Viral News: ಅವಳಿ ಸಹೋದರಿಯರನ್ನು ಮದುವೆಯಾದ ಅವಳಿ ಸಹೋದರರು!

Twins Marriage: ಪಶ್ಚಿಮ ಬಂಗಾಳದ ಬುರ್ದ್ವಾನ್‍ನಲ್ಲಿ ಅವಳಿ ಸಹೋದರರು ಅವಳಿ ಸಹೋದರಿಯರನ್ನು ಒಂದೇ ದಿನ, ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾರೆ. ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Written by - Puttaraj K Alur | Last Updated : Dec 7, 2022, 03:05 PM IST
  • ಪಶ್ಚಿಮ ಬಂಗಳಾದ ಬುರ್ದ್ವಾನ್‍ನಲ್ಲಿ ನಡೆಯಿತು ವಿಶೇಷ ಮದುವೆ
  • ಅವಳಿ ಸಹೋದರಿಯರನ್ನು ಮದುವೆಯಾದ ಅವಳಿ ಸಹೋದರರು
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ ಮದುವೆ ಸುದ್ದಿ
Viral News: ಅವಳಿ ಸಹೋದರಿಯರನ್ನು ಮದುವೆಯಾದ ಅವಳಿ ಸಹೋದರರು! title=
Twins Marriage

ನವದೆಹಲಿ: ಅವಳಿ ಸಹೋದರಿಯರು ಒಬ್ಬನನ್ನೇ ಮದುವೆಯಾಗಿರೋ ಸುದ್ದಿಯನ್ನು ನೀವು ಕೇಳಿರುತ್ತೀರಿ. ಅದೇ ರೀತಿ ಅವಳಿ ಸಹೋದರಿಯರು ಅವಳಿ ಸಹೋದರರನ್ನು ಮದುವೆಯಾಗಿರೋ ಸುದ್ದಿ ಕೇಳಿದ್ದೀರಾ..? ಪಶ್ಚಿಮ ಬಂಗಾಳದ ಅವಳಿ ಸಹೋದರಿಯರು ಅವಳಿ ಸಹೋದರರನ್ನು ಮದುವೆಯಾಗಿದ್ದಾರೆ. ಇವರ ಮದುವೆ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

 ಲವ Weds ಅರ್ಪಿತಾ, ಕುಶ Weds ಪರ್ಮಿತಾ

ಬುರ್ದ್ವಾನ್‍ನಲ್ಲಿ ವಿಚಿತ್ರ ಮದುವೆ ನಡೆದಿದೆ. ಅವಳಿ ಸಹೋದರಿಯರಾದ ಅರ್ಪಿತಾ ಮತ್ತು ಪರ್ಮಿತಾ ಅವರು ಅವಳಿ ಸಹೋದರರಾದ ಲವ ಪಕ್ರೆ ಮತ್ತು ಕುಶ ಪಕ್ರೆ ಅವರನ್ನು ಒಂದೇ ದಿನ, ಒಂದೇ ಮುಹೂರ್ತ ಮತ್ತು ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾರೆ. ಇದೀಗ ಈ ಸುದ್ದಿ ಇಂಟರ್ನೆಟ್ ಲೋಕದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ಮದುವೆ ಕಂಡು ನೆಟಿಜನ್‌ಗಳನ್ನು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಇದು ತೋಳವೋ? ನರಿಯೋ? ಜಗತ್ತನ್ನೇ ಗೊಂದಲಕ್ಕೀಡು ಮಾಡಿದ ಪ್ರಾಣಿ ಯಾವುದಯ್ಯಾ ಇದು?

ಅವಳಿ ಸಹೋದರರನ್ನು ಮದುವೆಯಾಗಿರುವ ಬಗ್ಗೆ ಮಾತನಾಡಿರುವ ಅವಳಿ ಸಹೋದರಿಯರಾದ ಅರ್ಪಿತಾ ಮತ್ತು ಪರ್ಮಿತಾ, ‘ನಾವಿಬ್ಬರೂ ಅಕ್ಕ-ತಂಗಿ ಒಟ್ಟಿಗೆ ಬೆಳೆದವರು. ಹೀಗಾಗಿ ಒಂದೇ ಮನೆಗೆ ಸೊಸೆಯಾಗಿ ಹೋಗಬೇಕೆಂದು ಆಸೆಪಟ್ಟೆವು. ಈ ಬಗ್ಗೆ ನಾವು ನಮ್ಮ ಪೋಷಕರಿಗೆ ಹೇಳಿದಾಗ, ಅವರು ನಮಗೆ ಹೊಂದುವ ವರರನ್ನು ಹುಡುಕಲು ಪ್ರಾರಂಭಿಸಿದರು. ಕಾಕತಾಳೀಯವೆಂಬಂತೆ ನಾವು ಅವಳಿ ಸಹೋದರರನ್ನೇ ಮದುವೆಯಾದೆವು’ ಎಂದು ಹೇಳಿದ್ದಾರೆ.

ಇದು ದೇವರ ನೀಡಿದ ವರ

ಅರ್ಪಿತಾ ಮತ್ತು ಪರ್ಮಿತಾರಿಗೆ ಅವಳಿ ಸಹೋದರರು ಸಿಕ್ಕಿದ್ದು ದೇವರೇ ನೀಡಿದ ವರ. ಬರೀ ಸಿನಿಮಾದಲ್ಲಿ ಮಾತ್ರ ಅವಳಿ ಸಹೋದರರು ಅವಳಿ ಸಹೋದರಿಯರನ್ನು ಮದುವೆಯಾಗುವುದನ್ನು ನೋಡಿದ್ದೇವು. ಆದರೆ ನಮ್ಮ ಮಕ್ಕಳ ಜೀವನದಲ್ಲಿಯೂ ಇದು ಸಂಭವಿಸಿದೆ. ಇದಕ್ಕೆ ಕಾರಣ ದೇವರು. ದೇವರೇ ನಮ್ಮ ಮಕ್ಕಳಿಗೆ ಅವಳಿ ಸಹೋದರರನ್ನು ಹುಡುಕಿಕೊಟ್ಟಿದ್ದಾನೆಂದು ಅರ್ಪಿತಾ ಮತ್ತು ಪರ್ಮಿತಾರ ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ: Funny Video : ಟಾಯ್ಲೆಟ್ ಸೀಟ್ ಮೇಲೆ ನಿಂತು ರೀಲ್ಸ್‌! ಮುಂದೇನಾಯ್ತು ನೋಡಿ ಎದ್ದುಬಿದ್ದು ನಗ್ತೀರಾ

ಲವ ಮತ್ತು ಕುಶ ಕುರ್ಮುನ್ ಗ್ರಾಮದವರು. ಅರ್ಪಿತಾ ಮತ್ತು ಪರ್ಮಿತಾರಿಗೆ ಸೂಕ್ತ ವರರನ್ನು ಹುಡುಕುತ್ತಾ ಹೋದ ಪೋಕಷರಿಗೆ ಕೊನೆಗೂ ಅವಳಿ ಸಹೋದರರೇ ಸಿಕ್ಕರು. ಡಿಸೆಂಬರ್ 5ರ ಶುಭ ಮುಹೂರ್ತ ನೋಡಿ ಈ 2 ಜೋಡಿಗಳ ವಿವಾಹವನ್ನು ಒಂದೇ ಮಂಟಪದಲ್ಲಿ ಮಾಡಲಾಯಿತು. ವಿಶೇಷ ಅಂದ್ರೆ ಲವ-ಕುಶ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಾರಂತೆ. ದೇವರ ದಯೆಯಿಂದಲೇ ನಾವು ಬಯಸಿದಂತೆ ಮದುವೆಯಾಯಿತು ಎಂದು ಲವ-ಕುಶನ ಪೋಷಕರು ಸಹ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News