ಹೆಂಡತಿ ಮೇಲೆ ಅನುಮಾನದಿಂದ ಭೀಕರ ಹಲ್ಲೆ..! ಅಡ್ಡ ಬಂದ ಅತ್ತೆಯ ಮೇಲೂ ತಲ್ವಾರ ಬೀಸಿದ್ದ ಪಾಪಿ ಅಂದರ್‌

ಅವನಿಗೆ ಹೆಂಡತಿ ಮೇಲೆ ಅನುಮಾನ ಬಂದುಬಿಟ್ಟಿತ್ತು. ಇದರಿಂದ ಆತ ರಾಕ್ಷಸನಾಗಿಬಿಟ್ಟಿದ್ದ. ಸೀದಾ ಅತ್ತೆ ಮನೆಗೆ ಬಂದವನು ಮಾಡಿದ್ದು ಮಾತ್ರ ಎಲ್ಲರು ಬೆಚ್ಚಿಬೀಳಿಸುವಂತಹ ಕೃತ್ಯ. ಆತನ ಅಟ್ಟಹಾಸಕ್ಕೆ ಈಡೀ ಏರಿಯಾದ ಜನರೇ ದಂಗಾಗಿದ್ರು. ಹಾಗಾದ್ರೆ ಅಲ್ಲಿ ಆಗಿದ್ದೇನೂ ತೋರಿಸ್ತಿವಿ ನೋಡಿ.

Written by - Krishna N K | Last Updated : Jan 19, 2025, 04:41 PM IST
    • ಶೀಲ ಶಂಕಿಸಿ ಹೆಂಡತಿ ಮುಗಿಸಲು ಪ್ಲಾನ್ ಮಾಡಿದ ಗಂಡ
    • ಕಿರಿಕ್ ಶುರು ಮಾಡಿದ ಪಾಪಿ ಪತಿ ಘನಘೋರ ಕೃತ್ಯವೆಸಗಿಬಿಟ್ಟಿದ್ದಾನೆ.
    • ಪತ್ನಿ, ಅತ್ತೆ ಮೇಲೆ ತಲ್ವಾರ್ ಬೀಸಿದವನು ಅಂದರ್
ಹೆಂಡತಿ ಮೇಲೆ ಅನುಮಾನದಿಂದ ಭೀಕರ ಹಲ್ಲೆ..! ಅಡ್ಡ ಬಂದ ಅತ್ತೆಯ ಮೇಲೂ ತಲ್ವಾರ ಬೀಸಿದ್ದ ಪಾಪಿ ಅಂದರ್‌ title=

ಬೆಂಗಳೂರು: ಗಂಡ- ಹೆಂಡತಿ ನಡುವೆ ಹೊಂದಾಣಿಕೆ ಇದ್ರೆ ಮಾತ್ರ ಸಂಸಾರ ಚೆನ್ನಾಗಿರುತ್ತೆ. ಅನುಮಾನ ಎಂಬ ಭೂತ ಒಬ್ಬರ ತಲೆಲೆ ಬಂದ್ರೆ ಆ ಸಂಸಾರ ಮೂರಾಬಟ್ಟೆಯಾಗುತ್ತೆ. ಸದ್ಯ ಇಲ್ಲಿ ಆಗಿರೋದು ಅದೇ. 10 ವರ್ಷದ ಹಿಂದೆ ಮದುವೆಯಾಗಿದ್ದ ಹೆಂಡತಿ ಮೇಲೆ ಗಂಡನಿಗೆ ಅನುಮಾನ ಶುರುವಾಗಿತ್ತು.‌ ನೀನು ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದೀಯಾ ಅಂತಾ ಕಿರಿಕ್ ಶುರು ಮಾಡಿದ್ದ. ಇದರಿಂದ ಇದ್ದ ಇಬ್ಬರು ಮಕ್ಕಳಲ್ಲಿ ಒಬ್ಬ ಮಗಳನ್ನು ಕರೆದುಕೊಂಡು ಆಕೆ ತಾಯಿ ಮನೆ ಸೇರಿದ್ದಳು. ಆದರೆ ಆತ ಮತ್ತೆ ಕಿರಿಕ್ ಶುರು ಮಾಡಿದ ಪಾಪಿ ಪತಿ ಘನಘೋರ ಕೃತ್ಯವೆಸಗಿಬಿಟ್ಟಿದ್ದಾನೆ. 

ಈ ಫೋಟೋದಲ್ಲಿ ಒಣಗಿದ ಮೆಣಸಿಕಾಯಿ ತರ ಕಾಣ್ತಿರುವ  ಇವನ ಹೆಸ್ರು ಆಸೀಫ್ ಅಂತಾ. ಈ ರೀತಿ ಆಸ್ಪತ್ರೆ ಬೆಡ್ ಮೇಲೆ ನರಳಾಡುತ್ತಿರುವವಳ ಹೆಸರು ಹೀನಾ ಕೌಸರ್, ಈಕೆಯ ಪಕ್ಕದ ಬೆಡ್ ನಲ್ಲಿರೋದು ಹೀನಾ ತಾಯಿ ಫರ್ವೀನ್ ತಾಜ್. ಇವರ ಈ ಗತಿಗೆ ಕಾರಣ ಇದೇ ಆಸೀಫ್. ಗಂಡನ ಕಾಟಕ್ಕೆ ಬೇಸತ್ತು ತವರು ಮನೆ ಸೇರಿದ್ದ ಹೀನಾ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಸೇರಿಕೊಂಡಿದ್ಲು. ತನ್ನ ಸ್ನೇಹಿತರಿಗೆ ಸೋಷಿಯಲ್ ಮಿಡೀಯಾದಲ್ಲಿ ಮೆಸೇಜ್ ಮಾಡುತಿದ್ಲು.ಇದು ಆಸೀಫ್ ಗೆ ಗೊತ್ತಾಗಿ ಉರಿದುಹೋಗಿದ್ದ. 

ಇದನ್ನೂ ಓದಿ:ಬೆಂಗಳೂರು ನಗರದಲ್ಲಿ ವರ್ಷದ ಮೊದಲ ಮಳೆಯ ಸಿಂಚನ

ನನ್ನ ಹೆಂಡತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ಆಕೆಯನ್ನು ಮುಗಿಸಬೇಕು ಅಂತಾ ತಲ್ವಾರ್ ಹಿಡಿದು ಕುಮಾರಸ್ವಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅತ್ತೆ ಮನೆಗೆ ಬಂದಿದ್ದ. ಬಂದವನೇ ಹಿಂದೆಮುಂದೆ ನೋಡದೆಯೇ ತನ್ನ ಹೆಂಡತಿ ತಲೆಗೆ ತಲ್ವಾರ್ ಬೀಸಿಬಿಟ್ಟಿದ್ದ. ಅಷ್ಟೊತ್ತಿಗಾಗಲೇ ಹೀನಾಳ ತಾಯಿ ಫರ್ವೀನ್ ಸಹ ಕೆಲಸ ಮುಗಿಸಿ ಮನೆಗೆ ಬಂದಿದ್ದಳು. ಅಳಿಯನ ಆರ್ಭಟ ನೋಡಿ ಬೆಚ್ಚಿಬಿದ್ದಿದ್ಲು.‌ ಮಗಳನ್ನು ಕಾಪಾಡಬೇಕು ಅಂತಾ ಅಳಿಯನನ್ನು ತಡೆಯಲು ಮುಂದಾಗಿದ್ದಳು. ಆದ್ರೆ ಪಾಪಿ ಆಸೀಫ್ ಆಕೆಯ ಮೇಲೂ ತಲ್ವಾರ್ ಬೀಸಿ ರಕ್ತ ಹರಿಸಿಬಿಟ್ಟಿದ್ದ

ಆಸೀಫ್ ತಲ್ವಾರ್ ಬೀಸಿದ್ದರಿಂದ ತಾಯಿ ಮಗಳ ಚೀರಾಟ ಜೋರಾಗಿತ್ತು. ಹೀಗಾಗಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದ ಕೂಡಲೇ ತಲ್ವಾರ್ ಬಿಟ್ಟು ಆಸೀಫ್ ಎಸ್ಕೇಪ್ ಆಗಿದ್ದ. ಇನ್ನೂ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮಗಳನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದಿದ್ದಾರೆ. ಘಟನೆಯಲ್ಲಿ ಹೀನಾ ಹಾಗೂ ಫರ್ವಿನ್ ಗೆ ಗಂಭೀರ ಗಾಯಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ರಾಕ್ಷಸಿ ಕೃತ್ಯ ಮೆರೆದ ಆಸೀಫ್ ನನ್ನು ಜೈಲಿಗಟ್ಟಿದ್ದಾರೆ. ಅದೆನೇ ಇರಲಿ, ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳಿದ್ರು. ಆದರೆ ಅನುಮಾನವನ್ನು ತಲೆಗೇರಿಸಿಕೊಂಡ ಪಾಪಿ ಆಸೀಫ್ ಸುಂದರ ಸಂಸಾರ ಹಾಳು ಮಾಡಿಕೊಂಡು ಜೈಲು ಸೇರಿದ್ದು ದುರಂತವೇ ಸರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News