ಕನ್ನಡ ಹಾಡಿಗೆ ಟೀಮ್ ಇಂಡಿಯಾ ಸದಸ್ಯರೊಂದಿಗೆ ಹೆಜ್ಜೆ ಹಾಕಿದ ಶುಬ್ಮನ್ ಗಿಲ್..!

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಸರಣಿಯ ನ್ಯೂಜಿಲೆಂಡ್ ವಿರುದ್ಧದ ಭಾರತದ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಕೇವಲ 149 ಎಸೆತಗಳಲ್ಲಿ 208 ರನ್‌ ಗಳನ್ನು ಗಳಿಸುವ ಮೂಲಕ ವೇಗವಾಗಿ 1000 ರನ್ ಗಳಿಸಿದ ಭಾರತದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Written by - Zee Kannada News Desk | Last Updated : Jan 20, 2023, 12:54 AM IST
  • ಈ ಹಾಡು ಗಿಲ್ ಅವರ ಭರ್ಜರಿ ದ್ವಿಶತಕದ ಬೆನ್ನಲ್ಲೇ ಸಾಕಷ್ಟು ಸದ್ದು ಮಾಡುತ್ತಿದ್ದು,
  • ಕನ್ನಡ ಹಾಡಿಗೆ ಅವರ ನೃತ್ಯ ಹೊಂದುವ ಹಾಗೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
  • ವೈರಲ್ ಆಗಿರುವ ಈ ವಿಡಿಯೋ ನೋಡಿರುವ ಅಭಿಮಾನಿಗಳಂತೂ ಪೂರ್ತಿ ಫಿದಾ ಆಗಿದ್ದಾರೆ
ಕನ್ನಡ ಹಾಡಿಗೆ ಟೀಮ್ ಇಂಡಿಯಾ ಸದಸ್ಯರೊಂದಿಗೆ ಹೆಜ್ಜೆ ಹಾಕಿದ ಶುಬ್ಮನ್ ಗಿಲ್..! title=
screengrab

ಹೈದರಾಬಾದ್: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಸರಣಿಯ ನ್ಯೂಜಿಲೆಂಡ್ ವಿರುದ್ಧದ ಭಾರತದ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಕೇವಲ 149 ಎಸೆತಗಳಲ್ಲಿ 208 ರನ್‌ ಗಳನ್ನು ಗಳಿಸುವ ಮೂಲಕ ವೇಗವಾಗಿ 1000 ರನ್ ಗಳಿಸಿದ ಭಾರತದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದೆ ಬೆನ್ನಲ್ಲೇ ಈಗ ಸಾಮಾಜಿಕ ಮಾಧ್ಯಮದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶುಭ್ಮನ್ ಗಿಲ್ ಎಸ್.ಜಾನಕಿ ಹಾಡಿರುವ ಕನ್ನಡ ಹಾಡಿಗೆ ಸಹ ಆಟಗಾರರೊಂದಿಗೆ ಸ್ಟೆಪ್ ಹಾಕಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿದೆ.

ಈ ಹಾಡು ಗಿಲ್ ಅವರ ಭರ್ಜರಿ ದ್ವಿಶತಕದ ಬೆನ್ನಲ್ಲೇ ಸಾಕಷ್ಟು ಸದ್ದು ಮಾಡುತ್ತಿದ್ದು, ಅಷ್ಟಕ್ಕೂ ಈ ವಿಡಿಯೋದಲ್ಲಿ ಕನ್ನಡ ಹಾಡಿಗೆ ಅವರ ನೃತ್ಯ ಹೊಂದುವ ಹಾಗೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.ಆದರೆ ಗಿಲ್ ಅವರ ಸ್ಪೋಟಕ ಬ್ಯಾಟಿಂಗ್ ನಂತರ ವೈರಲ್ ಆಗಿರುವ ಈ ವಿಡಿಯೋ ನೋಡಿರುವ ಅಭಿಮಾನಿಗಳಂತೂ ಪೂರ್ತಿ ಫಿದಾ ಆಗಿದ್ದಾರೆ,ಬಹುತೇಕರು ಅವರ ಡ್ಯಾನ್ಸ್ ಕನ್ನಡ ಹಾಡಿಗೆ ಸರಿಯಾಗಿ ಹೊಂದಿರುವಂತೆ ನೈಜವಾಗಿ ಬಂದಿರುವುದರಿಂದ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಶುಭ್ಮನ್ ಗಿಲ್ 23 ವಯಸ್ಸಿನಲ್ಲಿ ಅತಿ ಹೆಚ್ಚು ಏಕದಿನ ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ(13) ಸಚಿನ್ ತೆಂಡೂಲ್ಕರ್ (11) ಶತಕಗಳ ಮೂಲಕ ಅಗ್ರಸ್ಥಾನದಲ್ಲಿದ್ದರೆ ಶುಬ್ಮನ್ ಗಿಲ್ (3) ಶತಕಗಳನ್ನು ಗಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News