ಇನ್ನೊಂದು ತಿಂಗಳಲ್ಲಿ ನನ್ನಪ್ಪ ಮತ್ತೆ ನಗುತ್ತಾರೆ : ವೈರಲ್ ಆಗುತ್ತಿದೆ ರೋಹಿತ್ ಪುತ್ರಿಯ ವಿಡಿಯೋ

Rohit Sharma's Daughter Viral Video: ರೋಹಿತ್ ಶರ್ಮಾ ಇದುವರೆಗೆ  ಯಾವುದೇ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿಲ್ಲ. ಇದೀಗ ಅವರ ಮಗಳು ಸಮೀರಾಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Written by - Ranjitha R K | Last Updated : Nov 24, 2023, 02:47 PM IST
  • ರೋಹಿತ್ ಮುದ್ದಾದ ಮಗಳ ವಿಡಿಯೋ ವೈರಲ್
  • ತಂದೆ ರೋಹಿತ್ ಬಗ್ಗೆ ಪುತ್ರಿಯ ಮಾತು
  • ನನ್ನಪ್ಪ ಮತ್ತೆ ನಗುತ್ತಾರೆ ಎನ್ನುವ ವಿಡಿಯೋ
ಇನ್ನೊಂದು ತಿಂಗಳಲ್ಲಿ ನನ್ನಪ್ಪ ಮತ್ತೆ ನಗುತ್ತಾರೆ : ವೈರಲ್ ಆಗುತ್ತಿದೆ ರೋಹಿತ್ ಪುತ್ರಿಯ ವಿಡಿಯೋ  title=

Rohit Sharma's Daughter Viral Video : ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಎದುರು ಸೋಲಿನ ನಂತರ ಟೀಮ್ ಇಂಡಿಯಾ ನಾಯಕ  ಅತಿಯಾದ ನೋವಿನಲ್ಲಿದ್ದುದು ಇಡೀ ವಿಶ್ವವೇ ನೋಡಿದೆ. ಮೈದಾನದಲ್ಲಿಯೇ ಅವರ ಕಣ್ಣಲ್ಲಿ ನೀರು ಕಾಣಿಸಿಕೊಂಡಿತ್ತು. ತಂಡದ ಇತರ ಅನೇಕ ಆಟಗಾರರು ಸಾಮಾಜಿಕ ಮಾಧ್ಯಮದಲ್ಲಿ ಒಂದಲ್ಲ ಒಂದು ವಿಚಾರವಾಗಿ ಪೋಸ್ಟ್ ಮಾಡಿದ್ದಾರೆ. ಆದರೆ ರೋಹಿತ್ ಶರ್ಮಾ ಇದುವರೆಗೆ  ಯಾವುದೇ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿಲ್ಲ. ಇದೀಗ ಅವರ ಮಗಳು ಸಮೀರಾಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ರೋಹಿತ್ ಮುದ್ದಾದ ಮಗಳ ವಿಡಿಯೋ ವೈರಲ್ : 
2023 ರ ವಿಶ್ವಕಪ್ ನಂತರ ರೋಹಿತ್ ಶರ್ಮಾ ಅವರ ಮಗಳು ಸಮೈರಾ ಶರ್ಮಾ ಅವರ ಮುದ್ದಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಮೈರಾ ತನ್ನ ತಂದೆ ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ್ದಾಳೆ. ಈ ವೀಡಿಯೊ ವಿಶ್ವಕಪ್ ಫೈನಲ್‌ನ ನಂತರದ ವೀಡಿಯೊವಲ್ಲ. ಇದು ಬಹಳ ಹಿಂದಿನ ವಿಡಿಯೋ. ಕೋವಿಡ್ ಸಮಯದಲ್ಲಿ ರೋಹಿತ್ ಶರ್ಮಾ ಪಾಸಿಟಿವ್ ಆದಾಗಿನ ಸಂದರ್ಭದ ವಿಡಿಯೋವಿದು.  ಆದರೆ ಈಗ ಈ ಪುಟ್ಟ ಮಗುವಿನ ಮಾತನ್ನು ವಿಶ್ವಕಪ್ 2023 ರ ಫೈನಲ್‌ಗೆ ಲಿಂಕ್ ಮಾಡುವ ಮೂಲಕ  ಶೇರ್ ಮಾಡಿಕೊಳ್ಳಲಾಗುತ್ತಿದೆ. 

ಇದನ್ನೂ ಓದಿ : Navdeep Saini: ಆರ್‌ಸಿಬಿ ವೇಗಿ ನವದೀಪ್ ಲವ್‌ ಮ್ಯಾರೇಜ್‌..! ಬಹುಕಾಲದ ಪ್ರಿಯತಮೆ ಯಾರು ಗೊತ್ತಾ?

 ಅಪ್ಪ ಮತ್ತೆ ನಗುತ್ತಾರೆ : 
ಈ ವಿಡಿಯೋದಲ್ಲಿ ಸಮೈರಾ ತನ್ನ ತಾಯಿ ರಿತಿಕಾ ಸಜ್ದೇಹ್ ಜೊತೆ ಕಾಣಿಸಿಕೊಂಡಿದ್ದಾಳೆ. ರೋಹಿತ್ ಹೇಗಿದ್ದಾರೆ ಎಂದು ಸಮೈರಾ ಬಳಿ ಕೇಳಿದಾಗ  ಅವರು ರೂಂ ನಲ್ಲಿದ್ದಾರೆ ಎಂದು ಉತ್ತರಿಸುತ್ತಾಳೆ. ಅವರು ಆರಾಮಾಗಿದ್ದರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಮೈರಾ ಅವರಿಗೆ ಪಾಸಿಟಿವ್ ಆಗಿದೆ. ಆದರೆ ಇನ್ನೊಂದು ತಿಂಗಳಲ್ಲಿ ಮತ್ತೆ ನಗುತ್ತಾರೆ ಎಂದು ಉತ್ತರಿಸಿದ್ದಾಳೆ.  ಪುತ್ರಿಯ ಮಾತು ಕೇಳಿ ತಾಯಿ ರಿತಿಕಾ ಕೂಡಾ ನಗುವುದನ್ನು ಗಮನಿಸಬಹುದು. 

 

ಇದನ್ನೂ ಓದಿ : ಭಾರತದ ಟಿ20 ಕ್ರಿಕೆಟ್’ಗೆ ಸಿಕ್ಕಾಯ್ತು ಪರ್ಫೆಕ್ಟ್ ಮ್ಯಾಚ್ ವಿನ್ನರ್! ಈತ ಎಂಟ್ರಿಯಾಗ್ತಿದ್ದಂತೆ ಸಿಕ್ಸರ್ ಸುರಿಮಳೆ ಗ್ಯಾರಂಟಿ

ಫೈನಲ್‌ನಲ್ಲಿ  ಸೋತ ಟೀಂ ಇಂಡಿಯಾ : 
ಇಡೀ ವಿಶ್ವಕಪ್ 2023 ರಲ್ಲಿ, ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತು.  ಸೆಮಿಫೈನಲ್‌ನಲ್ಲಿಯೂ ನ್ಯೂಜಿಲೆಂಡ್‌ನಂತಹ ತಂಡವನ್ನು ಸೋಲಿಸಿತ್ತು. ಆದರೆ  ಫೈನಲ್ ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ 6 ವಿಕೆಟ್‌ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ 10 ವರ್ಷಗಳ ನಂತರ ಐಸಿಸಿ ಟ್ರೋಫಿ ಮತ್ತು 12 ವರ್ಷಗಳ ನಂತರ ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನಗೊಂಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News