Viral Video : ಮದುವೆ ಮಂಟಪದಲ್ಲಿ ಸ್ನೇಹಿತ ಈ ರೀತಿ ನಡೆದುಕೊಂಡರೂ ಮೂಕನಾದ ವರ! ಪೇಚಿಗೆ ಸಿಲುಕಿದ ವಧು

Funny Wedding Prank :ಮದುವೆಗೆ ಸಂಬಂಧಿಸಿದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಿಸಲಾಗುತ್ತದೆ. ಇದೇ ಕಾರಣಕ್ಕೆ ಇಂಥ ವಿಡಿಯೋಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಪ್‌ಲೋಡ್ ಕೂಡಾ ಮಾಡಲಾಗುತ್ತದೆ .

Written by - Ranjitha R K | Last Updated : Apr 6, 2023, 03:31 PM IST
  • ಇಂಟರ್ನೆಟ್ ಪ್ರಪಂಚ ಹಲವಾರು ಅದ್ಭುತಗಳನ್ನು ಒಳಗೊಂಡಿದೆ.
  • ಮದುವೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಿಸಲಾಗುತ್ತದೆ.
  • ಈ ವಿಡಿಯೋಗಳಿಂದ ಟೆನ್ಶನ್ ನಿಂದ ಕೊಂಚವಾದರೂ ರಿಲೀಫ್ ನೀಡುತ್ತದೆ.
Viral Video : ಮದುವೆ ಮಂಟಪದಲ್ಲಿ ಸ್ನೇಹಿತ ಈ ರೀತಿ ನಡೆದುಕೊಂಡರೂ ಮೂಕನಾದ ವರ! ಪೇಚಿಗೆ ಸಿಲುಕಿದ ವಧು   title=

 Funny Wedding Prank : ಇಂಟರ್ನೆಟ್ ಪ್ರಪಂಚ  ಹಲವಾರು ಅದ್ಭುತಗಳನ್ನು ಒಳಗೊಂಡಿದೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ಅನೇಕ ರೀತಿಯ  ಸಂದೇಶಗಳನ್ನು ರವಾನಿಸುತ್ತವೆ. ಕೆಲವೊಂದು ಉಪಯುಕ್ತ ಮಾಹಿತಿ ನೀಡಿದರೆ, ಇನ್ನು ಕೆಲವು ಮನರಂಜನೆಗೆ ದಾರಿ ಮಾಡಿಕೊಡುತ್ತದೆ. ಅಂತರ್ಜಾಲದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ ಟೆನ್ಶನ್ ನಿಂದ ಕೊಂಚವಾದರೂ ರಿಲೀಫ್ ನೀಡುತ್ತದೆ. ಇನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮದುವೆ ವಿಡಿಯೋಗಳಿಗಂತೂ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. 

ಮದುವೆಗೆ ಸಂಬಂಧಿಸಿದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಿಸಲಾಗುತ್ತದೆ. ಇದೇ ಕಾರಣಕ್ಕೆ ಇಂಥ ವಿಡಿಯೋಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಪ್‌ಲೋಡ್ ಕೂಡಾ ಮಾಡಲಾಗುತ್ತದೆ .ಈಗಂತೂ ಅಂಥದ್ದೊಂದು ವಿಚಿತ್ರವಾಗಿರುವ ವಿಡಿಯೋ ಇಂಟರ್‌ನೆಟ್‌ನಲ್ಲಿ ಶೇರ್ ಆಗಿದೆ. ವರನ ಸ್ನೇಹಿತರ ಈ ವಿಚಿತ್ರ ವರ್ತನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇವರ ಈ ನಡವಳಿಕೆಯಿಂದ ವಧು ಕೂಡಾ ತಬ್ಬಿಬ್ಬಾಗಿದ್ದಾಳೆ. 

ಇದನ್ನೂ ಓದಿ : Viral Video : ಓದೋ ವಯಸ್ಸಲ್ಲಿ ತರಗತಿಯಲ್ಲಿ ಈ ವಿದ್ಯಾರ್ಥಿಗಳು ಮಾಡ್ತಿರೋ ಕೆಲಸ ನೋಡಿ.!

ಸ್ನೇಹಿತರ ಗುಂಪಿನಿಂದ ಪ್ರಾಂಕ್  :
ಕೆಲವು ಸೆಕೆಂಡುಗಳ ಈ ವೀಡಿಯೊದಲ್ಲಿ , ವಧು-ವರರು ಮದುವೆಯ  ಮಂಟಪದಲ್ಲಿ ನಿಂತಿರುವುದನ್ನು ಕಾಣಬಹುದು. ಅವರನ್ನು ಅಭಿನಂದಿಸಲು ಒಬ್ಬೊಬ್ಬರಾಗಿ ವೇದಿಕೆಗೆ ಬರುತ್ತಿರುವುದನ್ನು ಕೂಡಾ ಗಮನಿಸಬಹುದು. ಆದರೆ ಅಭಿನಂದಿಸುವ ಸಲುವಾಗಿ ವೇದಿಕೆಗೆ ಬಂದ ವರನ ಸ್ನೇಹಿತ ವಿಚಿತ್ರವಾಗಿ ವರ್ತಿಸುತ್ತಾನೆ. ಸ್ನೇಹಿತರ ಈ ಕೃತ್ಯದಿಂದ ವಧು ಕೋಪಗೊಂಡಿರುವುದು ಆಕೆಯ ಮುಖದಿಂದಲೇ ತಿಳಿಯುತ್ತದೆ. 

 

ಇದನ್ನೂ ಓದಿ : Trending Video: ಗಾಳಿಯಲ್ಲಿ ನೇತಾಡಿ ಖತರ್ನಾಕ್ ರೀತಿಯಲ್ಲಿ ಕಾಗೆಯ ಬೇಟೆಯಾಡಿದ ಹಾವು.. ವಿಡಿಯೋ ನೋಡಿ!

ಮದುವೆಯ ವಿಡಿಯೋ ವೈರಲ್ :
ವಧು-ವರರೊಂದಿಗೆ ಸ್ನೇಹಿತರು ತಮಾಷೆ ಮಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿದೆ. ಈ ವಿಡಿಯೋವನ್ನು ಇಂಡಿಯನ್ ವೆಡ್ಡಿಂಗ್ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಾಕಷ್ಟು ಸಂಖ್ಯೆಯ ವ್ಯೂವ್ಸ್ ಪಡೆದುಕೊಂಡಿದೆ. ನೆಟ್ಟಿಗರು ಕೂಡಾ ಇದಕ್ಕೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News