Health Tips: ಸುಲಭವಾಗಿ ಬೊಜ್ಜು ಕರಗಿಸಲು ಈ ರೀತಿ ಕುಂಬಳಕಾಯಿ ಸೇವಿಸಿ

Amazing Health Benefits Of Pumpkin: ಕುಂಬಳಕಾಯಿ ನಮ್ಮ ದೇಹದ ತೂಕವನ್ನು ಸುಲಭವಾಗಿ ನಷ್ಟ ಮಾಡುತ್ತದೆ. 245-50 ಗ್ರಾಂ ಕುಂಬಳಕಾಯಿಯಲ್ಲಿ ಕೇವಲ 50 ಕ್ಯಾಲೋರಿಗಳು ಲಭ್ಯವಿರುತ್ತದೆ. ಕುಂಬಳಕಾಯಿ ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. 

Written by - Puttaraj K Alur | Last Updated : May 25, 2024, 11:55 AM IST
  • ವಿಟಮಿನ್ ʼAʼ ಸಮೃದ್ಧವಾಗಿರುವ ಕುಂಬಳಕಾಯಿ ದೇಹಕ್ಕೆ ಪ್ರಯೋಜನಕಾರಿ
  • ಕುಂಬಳಕಾಯಿ ಸೇವನೆಯು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಲು ಸಹಕಾರಿ
  • ಕುಂಬಳಕಾಯಿ ಬೀಜಗಳು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ
Health Tips: ಸುಲಭವಾಗಿ ಬೊಜ್ಜು ಕರಗಿಸಲು ಈ ರೀತಿ ಕುಂಬಳಕಾಯಿ ಸೇವಿಸಿ title=
ಕುಂಬಳಕಾಯಿ ಪ್ರಯೋಜನಗಳು

Health Benefits of Pumpkin: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಬಹುತೇಕರು ಒಂದಲ್ಲ ಒಂದು ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಮ್ಮ ಉತ್ತಮ ಆರೋಗ್ಯಕ್ಕೆ ದೈನಂದಿನ ಆಹಾರದಲ್ಲಿ ತರಕಾರಿ ಸೇವಿಸುವುದು ಉತ್ತಮ. ನಿಯಮಿತವಾಗಿ ಕುಂಬಳಕಾಯಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಕುಂಬಳಕಾಯಿ ಪಲ್ಯ, ಗೊಜ್ಜು, ಸಾಂಬಾರ್, ಹಲ್ವಾ ಹೀಗೆ ವಿವಿಧ ರೀತಿಯ ಆಹಾರಗಳನ್ನು ತಯಾರಿಸಿ ಸೇವಿಸಿಬಹುದು.   

ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಕುಂಬಳಕಾಯಿಯನ್ನು ಕೆಲವರು ಮಾತ್ರ ಇಷ್ಟಪಟ್ಟು ತಿನ್ನುತ್ತಾರೆ, ಇನ್ನೂ ಕೆಲವರು ಕುಂಬಳಕಾಯಿ ಕಂಡರೆ ಮೂಗು ಮುರಿಯುತ್ತಾರೆ. ಕುಂಬಳಕಾಯಿ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಪ್ರತಿದಿನವೂ ತಿನ್ನಲು ಆರಂಭಿಸುತ್ತೀರಿ. ಇದು ಎಲ್ಲಾ ರೀತಿಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಕುಂಬಳಕಾಯಿ ಅಷ್ಟೇ ಅಲ್ಲ ಅದರ ಸಿಪ್ಪೆ ಹಾಗೂ ಬೀಜಗಳು ಕೂಡ ಪ್ರಯೋಜನಕಾರಿಯಾಗಿವೆ.  

ಇದನ್ನೂ ಓದಿ: ಆರೋಗ್ಯ ನಿಧಿ ನುಗ್ಗೆ ಸೊಪ್ಪು: ಇದರ ನೀರು ಕುಡಿದರೆ ಸಾಕು ಈ 5 ಕಾಯಿಲೆಗಳಿಂದ ಶಾಶ್ವತ ಪರಿಹಾರ ಸಿಗುತ್ತೆ

ಕುಂಬಳಕಾಯಿ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಟಮಿನ್ ʼAʼ ಸಮೃದ್ಧವಾಗಿರುವ ಕುಂಬಳಕಾಯಿ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಸಾಮಾನ್ಯವಾಗಿ ಕುಂಬಳಕಾಯಿ ಬೇಯಿಸಿ ತಿನ್ನುವುದರಿಂದ ಸಾಕಷ್ಟು ಲಾಭವಿದೆ. ತೂಕ ಇಳಿಕೆಗೂ ಇದು ಸಹಕಾರಿಯಾಗಿದೆ. ಆದರೆ ಕುಂಬಳಕಾಯಿಯನ್ನು ಎಂದಿಗೂ ಫ್ರೈ ಮಾಡಿ ತಿನ್ನಬಾರದು, ಒಂದು ವೇಳೆ ಈ ತಪ್ಪನ್ನು ಮಾಡಿದರೆ ತೂಕ ಇಳಿಕೆ ಬದಲು ದೇಹದ ತೂಕ ಹೆಚ್ಚಾಗುತ್ತದೆ.

ಕುಂಬಳಕಾಯಿ ನಮ್ಮ ದೇಹದ ತೂಕವನ್ನು ಸುಲಭವಾಗಿ ನಷ್ಟ ಮಾಡುತ್ತದೆ. 245-50 ಗ್ರಾಂ ಕುಂಬಳಕಾಯಿಯಲ್ಲಿ ಕೇವಲ 50 ಕ್ಯಾಲೋರಿಗಳು ಲಭ್ಯವಿರುತ್ತದೆ. ಕುಂಬಳಕಾಯಿ ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. ಕುಂಬಳಕಾಯಿ ಬೀಜಗಳು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಕ್ಕಳು ಮತ್ತು ವಯಸ್ಕರು ಇದನ್ನು ನಿಯಮಿತವಾಗಿ ಸೇವಿಸಬೇಕು.

ಇದನ್ನೂ ಓದಿ: ಮೊಸರಿಗೆ ಇದನ್ನು ಬೆರೆಸಿ ಉಜ್ಜಿದರೆ.. ಹಲ್ಲಿನ ಹಳದಿ ಕಲೆ 10 ನಿಮಿಷದಲ್ಲಿ ಮಾಯವಾಗಿ, ಮುತ್ತಿನಂತೆ ಹೊಳೆಯುವುದು !

ಇದರ ಬೀಜಗಳಲ್ಲಿ ಮೆಗ್ನೀಸಿಯಮ್, ಜೀವಸತ್ವಗಳು ಮತ್ತು ಸತುವು ಸಮೃದ್ಧವಾಗಿದೆ. ಕುಂಬಳಕಾಯಿ ಬೀಜಗಳು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ. ಇದರಲ್ಲಿ ಅಗತ್ಯವಾದ ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಇದು ಮೆದುಳು ಮತ್ತು ಕಣ್ಣಿನ ಆರೋಗ್ಯಕ್ಕೆ ಕೂಡ ಪ್ರಯೋಜನಕಾರಿ. ಹೀಗಾಗಿ ಪ್ರತಿದಿನ ಕುಂಬಳಕಾಯಿ ಸೇವಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಉತ್ತಮ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News