ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್

ಈ ಏರಿಕೆಯು ಸಗಟು ಬೆಲೆ ಸೂಚ್ಯಂಕಕ್ಕೆ (WPI)ಗೆ ಸಂಬಂಧಿಸಿದ್ದಾಗಿದ್ದು, ಇದು  ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು.ಆದರೆ,ಲೋಕಸಭೆ ಚುನಾವಣೆಯ ಕಾರಣ ಈ ಏರಿಕೆಯನ್ನು ತಡೆಹಿಡಿಯಲಾಗಿತ್ತು.

Written by - Ranjitha R K | Last Updated : Jun 3, 2024, 11:32 AM IST
  • ಇಂದಿನಿಂದ ಟೋಲ್ ಶುಲ್ಕ ಹೆಚ್ಚಳ
  • ನಾಲ್ಕು ಟೋಲ್ ಗಳಲ್ಲಿ ಶುಲ್ಕ ಹೆಚ್ಚಳ
  • ಎಷ್ಟು ಹೆಚ್ಚಾಗಿದೆ ಟೋಲ್
ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್  title=

ಬೆಂಗಳೂರು : ಜೂನ್ 3ರಿಂದ ಅಂದರೆ ಇಂದಿನಿಂದ ವಾಹನ ಬಳಕೆದಾರರು ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಮತ್ತು ತುಮಕೂರು-ಹೊನ್ನಾವರ ಹೆದ್ದಾರಿಗಳು ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR)ನ ಹೊಸಕೋಟೆ-ದೇವನಹಳ್ಳಿ ವಿಭಾಗವನ್ನು ಬಳಸಬೇಕಾದರೆ 3%-25% ಹೆಚ್ಚು  ಟೋಲ್ ಪಾವತಿಸಬೇಕಾಗುತ್ತದೆ.  

ಈ ಏರಿಕೆಯು ಸಗಟು ಬೆಲೆ ಸೂಚ್ಯಂಕಕ್ಕೆ (WPI)ಗೆ ಸಂಬಂಧಿಸಿದ್ದಾಗಿದ್ದು, ಇದು  ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು.ಆದರೆ,ಲೋಕಸಭೆ ಚುನಾವಣೆಯ ಕಾರಣ ಈ ಏರಿಕೆಯನ್ನು ತಡೆಹಿಡಿಯಲಾಗಿತ್ತು.ಇದೀಗ ಜಾರಿಗೆ ಬಂದಿರುವ ಹೊಸ ಶುಲ್ಕಗಳು ಮಾರ್ಚ್ 31, 2025ರವರೆಗೆ ಜಾರಿಯಲ್ಲಿರುತ್ತವೆ. 

ಇದನ್ನೂ ಓದಿ : Arecanut Price in Karnataka: ಚಿಗ್ರದುರ್ಗ, ಶಿವಮೊಗ್ಗ & ಸಿದ್ದಾಪುರದಲ್ಲಿ ಅಡಿಕೆ ಧಾರಣೆ

ಟೋಲ್ ಪರಿಷ್ಕರಣೆ ಏಪ್ರಿಲ್ 1, 2024 ರಿಂದ ಜಾರಿಗೆ ಬರಬೇಕಿತ್ತು.ಆದರೆ, ಅದನ್ನು ತಡೆಹಿಡಿಯಲಾಗಿತ್ತು ಎಂದು ಎನ್‌ಎಚ್‌ಎಐನ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ ಬ್ರಹ್ಮಂಕರ್ ತಿಳಿಸಿದ್ದಾರೆ.ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ಶುಲ್ಕವನ್ನು 3% ಹೆಚ್ಚಿಸಿದ್ದರೆ,STRR ಬಳಸುವ ವಾಹನಗಳು 14% ಹೆಚ್ಚು ಪಾವತಿಸಬೇಕಾಗುತ್ತದೆ. 

NHAI ನವೆಂಬರ್ 17, 2023 ರಂದು STRR ನ 39.6-ಕಿಮೀ ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗಕ್ಕೆ ಟೋಲ್ ಸಂಗ್ರಹಿಸಲು ಪ್ರಾರಂಭಿಸಿತು. 

ಎಸ್‌ಟಿಆರ್‌ಆರ್‌ನ ಡಾಬಸ್ ಪೇಟೆ-ದೊಡ್ಡಬಳ್ಳಾಪುರ ವಿಭಾಗದಲ್ಲಿ (42 ಕಿಮೀ) ಟೋಲ್ ಸಂಗ್ರಹ ಜೂನ್ 15 ರ ನಂತರ ಪ್ರಾರಂಭವಾಗಲಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್ ಹೇಳಿದ್ದಾರೆ. ಎನ್‌ಎಚ್‌ಎಐ ಟೋಲ್ ಸಂಗ್ರಹಕ್ಕಾಗಿ ಏಜೆನ್ಸಿಯನ್ನು ಆಯ್ಕೆ ಮಾಡಲಾಗಿದ್ದು,  ಶುಲ್ಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು  ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ : Electric Scooter Offer: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬರೋಬ್ಬರಿ 34 ಸಾವಿರ ರೂ. ಡಿಸ್ಕೌಂಟ್!

ಬೆಂಗಳೂರು-ಮೈಸೂರು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಬಳಸುವ ಕಾರುಗಳು/ವ್ಯಾನ್‌ಗಳು/ಜೀಪ್‌ಗಳು ಇನ್ನು 320ರ ಬದಲು 330 ರೂ. ಪಾವತಿಸಬೇಕಾಗುತ್ತದೆ. 

ಬೆಂಗಳೂರು-ನಿಡಘಟ್ಟ ವಿಭಾಗಕ್ಕೆ 170 ರೂ. ಮತ್ತು ನಿಡಘಟ್ಟ ಮತ್ತು ಮೈಸೂರು ನಡುವೆ 160 ರೂ.ಕಣಿಮಿಣಿಕೆ (ಬೆಂಗಳೂರು ನಗರ), ಶೇಷಗಿರಿಹಳ್ಳಿ (ರಾಮನಗರ) ಮತ್ತು ಗಣಂಗೂರು (ಮಂಡ್ಯ)ದಲ್ಲಿ ಟೋಲ್ ಸಂಗ್ರಹಿಸಲಾಗುವುದು. 

ದೊಡ್ಡಬಳ್ಳಾಪುರ-ಹೊಸಕೋಟೆ :
ದೊಡ್ಡಬಳ್ಳಾಪುರ-ಹೊಸಕೋಟೆ ದೊಡ್ಡಬಳ್ಳಾಪುರ ಬೈಪಾಸ್ ಮತ್ತು ಹೊಸಕೋಟೆ ನಡುವೆ ಕಾರುಗಳು/ವ್ಯಾನ್‌ಗಳು/ಜೀಪ್‌ಗಳಿಗೆ  80 ರೂ (ಏಕ ಪ್ರಯಾಣ),120 ರೂ. (ರಿಟರ್ನ್ ಜರ್ನಿ )ಮತ್ತು  2,720 ರೂ.(ತಿಂಗಳ 50 ಪ್ರಯಾಣಕ್ಕೆ ) ಪಾವತಿಸಬೇಕಾಗುತ್ತದೆ. 

ಲಘು ವಾಣಿಜ್ಯ ವಾಹನಗಳು,ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳು  135 (ಏಕ ಪ್ರಯಾಣ), 200 ರೂ.(ರಿಟರ್ನ್ ಜರ್ನಿ ) ಮತ್ತು 4,395 ರೂ. (ತಿಂಗಳ 50 ಪ್ರಯಾಣಕ್ಕೆ )ಪಾವತಿಸಬೇಕಾಗುತ್ತದೆ. 

ಟ್ರಕ್‌ಗಳು ಮತ್ತು ಬಸ್‌ಗಳು  275 ರೂ.(ಏಕ ಪ್ರಯಾಣ), 415 ರೂ. (ರಿಟರ್ನ್ ಜರ್ನಿ) ಮತ್ತು  9,205ರೂ (ತಿಂಗಳ 50 ಪ್ರಯಾಣಕ್ಕೆ ) ಪಾವತಿಸಬೇಕಾಗುತ್ತದೆ ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯಲ್ಲಿರುವ ವಾಣಿಜ್ಯೇತರ ವಾಹನಗಳು 340 ರೂ.ಗೆ ಮಾಸಿಕ ಪಾಸ್  ಖರೀದಿಸಬಹುದು. 

ಇದನ್ನೂ ಓದಿ :  ಭಾರತದಲ್ಲಿ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಬ್ಯಾನ್..! 

ದೇವನಹಳ್ಳಿ ಬಳಿಯ ನಲ್ಲೂರಿನಲ್ಲಿ ಟೋಲ್ ಸಂಗ್ರಹ :
ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 7 ರ (ಎಪಿ/ಕರ್ನಾಟಕ ಗಡಿ-ದೇವನಹಳ್ಳಿ) 71.45-ಕಿಮೀ ವಿಭಾಗವನ್ನು ಬಳಸಲು ಕಾರುಗಳು/ಜೀಪ್‌ಗಳು/ವ್ಯಾನ್‌ಗಳು/ಲಘು ಮೋಟಾರು ವಾಹನಗಳು  115 ರೂ.(ಏಕ ಪ್ರಯಾಣ) ಮತ್ತು  175 ರೂ.(ರಿಟರ್ನ್ ಜರ್ನಿ)ಪಾವತಿಸಬೇಕಾಗುತ್ತದೆ.ಬಾಗೇಪಲ್ಲಿಯಲ್ಲಿ ಟೋಲ್ ಸಂಗ್ರಹಿಸಲಾಗುವುದು.

ಪ್ರಸ್ತುತ ಶುಲ್ಕ ಕ್ರಮವಾಗಿ 115 ಮತ್ತು 185 ರೂ. NH 206 (ಹಳೆಯ BH ರಸ್ತೆ) ಶಿವಮೊಗ್ಗದ ಮೂಲಕ ತುಮಕೂರು ಮತ್ತು ಹೊನ್ನಾವರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 206 ರ ರಜತಾದ್ರಿಪುರ ಟೋಲ್ ಪ್ಲಾಜಾದಲ್ಲಿ ಕಾರು/ಜೀಪ್/ವ್ಯಾನ್/ಲಘು ಮೋಟಾರು ವಾಹನಗಳು ರೂ 60 (ಏಕ ಪ್ರಯಾಣ) ಮತ್ತು ರೂ 90 (ರಿಟರ್ನ್ ಜರ್ನಿ) ಪಾವತಿಸಬೇಕಾಗುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News