ಡಬಲ್ ಡೆಕ್ಕರ್ ಸೈಕಲ್ ಮೇಲೆ ದೊಡಪ್ಪನ ಸವಾರಿ, 'ಮೇಲೆ ಕುಂತೆ, ಕೆಳಗ್ ಹ್ಯಾಂಗ್ ಇಳಿತೀಯಾ ಚಾಚಾ?' ಪ್ರಶ್ನಿಸಿದ ನೆಟ್ಟಿಗರು

Trending Video: ಇದುವರೆಗೆ  ನೀವು ಡಬಲ್ ಡೆಕ್ಕರ್ ಬಸ್ ನೋಡಿರಬಹುದು.  ಆದರೆ ಡಬಲ್ ಡೆಕ್ಕರ್ ಬೈಸಿಕಲ್ ಎಂದಾದರೂ ನೋಡಿದ್ದೀರಾ. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಸೈಕಲ್ ಮೇಲೊಂದು ಸೈಕಲ್ ಇಟ್ಟು ಅದನ್ನು ಚಲಾಯಿಸುತ್ತಿರುವುದನ್ನು ನೀವು ನೋಡಬಹುದು. (Viral News In Kannada)

Written by - Nitin Tabib | Last Updated : Nov 26, 2023, 04:18 PM IST
  • ವೈರಲ್ ಆಗುತ್ತಿರುವ ಈ ವಿಡಿಯೋಗೇ ಜನ ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
  • ಇಂತಹ ಸೈಕಲ್ ತಯಾರಿಸುವ ಬಗ್ಗೆ ಜನರಿಗೂ ತಿಳಿಯಬೇಕು.
  • ಈ ಸೈಕಲ್‌ನಲ್ಲಿ ಅಟ್ಲಾಸ್‌ನ ಚೌಕಟ್ಟನ್ನು ಕತ್ತರಿಸಿ ಸಾಮಾನ್ಯ ಸೈಕಲ್‌ಗೆ ಜೋಡಿಸಲಾಗಿದೆ.
ಡಬಲ್ ಡೆಕ್ಕರ್ ಸೈಕಲ್ ಮೇಲೆ ದೊಡಪ್ಪನ ಸವಾರಿ, 'ಮೇಲೆ ಕುಂತೆ, ಕೆಳಗ್ ಹ್ಯಾಂಗ್ ಇಳಿತೀಯಾ ಚಾಚಾ?' ಪ್ರಶ್ನಿಸಿದ ನೆಟ್ಟಿಗರು title=

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಯಾವಾಗ ಯಾವ ಸಂಗತಿ ವೈರಲ್ ಆಗುತ್ತದೆ ಎಂಬುದು ಹೇಳುವುದು ಸ್ವಲ್ಪ ಕಷ್ಟ ಸಾಧ್ಯದ ಕೆಲಸ. ಅನೇಕ ಬಾರಿ ಚಿತ್ರ ವಿಚಿತ್ರ ದೇಸೀ ಜುಗಾಡ್ ಅನ್ನು ಜನರು ಸಾಕಷ್ಟು ಇಷ್ಟಪಡುತ್ತಾರೆ. ಕೆಲವರು ಕಾರಿನಿಂದ ಹೇಳಿಕ್ಯಾಪ್ಟರ್ ತಯಾರಿಸಿದರೆ, ಕೆಲವರು ಇಟ್ಟಿಗೆಗಳ ಸಹಾಯದಿಂದ ಕೂಲರ್ ತಯಾರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಾಡಿರುವ ವಿಚಿತ್ರ ಸ್ಟಂಟ್ ನೋಡಿ ಎಲ್ಲರೂ ಅಚ್ಚರಿ ಪಡುತ್ತಿದ್ದಾರೆ. ವೀಡಿಯೊದಲ್ಲಿ, ವೃದ್ಧರೊಬ್ಬರು ರಸ್ತೆಯಲ್ಲಿ ಬೈಸಿಕಲ್ ಸವಾರಿ ಮಾಡುತ್ತಿರುವುದನ್ನು ನೀವು ನೋಡಬಹುದು. ಆದರೆ ಈ ಸೈಕಲ್ ಮಾಮೂಲಿ ಸೈಕಲ್ ಅಲ್ಲ. ಇದು ಡಬಲ್ ಡೆಕ್ಕರ್ ಸೈಕರ್.  ವೀಡಿಯೋ ನೋಡಿದವರಿಗೆ ಈ ಸೈಕಲ್ ಹೇಗೆ ತಯಾರಾಗಿದೆ ಅಂತ ಆಶ್ಚರ್ಯವಾಗುತ್ತಿದೆ. ಈತ ಹೇಗೆ ಸೈಕಲ್ ತುಳಿದು ಅದನ್ನು ಓಡಿಸುತ್ತಿದ್ದಾನೆ ಅಂತ ಜನ ಕೂಡ ಆಶ್ಚರ್ಯ ಪಡುತ್ತಿದ್ದಾರೆ ಈ ವ್ಯಕ್ತಿ ಇಷ್ಟೊಂದು ವಿಚಿತ್ರ ಸೈಕಲ್ ಓಡಿಸೋದು ಹೇಗೆ? ಎಂದು ಪ್ರಶ್ನಿಸುತ್ತಿದ್ದಾರೆ (Viral News In Kannada)

ಇದನ್ನೂ ಓದಿ-ರೈಲಿನಲ್ಲಿ ಅಶ್ಲೀಲ ಸನ್ನೆಗಳನ್ನು ಮಾಡುತ್ತಿದ್ದ ವ್ಯಕ್ತಿಗೆ ಚಪ್ಪಲಿಯಿಂದ ಮಂಗಳಾರತಿ ಎತ್ತಿದ ಅಕ್ಕ!

ಇದುವರೆಗೆ ನೀವು ಡಬಲ್ ಡೆಕ್ಕರ್ ಬಸ್ ನೋಡಿರಬಹುದಿ. ಆದರೆ ಡಬಲ್ ಡೆಕ್ಕರ್ ಬೈಸಿಕಲ್ ಎಂದಾದರೂ ನೋಡಿದ್ದೀರಾ? ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಒಂದರ ಮೇಲೊಂದರೆಂತೆ ಇರುವ ಬೈಸಿಕಲ್ ಅನ್ನು ಓಡಿಸುತ್ತಿದ್ದಾರೆ. ಆದ್ದರಿಂದ ನೀವು ಇದನ್ನು ಡಬಲ್ ಡೆಕ್ಕರ್ ಬೈಸಿಕಲ್ ಎಂದೂ ಕೂಡ ಕರೆಯಬಹುದು. ವೀಡಿಯೊದಲ್ಲಿ, ವಯಸ್ಸಾದ ವ್ಯಕ್ತಿಯೊಬ್ಬರು ಡಬಲ್ ಡೆಕ್ಕರ್ ಸೈಕಲ್‌ನಲ್ಲಿ ಸವಾರಿ ಮಾಡುತ್ತಿರುವುದನ್ನು ತೋರಿಸಲಾಗಿದೆ. ಸಾಮಾನ್ಯ ಬೈಸಿಕಲ್‌ಗಿಂತ ಎತ್ತರವಾಗಿದ್ದರೂ, ಈ ವ್ಯಕ್ತಿಯು ಈ ಸೈಕಲ್ ಅನ್ನು ಸುಲಭವಾಗಿ ಓಡಿಸುತ್ತಿರುವುದನ್ನು ಕಾಣಬಹುದು. ಆದರೆ ವೀಡಿಯೋ ನೋಡಿದ ನಂತರ ಜನರ ಮನದಲ್ಲಿ ಒಂದೇ ಒಂದು ಪ್ರಶ್ನೆ ಮೂಡಿದ್ದು ಅಜ್ಜ ಈ ಸೈಕಲ್‌ನಿಂದ ಹೇಗೆ ಇಳಿಯುತ್ತಾರೆ? ಎಂಬುದು.

ಇದನ್ನೂ ಓದಿ- ಪಾಕ್ ವೀಸಾ ಕಚೇರಿಯ ಟಿವಿಯಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರ ಪ್ರಸಾರ.. ವಿಡಿಯೋ ವೈರಲ್!

ತಮಾಷೆಯಿಂದ ಕೂಡಿದ ಜನರ ಪ್ರತಿಕ್ರಿಯೆ
ವೈರಲ್ ಆಗುತ್ತಿರುವ ಈ ವಿಡಿಯೋಗೇ ಜನ ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಂತಹ ಸೈಕಲ್ ತಯಾರಿಸುವ ಬಗ್ಗೆ ಜನರಿಗೂ ತಿಳಿಯಬೇಕು. ಈ ಸೈಕಲ್‌ನಲ್ಲಿ ಅಟ್ಲಾಸ್‌ನ ಚೌಕಟ್ಟನ್ನು ಕತ್ತರಿಸಿ ಸಾಮಾನ್ಯ ಸೈಕಲ್‌ಗೆ ಜೋಡಿಸಲಾಗಿದೆ. ಈ ವಿಡಿಯೋಗೆ ಸಾಕಷ್ಟು ಮಂದಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, 'ಸಾರ್, ಈ ದೊಡ್ಡಪ್ಪ ಮೇಲೆ ಹೇಗೆ ಹತ್ತಿದ?... ಮನೆಯಲ್ಲಿ ಅದು ಸಾಧ್ಯ.. ರಸ್ತೆಯಲ್ಲಿ ಆಸರೆಯಿಲ್ಲದೆ ಹತ್ತಲು ಸಾಧ್ಯವಿಲ್ಲ..' ಎಂದು ಬರೆದುಕೊಂಡರೆ, ಮತ್ತೊಬ್ಬ ಬಳಕೆದಾರರು 'ಸಾರ್.. ಅದೆಲ್ಲಾ ಸರಿ ಆದರೆ ಈ ದೊಡಪ್ಪ ಈಗ ಕೆಳಗೆ ಹೆಂಗೆ ಇಳಿಯುತ್ತಾರೆ?' ಎಂದು ಪ್ರಶ್ನಿಸಿದ್ದಾರೆ. 

ಇಲ್ಲಿದೆ ವಿಡಿಯೋ ನೋಡಿ-

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News