Ram Charan: ಕಡಲ ತೀರದ ಹತ್ತಿರ ಪತ್ನಿ ಮಗಳ ಜೊತೆ ಎಂಜಾಯ್‌ ಮಾಡುತ್ತಿರುವ ಗ್ಲೋಬಲ್‌ ಸ್ಟಾರ್: ವೈರಲ್‌ ವಿಡಿಯೋ!

Ram Charan At Vizag: ಮೆಗಾ ಪವರ್‌ ಸ್ಟಾರ್‌ ರಾಮ್ ಚರಣ್ ಶೂಟಿಂಗ್‌ ಮಧ್ಯೆ ಬ್ಯುಸಿಯಾಗಿದ್ದರೂ ವೈಜಾಗ್‌ಗೆ ತಮ್ಮ ಪತ್ನಿ ಹಾಗೂ ಮಗಳನ್ನು ಕರೆತಂದು ಕಡಲ ತೀರದ ಬಳಿ ಎಂಜಾಯ್‌ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.  

Written by - Zee Kannada News Desk | Last Updated : Mar 20, 2024, 08:26 PM IST
  • ನಟ ರಾಮ್‌ ಚರಣ್‌ ತಮ್ಮ ಮುದ್ದಾದ ಕುಟುಂಬದ ಜೊತೆಗೆ ಬೀಚ್‌ ಹತ್ತಿರ ಮೋಜು-ಮಸ್ತಿ ಚೆನ್ನಾಗಿ ಮಾಡಿದ್ದಾರೆ.
  • ಕಳೆದ ವರ್ಷ ಈ ಜೋಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ಕ್ಲಿಂಕಾರ ಎಂದು ಹೆಸರಿಟ್ಟಿದ್ದಾರೆ.
  • ಉಪಸನಾ ಶೇರ್‌ ಮಾಡಿಕೊಂಡಿರುವ ವಿಡಿಯೋಗೆ ಏಳು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿದ್ದು, ಇದನ್ನು ನೋಡಿದ ನೆಟ್ಟಿಗರು “ಮುದ್ದಾದ ಕುಟುಂಬ” ಎಂದು ಕಮೆಂಟ್‌ ಹಾಕಿದ್ದಾರೆ.
Ram Charan: ಕಡಲ ತೀರದ ಹತ್ತಿರ ಪತ್ನಿ ಮಗಳ ಜೊತೆ ಎಂಜಾಯ್‌ ಮಾಡುತ್ತಿರುವ ಗ್ಲೋಬಲ್‌ ಸ್ಟಾರ್: ವೈರಲ್‌ ವಿಡಿಯೋ! title=

Ram Charan At Vizag With Family: ಟಾಲಿವುಡ್‌ ಮೆಗಾಸ್ಟಾರ್‌ ಪುತ್ರ ರಾಮ್ ಚರಣ್ ಸಿನಿಮಾ ಶೂಟಿಂಗ್‌  ಕೆಲಸಗಳ ಮಧ್ಯೆಯೂ ಫ್ಯಾಮಿಲಿ ಟೈಮ್ ಕೊಟ್ಟಿದ್ದಾರೆ. ಈ ನಟ ಬ್ಯುಸಿ ಶೆಡ್ಯೂಲ್‌ ಮಧ್ಯೆಯೇ ಕಡಲ ತೀರದ ಬಳಿ ಪತ್ನಿ ಉಪಾಸನಾ ಮತ್ತು ಮಗಳು ಕ್ಲಿಂಕಾರರೊಂದಿಗೆ ಸಮಯ ಕಳೆದಿದ್ದಾರೆ. ನಟ ರಾಮ್‌ ಚರಣ್‌ ತಮ್ಮ ಮುದ್ದಾದ ಕುಟುಂಬದ ಜೊತೆಗೆ ಬೀಚ್‌ ಹತ್ತಿರ ಮೋಜು-ಮಸ್ತಿ ಚೆನ್ನಾಗಿ ಮಾಡಿದ್ದಾರೆ. 

ನಟ ರಾಮ್‌ಚರಣ್‌  ಹಾಗೂ ಉಪಾಸನಾ ಜೋಡಿ ಮದುವೆಯಾದ 11 ವರ್ಷಗಳ ನಂತರ ಪೋಷಕರಾಗಿದ್ದಾರೆ. ಕಳೆದ ವರ್ಷ ಈ ಜೋಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ  ಕ್ಲಿಂಕಾರ ಎಂದು ಹೆಸರಿಟ್ಟಿದ್ದಾರೆ. ಈ ದಂಪತಿ ತಮ್ಮ ಪುಟ್ಟ ಮಗಳ ಜೊತೆಗೆ ವೈಜಾಗ್‌ನ ಬೀಚ್‌ ಬಳಿ ತೆರೆಳಿದಾಗ, ತಮ್ಮ ಪುತ್ರಿಗೆ ಬಂಡೆಗಳ ಹತ್ತಿರ ನೀರಿನ ಅಲೆಗಳನ್ನು ತೋರಿಸಿ ಆಕೆಯ ಪಾದಗಳನ್ನು ನೀರಿನಲ್ಲಿ ಒದ್ದೆ ಮಾಡಿಸಿದ್ದಾರೆ.  

 
 
 
 

 
 
 
 
 
 
 
 
 
 
 

A post shared by Upasana Kamineni Konidela (@upasanakaminenikonidela)

ಇದನ್ನೂ ಓದಿ: Priyamani : ಸ್ಯೂಟ್ ನಲ್ಲಿ ಅಣ್ಣಾಬಾಂಡ್ ಹುಡುಗಿ : ಬೋಲ್ಡ್ ಪೋಸ್ ನಲ್ಲಿ ಪಿಯಾಮಣಿ

ರಾಮ್‌ ಚರಣ್‌ ಕಪ್ಪು ಕಲ್ಲುಗಳ ಮೇಲೆ ವೈಟ್‌ ಟೀ ಶರ್ಟ್ ಧರಿಸಿದಂತೆ, ಮಡದಿ ಉಪಾಸನಾ ಜೊತೆಗೆ ಮಗಳು ಕ್ಲಿಂಕಾರ ಕೂಡ ಬಿಳಿ ಸೂಟ್ ಧರಿಸಿದ್ದರು. ಉಪಾಸನಾ  ಕೈಯಲ್ಲಿ ನಾಯಿಮರಿ ಹಿಡಿದುಕೊಂಡು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋವನ್ನು ಉಪಸನಾ ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಮಾಡಿ, ಕ್ಯಾಪ್ಶನ್‌ನಲ್ಲಿ ʻ ವೈಜಾಗ್ ನಮ್ಮ ಮನ ಗೆದ್ದಿದೆ ʼ ಎಂದು ಬರೆದುಕೊಂಡಿದ್ದಾರೆ.

ಉಪಸನಾ ಶೇರ್‌ ಮಾಡಿಕೊಂಡಿರುವ ವಿಡಿಯೋಗೆ ಏಳು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿದ್ದು, ಇದನ್ನು ನೋಡಿದ ನೆಟ್ಟಿಗರು “ಮುದ್ದಾದ ಕುಟುಂಬ” ಎಂದು ಕಮೆಂಟ್‌ ಹಾಕಿದ್ದಾರೆ. ಮತ್ತೆ ಇನ್ನೊಬ್ಬರು  ವೈಜಾಗ್ ನಿಮ್ಮ ಮನ ಗೆದ್ದರೆ, ನೀವು ನಮ್ಮ ಹೃದಯವನ್ನು ಕದ್ದಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಎಲ್ಲರೂ ಸಿನಿಮಾ ಶೂಟಿಂಗ್ ಮುಗಿಸಿ ಪ್ರವಾಸಕ್ಕೆ ಹೋದರೆ, ಇಲ್ಲಿ ರಾಮ್‌ಚರಣ್‌ ಮಾತ್ರ ತನ್ನ ಕುಟುಂಬವನ್ನು ಶೂಟಿಂಗ್ ಶೆಡ್ಯೂಲ್ ಗೆ ಕರೆತಂದು ಬೇಸಿಗೆ ಟ್ರಿಪ್ ಮಜಾ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

  

 

Trending News