ಪುಷ್ಪಾ ವಿಲನ್‌ ಹಲ್‌ಚಲ್‌ ಫೋಟೋಸ್‌ ವೈರಲ್‌..! 39ರಲ್ಲೂ ಸಖತ್‌ ಹಾಟ್‌ ಅಂದ್ರು ನೆಟ್ಟಿಗರು

Anasuya Bharadwaj : ಕಿರುತೆರೆಯಲ್ಲಿ ಆ್ಯಂಕರ್ ಆಗಿ ಮಿಂಚಿದ್ದ ಅನಸೂಯಾ ಈಗ ಸಿನಿರಂಗದಲ್ಲಿ ಸಖತ್‌ ಬ್ಯುಸಿ. ದಿನದಿಂದ ದಿನಕ್ಕೆ ಕ್ರೇಜಿ ನಟಿಯಾಗಿ ಬದಲಾಗುತ್ತಿರುವ ಅನು, ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ಸಧ್ಯ ಜಾಲಿ ಮೂಡ್‌ನಲ್ಲಿರುವ ಜಲಜಾಕ್ಷಿ ಜಲಕ್ರೀಡೆಯಾಡಿರುವ ಫೋಟೋಸ್‌ ವೈರಲ್‌ ಆಗಿವೆ. 
 

1 /8

ಅನಸೂಯಾ ಬೆಳ್ಳಿತೆರೆಯಲ್ಲಿ ಗ್ಲಾಮರಸ್ ಪಾತ್ರ ಮಾಡದಿದ್ದರೂ ತಮ್ಮ ನಟನೆಯಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಜಬರ್ದಸ್ತ್‌ನಂತಹ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ ಪುಷ್ಪಾ ಸಿನಿಮಾದ ಮೂಲಕ ಮುನ್ನೆಲೆಗೆ ಬಂದರು.   

2 /8

ಸಾಲು ಸಾಲು ಸಿನಿಮಾ ಆಫರ್‌ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅನಸೂಯಾ ಕಿರುತೆರೆಯಿಂದ ದೂರ ಉಳಿದಿದ್ದಾರೆ. ಸದ್ಯ ಪುಷ್ಪ 2 ಚಿತ್ರದಲ್ಲಿ ದಾಕ್ಷಾಯಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.   

3 /8

ಇತ್ತೀಚೆಗೆ ಅನಸೂಯಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಪುಷ್ಪಾ 2 ಚಿತ್ರತಂಡ, ದಾಕ್ಷಾಯಣಿ ಪಾತ್ರದ ಫಸ್ಟ್ ಲುಕ್‌ ಅನ್ನು ಬಿಡುಗಡೆ ಮಾಡಿತು.  

4 /8

ಪುಷ್ಪ 2 ಚಿತ್ರದಲ್ಲಿ ಅನಸೂಯಾ ಅವರ ಪಾತ್ರ ಪ್ರಮುಖವಾಗಿರಲಿದೆ ಎಂಬ ವರದಿಗಳಿವೆ. ಪುಷ್ಪರಾಜ್ ಅವರನ್ನು ಕೊನೆಗಾಣಿಸಲು ಎಲ್ಲರೊಂದಿಗೆ ಸಂಚು ರೂಪಿಸುವ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ ಅನು.   

5 /8

ಅನಸೂಯಾ ಕೊನೆಯದಾಗಿ ಪೆಡಕಾಪು, ವಿಮಾನ ಮತ್ತು ರಜಾಕಾರ್ ಚಿತ್ರಗಳಲ್ಲಿ ನಟಿಸಿದ್ದರು. ಸಿನಿಮಾಗಳಲ್ಲಿ ಅವಕಾಶಗಳು ಹೆಚ್ಚುತ್ತಿರುವ ಕಾರಣ ಜಬರ್ದಸ್ತ್ ತ್ಯಜಿಸಬೇಕಾಯಿತು ಎಂದು ಅನಸೂಯಾ ಸ್ಪಷ್ಟಪಡಿಸಿದ್ದಾರೆ.   

6 /8

ಅನಸೂಯಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಸುಂದರ ಸೀರೆ ಮತ್ತು ಟ್ರೆಂಡಿ ಉಡುಗೆಯಲ್ಲಿ ಫೋಟೋಶೂಟ್‌ ಮಾಡಿಸುತ್ತಿರುತ್ತಾರೆ.   

7 /8

ಇತ್ತೀಚೆಗೆ ಅನಸೂಯಾ ಬೇಸಿಗೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಶಾರ್ಟ್ಸ್ ಧರಿಸಿ ತನ್ನ ಗಂಡ ಮತ್ತು ಮಕ್ಕಳೊಂದಿಗೆ ಬೇಸಿಗೆ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ.   

8 /8

ಸಧ್ಯ ಅನಸೂಯಾ ಕುಟುಂಬದ ಫೊಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..