಂಟ್ ಮಾಡಿದೆ. 50 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ನೂರಾರು ಜನರು ಶೇರ್ ಮಾಡಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News