ಮುಟ್ಟಿದೊಡನೆ ಬಿದ್ದು ಬಿದ್ದು ನಗುವ ಹಾವು ನೋಡಿದ್ದಿರಾ ? ಇಲ್ಲಿದೆ ನೋಡಿ ವಿಡಿಯೋ

Laughing Snake video : ನೆಲದ ಮೇಲೆ ತನ್ನ ಪಾಡಿಗೆ ಹರಿದಾಡಿಕೊಂಡು ಹೋಗುತ್ತಿರುವ ಹಾವನ್ನು ಕಾಣಬಹುದು.  ವ್ಯಕ್ತಿ ಹಾವನ್ನು ಮುಟ್ಟುತ್ತಿದ್ದಂತೆಯೇ ಕಚಕುಳಿ ಇಟ್ಟಂತೆ ಹಾವು ನಗಲು ಆರಂಭಿಸುತ್ತದೆ.   

Written by - Ranjitha R K | Last Updated : Jun 1, 2023, 11:01 AM IST
  • ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
  • ನಿಜ ಜೀವನದಲ್ಲಿ ನೋಡಲಾಗದ ಅನೇಕ ವಿಷಯಗಳನ್ನು ನೋಡಬಹುದು.
  • ಕೆಲವೊಂದು ವಿಡಿಯೋಗಳನ್ನು ನೋಡುವಾಗ ಆಶ್ಚರ್ಯವಾಗುತ್ತದೆ.
ಮುಟ್ಟಿದೊಡನೆ ಬಿದ್ದು ಬಿದ್ದು ನಗುವ ಹಾವು ನೋಡಿದ್ದಿರಾ ? ಇಲ್ಲಿದೆ  ನೋಡಿ ವಿಡಿಯೋ  title=

Laughing Snake video : ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿವಿಧ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಒತ್ತಡದ ಬದುಕಿನ ಮಧ್ಯೆ ಒತ್ತಡವನ್ನು ಮರೆತು ನಗಲು ಇದು ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ, ಹಾವುಗಳ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಇಂಟರ್ನೆಟ್ ಪ್ರಪಂಚ ಅಂದರೆ ಅದು ವೈಚಿತ್ರ್ಯಗಳ ಆಗರ. ಇಲ್ಲಿ ನಾವು ನಿಜ ಜೀವನದಲ್ಲಿ ನೋಡಲಾಗದ ಅನೇಕ ವಿಷಯಗಳನ್ನು ನೋಡಬಹುದು. ಕೆಲವೊಂದು ವಿಡಿಯೋಗಳನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಜೊತೆಗೆ ನಂಬುವುದು ಕೂಡಾ ಅಸಾಧ್ಯ ಎನ್ನುವಂತಿರುತ್ತದೆ. ಆದರೆ, ಈ ಪ್ರಕೃತಿಯೇ ಹಾಗೆ. ಹಲವಾರು ವಿಚಿತ್ರಗಳನ್ನು ತನ್ನ ಮಡಿಲಲ್ಲಿ ಅಡಗಿಸಿಟ್ಟು ಕೊಂಡಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಈ ವಿಚಿತ್ರಗಳನ್ನು ನಾವು ಕೂಡಾ ಹತ್ತಿರದಿಂದ ನೋಡುವುದು ಸಾಧ್ಯವಾಗುತ್ತದೆ. ಹೀಗೆ ನಾವು ನೋಡುವ ಅನೇಕ ಸಂಗತಿಗಳು ಕೆಲವೊಮ್ಮೆ ನಮ್ಮನ್ನು ನಗುವಂತೆ ಮಾಡುತ್ತದೆ, ಕೆಲವೊಮ್ಮೆ ಯೋಚನೆಗೆ ದೂಡುತ್ತದೆ.

ಹಾವಿಗೂ ಕಚಕುಳಿಯಾಗುತ್ತದೆ : 
ಸದ್ಯ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಹಾವಿಗೆ ಸಂಬಂಧಪಟ್ಟದ್ದು. ಈ ಹಾವಿನ ವಿಡಿಯೋ ನೋಡುವಾಗ ಸಂತಸವೂ ಆಗುತ್ತದೆ ಆಶ್ಚರ್ಯವೂ ಆಗುತ್ತದೆ. ನಗು ಕೂಡಾ ಬರಿಸುತ್ತದೆ.  ಹೌದು ಇಲ್ಲಿ ನೆಲದ ಮೇಲೆ ತನ್ನ ಪಾಡಿಗೆ ಹರಿದಾಡಿಕೊಂಡು ಹೋಗುತ್ತಿರುವ ಹಾವನ್ನು ಕಾಣಬಹುದು. ಈ ಹಾವು ಹರಿದಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹಾವಿನ ಹೊಟ್ಟೆಯ ಭಾಗವನ್ನು ಮುಟ್ಟುತ್ತಾರೆ. ಆ ವ್ಯಕ್ತಿ ಹಾವನ್ನು ಮುಟ್ಟುತ್ತಿದ್ದಂತೆಯೇ ಕಚಕುಳಿ ಇಟ್ಟಂತೆ ಹಾವು ಪ್ರತಿಕ್ರಿಯಿಸುತ್ತದೆ. ಹಾವಿನ ಈ ಪ್ರತಿಕ್ರಿಯೆ ಹಾವು ಬಾಯಿ ತೆರೆದು ಜೋರಾಗಿ ನಗುವಂತೆ ಕಾಣಿಸುತ್ತದೆ. 

ಇದನ್ನೂ ಓದಿ :   Viral Video: ಹಾವಿಗೆ ಕಿಸ್‌ ಕೊಡಲು ಹೋದ ಯುವತಿ.. ಗಬಕ್ಕನೇ ತುಟಿಗೇ ಬಾಯಿ ಹಾಕಿ ಕಚ್ಚಿದ ವಿಷಸರ್ಪ!

ಹಾವಿನ ನಗುವಿನ ಚಂದ : 
ಹಾವು ಈ ರೀತಿ ನಗುವ ವೀಡಿಯೊವನ್ನು ಇಲ್ಲಿಯವರೆಗೆ ವಿವಿಧ  ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿದೆ. ಇದನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಕೂಡಾ ಮಾಡಿದ್ದಾರೆ. ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ಇಲ್ಲಿ ಕಾಣ ಸಿಗುವ ಹಾವಿನ ನಗು ವೀಕ್ಷಿಸಲು ನಿಜಕ್ಕೂ ಖುಷಿಯಾಗುತ್ತದೆ. ಆದರೆ ಈ ಹಾವು ಯಾವುದು. ಇದು ವಿಷಕಾರಿಯೇ ಎನ್ನುವ ಬಗ್ಗೆ ಮಾಹಿತಿ ಇಲ್ಲ. 

 

ಇದನ್ನೂ ಓದಿ :   Viral Video: ಟ್ರಾಫಿಕ್ ಸಿಗ್ನಲ್‌ನಲ್ಲೇ ಸ್ನಾನ ಮಾಡಿದ ವ್ಯಕ್ತಿ, ಬೆಟ್ ಗೆಲ್ಲಲು ಏನೆಲ್ಲಾ ಮಾಡಿದ ನೋಡಿ!

ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ :  
ಈ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಕೀಪ್ ಆನ್ ಪ್ಲಾಂಟಿಂಗ್ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಅನೇಕರು ತಮಾಷೆಯಾಗಿ ಕಾಮೆಂಟ್‌ಗಳನ್ನು ಕೂಡಾ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಮುಟ್ಟಿದ ಕೂಡಲೇ ಸತ್ತು ಬಿದ್ದಂತೆ ನಾಟಕವಾಡುವ ವಿಡಿಯೋ ಕೂಡಾ ಭಾರೀ ಪ್ರಮಾಣದಲ್ಲಿ ವೈರಲ್ ಆಗಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News