ಪ್ರಾಣವನ್ನೇ ಪಣಕ್ಕಿಟ್ಟು ನದಿ ದಾಟಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು..! ವಿದೇಶದಲ್ಲಿ ಅಲ್ಲ.. ನಮ್ಮಲ್ಲೇ ಈ ಸ್ಥಿತಿ.. ವಿಡಿಯೋ ವೈರಲ್‌..

Viral News : ದೇಶ ಅಭಿವೃತ್ತಿ ಪಥದತ್ತ ಸಾಗುತ್ತಿರುವ ಹೊತ್ತಿನಲ್ಲಿ ಇನ್ನೂ ನಮ್ಮಲ್ಲಿ ಅನೇಕ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಅದೇ ಹಳ್ಳಿಯೊಂದರ ಮಕ್ಕಳು ಶಾಲೆಗೆ ಹೋಗಲು ಅತ್ಯಂತ ಅಪಾಯಕಾರಿ ರೀತಿಯಲ್ಲಿ ನದಿ ದಾಟಬೇಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ.. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

Written by - Krishna N K | Last Updated : Jan 25, 2025, 06:53 PM IST
    • ನಮ್ಮ ದೇಶ ಅಭಿವೃತ್ತಿ ಪಥದತ್ತ ಸಾಗುತ್ತಿದೆ
    • ಇಂದಿಗೂ ಅನೇಕ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ.
    • ಪ್ರತಿದಿನ ಹಲವಾರು ರೀತಿಯ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.
ಪ್ರಾಣವನ್ನೇ ಪಣಕ್ಕಿಟ್ಟು ನದಿ ದಾಟಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು..! ವಿದೇಶದಲ್ಲಿ ಅಲ್ಲ.. ನಮ್ಮಲ್ಲೇ ಈ ಸ್ಥಿತಿ.. ವಿಡಿಯೋ ವೈರಲ್‌.. title=

India devops show 2025 : ಪ್ರತಿದಿನ ಹಲವಾರು ರೀತಿಯ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಕೆಲವು ವೀಡಿಯೊಗಳು ಸಾಹಸ ಮತ್ತು ಕಲೆಯ ಬಗ್ಗೆ ಮಾಹಿತಿ ನೀಡುತ್ತವೆ.. ಇನ್ನೂ ಕೆಲವು ವೀಡಿಯೊಗಳು ನೈಜ ಘಟನೆಗಳನ್ನು ಆಧರಿಸಿರುತ್ತವೆ... ಈ ಹೆಚ್ಚಾಗಿ ನೈಜ ಘಟನೆಯ ವಿಡಿಯೋಗಳು ಅಂತರ್ಜಾಲದಲ್ಲಿ ಹೆಚ್ಚು ವೈರಲ್ ಆಗುತ್ತವೆ..

ಸದ್ಯ ಕೆಲ ಶಾಲಾ ಬಾಲಕಿಯರು ಶಾಲೆಗೆ ತೆರಳಲು ಅಪಾಯಕಾರಿ ನದಿ ದಾಟುತ್ತಿರುವ ವಿಡಿಯೋ ಒಂದು ಭಾರೀ ಆಘಾತವನ್ನುಂಟು ಮಾಡಿದೆ. 2025ರಲ್ಲೂ ಇಂತಹ ಪರಿಸ್ಥಿತಿ ದೇಶದಲ್ಲಿ ಇದೆಯೇ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ವೈರಲ್ ವೀಡಿಯೊದ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ..

ಇದನ್ನೂ ಓದಿ:ಅಣ್ಣನ ಶವದ ಮುಂದೆ ಸಹೋದರಿಯ ರೀಲ್ಸ್‌..! ಇದೆಂಥಾ ಹುಚ್ಚಾಟ ಗುರು.. ವಿಡಿಯೋ ವೈರಲ್‌

ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಉತ್ತರಾಖಂಡದ ಮುನ್ಸಿಯಾರಿ ಜಿಲ್ಲೆಯ ಕೂಮನ್ ಪ್ರದೇಶಕ್ಕೆ ಸಂಬಂಧಿಸಿದೆ. ಈ ಭಾಗದಲ್ಲಿ ಹಲವು ವರ್ಷಗಳಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೆಲ್ಲರೂ ಹೀಗೆಯೇ ಸಂಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ. ಭಾರತವು ತಂತ್ರಜ್ಞಾನದ ವಿಷಯದಲ್ಲಿ ವಿಶ್ವದ ಇತರ ದೇಶಗಳಿಗೆ ಸರಿಸಮಾನವಾಗಿ ಪ್ರಗತಿ ಹೊಂದುತ್ತಿರುವಾಗ, ಶಾಲೆಗೆ ಹೋಗಲು ಈ ಹಳ್ಳಿಯ ವಿದ್ಯಾರ್ಥಿಗಳು ಪಡುತ್ತಿರುವ ಕಷ್ಟ ನೋಡಿ ನೆಟ್ಟಿಗರು ಬೇಸರಗೊಂಡಿದ್ದಾರೆ..

ವೈರಲ್ ವೀಡಿಯೊದಲ್ಲಿ ಇಬ್ಬರು ಶಾಲಾ ಬಾಲಕಿಯರು ಜಿಪ್ ಲೈನ್ ಸೇತುವೆಯನ್ನು ಬಳಸಿಕೊಂಡು ನದಿಯನ್ನು ದಾಟುತ್ತಿರುವ ದೃಶ್ಯವಿದೆ. ಸ್ವಲ್ಪ ಯಾಮಾರಿದರೂ ನದಿ ಪಾಲಾಗಬೇಕಾಗುತ್ತದೆ.. ಈ ಕುರಿತು ವಿಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ 2025ರಲ್ಲಿ ಭಾರತದ ಹಳ್ಳಿಯೊಂದರ ಸ್ಥಿತಿ ಹೀಗಿದೆ ಅಂತ ವಿವರಣೆ ನೀಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News