ಹೇ ಹರಿರಾಮ್‌.. ಕ್ಯಾ ಹುವಾ..! ಶಾಲೆಗೆ ಹೋಗುವ ಸಲುವಾಗಿ 13 ವರ್ಷ ಯುವಕನಿಗೆ ಮದುವೆ

13 Year boy engagement : ಮದುವೆಯಾದರೆ ಮಾತ್ರ ಓದುತ್ತೇನೆ ಎಂದ 13 ವರ್ಷದ ಬಾಲಕನಿಗೆ ಆತನ ಪೋಷಕರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿಯನ್ನು ನೋಡಿ ನೆಟ್ಟಿಗರು, ಸಿಂಗಲ್ಸ್‌ ಶಾಕ್‌ ಆಗುತ್ತಿದ್ದಾರೆ.

Written by - Krishna N K | Last Updated : Feb 24, 2024, 05:08 PM IST
  • 13 ವರ್ಷದ ಬಾಲಕನಿಗೆ ಅದ್ಧೂರಿಯಾಗಿ ನಿಶ್ಚಿತಾರ್ಥ
  • ಬಾಲಕನ ಭಾವಿ ಪತ್ನಿ ನೋಡಿ ನೆಟ್ಟಿಗರು ಶಾಕ್‌
  • ಈ ಕುರಿತ ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ ನೋಡಿ
ಹೇ ಹರಿರಾಮ್‌.. ಕ್ಯಾ ಹುವಾ..! ಶಾಲೆಗೆ ಹೋಗುವ ಸಲುವಾಗಿ 13 ವರ್ಷ ಯುವಕನಿಗೆ ಮದುವೆ  title=

Viral news : ಮದುವೆ ವಯಸ್ಸಿಗೆ ಬಂದರೂ ಅನೇಕರಿಗೆ ಹೆಣ್ಣು ಸಿಗುತ್ತಿಲ್ಲ, ಅಂತಹುದರಲ್ಲಿ ಇಲ್ಲೊಬ್ಬ ಬಾಲಕ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಅಲ್ಲದೆ, ಬಾಲಕನ ಭಾವಿ ಪತ್ನಿ ನೋಡಿ ನೆಟ್ಟಿಗರು ಮತ್ತು  ಸಿಂಗಲ್ಸ್‌ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ. ಈ ಕುರಿತ ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ ನೋಡಿ.

ಹೌದು.. ಪಾಕಿಸ್ತಾನದಲ್ಲಿ ನಡೆದ ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 13 ವರ್ಷದ ಬಾಲಕ ತನ್ನ ಪೋಷಕರಿಗೆ ಮದುವೆ ಮಾಡುವಂತೆ ಕಾಟ ಕೊಟ್ಟಿದ್ದಾನೆ. ಅಲ್ಲದೆ, ಮದುವೆ ಮಾಡದಿದ್ರೆ ಶಾಲೆಗೂ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದ ಎನ್ನಲಾಗಿದೆ. ಇದರಿಂದ ರೋಸಿ ಹೋದ ಬಾಲಕನ ಪೋಷಕರು ಆತನಿಗೆ ಅದ್ಧೂರಿಯಾಗಿ ಸುಂದರ ಬಾಲಕಿ ಜೊತೆ ನಿಶ್ಚಿತಾರ್ಥ ಮಾಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Salaam! Pakistan (@salaam_pakistan)

ಇದನ್ನೂ ಓದಿ: ಕರ್ನಾಟಕ ಮತ್ತು ಜಪಾನ್ ಬಾಂಧವ್ಯ ಪ್ರವರ್ಧಮಾನಕ್ಕೆ

ಪಾಕಿಸ್ತಾನದ ಕಾನೂನಿನ ಪ್ರಕಾರ, ಗಂಡುಮಕ್ಕಳ ಮದುವೆಯ ವಯಸ್ಸು 18 ವರ್ಷಗಳು ಮತ್ತು ಹುಡುಗಿಯರಿಗೆ 16 ವರ್ಷ ಇದೆ. ಆದ್ರೆ, ಸಿಂಧ್ ಪ್ರಾಂತ್ಯದಲ್ಲಿ 2013 ರಲ್ಲಿ ಎರಡೂ ಲಿಂಗಗಳ ವಿವಾಹದ ಕನಿಷ್ಠ ವಯಸ್ಸನ್ನು 18 ಕ್ಕೆ ಹೆಚ್ಚಿಸಲು ಕಾನೂನನ್ನು ಅಂಗೀಕರಿಸಿದ್ದರೂ, ದೇಶಾದ್ಯಂತ ಬದಲಾವಣೆಯನ್ನು ಜಾರಿಗೆ ತಂದಿಲ್ಲ. ಇದೀಗ ಈ ಘಟನೆ ದೊಡ್ಡ ಸಂಚಲನ ಮೂಡಿಸಿದೆ. ಪಾಲಕರು ಓದುತ್ತಿದ್ದ ಬಾಲಕನಿಗೆ ನಿಶ್ಚಿತಾರ್ಥ ಮಾಡಿದ್ದು, ಸರಿಯೇ ಅಂತ ನೆಟಿಜನ್ಸ್‌ ಪ್ರಶ್ನಿಸುತ್ತಿದ್ದಾರೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಡುಗಿಯ ಮನೆಯಲ್ಲಿ ಈ ಮದುವೆಗೆ ಒಪ್ಪಿದ್ದು ಅಚ್ಚರಿ ಮೂಡಿಸಿದೆ. ಮಗುವಿನ ತಂದೆಗೆ ಹುಷಾರಿಲ್ಲ.. ಅದಕ್ಕೇ ಹೀಗೆ ಮದುವೆಯಾಗಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ವಯಸ್ಸಾದರೂ ಮದುವೆಯಾದ ಯುವಕರು ಒಳ್ಳೆಯದಾಗ್ಲಿ ಅಂತ ಹಾರೈಸುತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News