Viral Video: ಕಾರಿನೊಳಗೆ ನುಗ್ಗಿದ ಈ ಕೋತಿ ಮಾಡಿದ್ದೇನು ಗೊತ್ತಾ?

Monkey Viral Video: ಕಾರಿನ ಡ್ಯಾಶ್‌ಬೋರ್ಡ್ ತೆಗೆದು ಅಲ್ಲಿದ್ದ ತಿಂಡಿಗಳನ್ನು ಹುಡುಕುತ್ತದೆ. ಬಳಿಕ ಬಿಸ್ಕೇಪ್‌ ಪ್ಯಾಕೆಟ್‌ ಸೇರಿದಂತೆ ಕೈತುಂಬಾ ಆಹಾರದ ಪ್ಯಾಕ್‌ಗಳನ್ನು ಹಿಡಿದುಕೊಂಡು ಹೋಗಿದೆ.

Written by - Puttaraj K Alur | Last Updated : Feb 12, 2024, 07:52 PM IST
  • ಕಾರಿನೊಳಗೆ ಹಾರಿ ಬಿಸ್ಕೇಟ್‌ ಪ್ಯಾಕೆಟ್‌ ಎತ್ತಿಕೊಂಡು ಹೋದ ಕೋತಿ
  • ಕೋತಿಯ ಕುಚೇಷ್ಠೆಯಿಂದ ಬಿದ್ದು ಬಿದ್ದು ನಕ್ಕ ನೆಟಿಜನ್ಸ್‌
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ
Viral Video: ಕಾರಿನೊಳಗೆ ನುಗ್ಗಿದ ಈ ಕೋತಿ ಮಾಡಿದ್ದೇನು ಗೊತ್ತಾ? title=
ಕೋತಿಯ ಕುಚೇಷ್ಠೆ!

ನವದೆಹಲಿ: ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿದಿನ ಲಕ್ಷಾಂತರ ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ ಪ್ರಾಣಿಗಳ ವಿಡಿಯೋಗಳು ನೋಡುಗರ ಗಮನ ಸೆಳೆಯುತ್ತವೆ. ಈ ಪೈಕಿ ಕೋತಿಗಳ ವಿಡಿಯೋಗಳು ಜನರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತವೆ. ಕೋತಿಗಳು ಬುದ್ಧಿವಂತ ಪ್ರಾಣಿಗಳು, ಆದರೆ ಇವುಗಳ ಕುಚೇಷ್ಠೆಯಿಂದ ಅನೇಕರಿಗೆ ಸಂಕಷ್ಟ ಎದುರಾಗುತ್ತದೆ. 

ಇದ್ದಕ್ಕಿದ್ದಂತೆಯೇ ದಾಳಿ ಮಾಡುವ ಕೋತಿಗಳು ಜನರ ಬಳಿಯಿರುವ ಬ್ಯಾಗ್‌, ಪರ್ಸ್‌, ಮೊಬೈಲ್‌, ಕ್ಯಾಮೆರಾಗಳನ್ನೇ ಎತ್ತಿಕೊಂಡು ಹೋಗುವ ಹಲವಾರು ವಿಡಿಯೋಗಳು ಇಂಟರ್ನೆಟ್‌ನಲ್ಲಿವೆ. ಕೋತಿಗಳು ಕುಚೇಷ್ಠೆಯಿಂದ ಹೊಟ್ಟೆ ಹುಣ್ಣಾಗುವಷ್ಟು ನಗಬೇಕಾಗುತ್ತದೆ. ಈ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರನ್ನು ಆಕರ್ಷಿಸುತ್ತವೆ. ಕೋತಿ ಕುಚೇಷ್ಠೆಯ ಮತ್ತೊಂದು ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ವಿಶ್ವದ ಅತ್ಯಂತ ಸುಂದರ ಮಹಿಳೆಯರನ್ನು ಹೊಂದಿರುವ ದೇಶ ಯಾವುದು ಗೊತ್ತಾ?

 
 
 
 

 
 
 
 
 
 
 
 
 
 
 

A post shared by Dunia hewan (@duniah.hewan)

duniah.hewan ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೋತಿಯ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಕಾಡಿನ ದಾರಿಯಲ್ಲಿ ಕೆಲವರು ಕಾರಿನಲ್ಲಿ ಹೋಗುತ್ತಿರುತ್ತಾರೆ. ಈ ವೇಳೆ ಅಲ್ಲಿ ತಾಯಿ ಮತ್ತು ಮರಿ ಕೋತಿಗಳು ಬರುತ್ತವೆ. ಈ ಕೋತಿಗಳನ್ನು ಕಂಡ ಕೂಡಲೇ ವಾಹನದಲ್ಲಿದ್ದವರು ಅವುಗಳಿಗೆ ಬಿಸ್ಕೇಟ್‌ ನೀಡಲು ಮುಂದಾಗುತ್ತಾರೆ. ಈ ವೇಳೆ ಎಲ್ಲರೂ ಅಚ್ಚರಿಗೊಳ್ಳುವ ಘಟನೆ ನಡೆಯುತ್ತದೆ. ರಸ್ತೆಬದಿಯ ಕಂಬಿ ಮೇಲೆ ಸಾಗುತ್ತಿದ್ದ ದೊಡ್ಡ ಕೋತಿ ಇದ್ದಕ್ಕಿದ್ದಂತೆ ಚಂಗನೆ ಹಾರಿ ಕಾರಿನ ಕಿಟಕಿಯತ್ತ ಜಿಗಿಯುತ್ತದೆ. 

ಈ ವೇಳೆ ಕಾರಿನಲ್ಲಿದ್ದವರು ಹೌಹಾರಿ ಅದಕ್ಕೆ ಆಹಾರ ನೀಡಲು ಮುಂದಾಗುತ್ತಾರೆ. ಅದನ್ನು ಪಡೆದುಕೊಂಡ ಕೋತಿ ಬಳಿಕ ಕಾರಿನ ಡ್ಯಾಶ್‌ಬೋರ್ಡ್ ತೆಗೆದು ಅಲ್ಲಿದ್ದ ತಿಂಡಿಗಳನ್ನು ಹುಡುಕುತ್ತದೆ. ಬಳಿಕ ಬಿಸ್ಕೇಪ್‌ ಪ್ಯಾಕೆಟ್‌ ಸೇರಿದಂತೆ ಕೈತುಂಬಾ ಆಹಾರದ ಪ್ಯಾಕ್‌ಗಳನ್ನು ಹಿಡಿದುಕೊಂಡು ಹೋಗಿದೆ. ಕೋತಿಯ ಈ ಕುಚೇಷ್ಠೆಯಿಂದ ಕಾರಿನಲ್ಲಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ. ಕೋತಿಯ ತಮಾಷೆಯ ಪ್ರಸಂಗವನ್ನು ಅವರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಶ್ರೀಮಂತರ ಖಾದ್ಯ ಎಂದೇ ಫೇಮಸ್ ಈ ಮೀನಿನ ಮೊಟ್ಟೆ, ವಿಶ್ವದ ಅತ್ಯಂತ ದುಬಾರಿ ಆಹಾರ ಪದಾರ್ಥ ಇದು!

ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಲಕ್ಷಾಂತರ ಜನರು ವಿಡಿಯೋವನ್ನು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ಕೆಲವರು ಕೋತಿಗಳ ಬುದ್ಧಿವಂತಿಗೆ ವಾವ್‌... ಅಂತಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News