Viral Video : ತನ್ನ ಪಾಡಿಗೆ ಮಲಗಿರುವ ನಾಯಿಗೆ ಕಾಟ ಕೊಡುತ್ತಿರುವ ಕೋತಿ !

Viral Video :  ಸಾಮಾನ್ಯವಾಗಿ ನಾವು ನಾಯಿ ಕಚ್ಚುತ್ತದೆ.  ಯಾರಾದಾರೂ ಕಾಟ ಕೊಟ್ಟರೆ ಇನ್ನಿಲ್ಲದಂತೆ ಓಡಿಸಿಕೊಂಡು  ಹೋಗುತ್ತದೆ ಎಂದೆಲ್ಲಾ ಕೇಳಿರುತ್ತವೆ. ಆದರೆ ಇಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಇದಕ್ಕೆ ವಿರುದ್ದವಾಗಿದೆ. 

Written by - Ranjitha R K | Last Updated : Nov 28, 2022, 05:19 PM IST
  • ನಾಯಿ ಮತ್ತು ಕೋತಿಯ ವಿಡಿಯೋ
  • ಮಲಗಿದ್ದ ನಾಯಿಯನ್ನು ಇನ್ನಿಲ್ಲದಂತೆ ಕಾಡುವ ಕೋತಿ
  • ವೈರಲ್ ಆಯಿತು ನಾಯಿ ಮತ್ತು ಕೋತಿಯ ವಿಡಿಯೋ
Viral Video : ತನ್ನ ಪಾಡಿಗೆ ಮಲಗಿರುವ ನಾಯಿಗೆ ಕಾಟ ಕೊಡುತ್ತಿರುವ ಕೋತಿ ! title=
Viral video Dog And Monkey ( Photo instagram)

Viral Video : ಸಾಮಾನ್ಯವಾಗಿ  ತುಂಬಾ ತಂಟೆ, ತೀಟೆ ಮಾಡುವವರನ್ನು ಕಂಡರೆ ಕೋತಿಯಂತೆ ಯಾಕಾಡುತ್ತೀಯಾ ಎಂದು ಗದರುವುದನ್ನು  ನಾವು ಕೇಳಿರುತ್ತೇವೆ. ಇಲ್ಲಿರುವ ವಿಡಿಯೋವನ್ನು ನೋಡಿದರೆ ಕೋತಿ ಯಾಕೆ ಇಷ್ಟೊಂದು ಕೀಟಲೆ ಮಾಡುತ್ತಿದೆ ಎಂದು ಯಾರಿಗಾದರೂ ಅನ್ನಿಸಲೇ ಬೇಕು. ಸಾಮಾನ್ಯವಾಗಿ ನಾವು ನಾಯಿ ಕಚ್ಚುತ್ತದೆ.  ಯಾರಾದಾರೂ ಕಾಟ ಕೊಟ್ಟರೆ ಇನ್ನಿಲ್ಲದಂತೆ ಓಡಿಸಿಕೊಂಡು  ಹೋಗುತ್ತದೆ ಎಂದೆಲ್ಲಾ ಕೇಳಿರುತ್ತವೆ. ಆದರೆ ಇಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಇದಕ್ಕೆ ವಿರುದ್ದವಾಗಿದೆ. 

ಹೌದು  ಎರಡು ನಾಯಿ ಮತ್ತು ಕೋತಿಗೆ ಸಂಬಂಧಪಟ್ಟ ವಿಡಿಯೋವಿದು. ನಾಯಿ ಒಂದು ಅಂಗಡಿಯ  ಮೆಟ್ಟಿಲ ಮೇಲೆ ತನ್ನ ಪಾಡಿಗೆ ಮಲಗಿರುವುದನ್ನು ಇಲ್ಲಿ ಕಾಣಬಹುದು. ಆ ಹೊತ್ತಿಗಾಗಲೇ ಅದೆಲ್ಲಿಂದ ಬಂತೋ ಒಂದು ಮಂಗ. ಮಲಗಿದ್ದ ನಾಯಿಯನ್ನು ಒಂದು ಸ್ಥಳದಲ್ಲಿ ಕೂರಲೂ ಬಿಟ್ಟಿಲ್ಲ, ಮಲಗಲೂ ಬಿಟ್ಟಿಲ್ಲ, ನಿಲ್ಲಲೂ ಬಿಟ್ಟಿಲ್ಲ.

ಇದನ್ನೂ ಓದಿ : Viral Video: ತಲೆ ಮೇಲೆ ಬೈಕ್ ಇಟ್ಟುಕೊಂಡು ಬಸ್ ಹತ್ತಿದ್ದ ಈ ಭೂಪ ‘ಬಾಹುಬಲಿ’ ವಂಶಸ್ಥ ಇರಬೇಕು!!

ಆ  ಮಂಗನಿಗೆ ನಾಯಿ ಕಂಡರೆ ಅದೇಕೆ ಅಷ್ಟು ಸಿಟ್ಟು ಎಂದೇ ತಿಳಿಯುವುದಿಲ್ಲ. ಪದೇ ಪದೇ ಬಂದು ಮಲಗಿರುವ ನಾಯಿಯನ್ನು ಎಳೆದಾಡುತ್ತದೆ, ಗುರಾಯಿಸುತ್ತದೆ.  ನಾಯಿಗೆ ಮಂಗ ಕಾಟ ಕೊಡುತ್ತಿರುವುದನ್ನು ಕಂಡು ಅಲ್ಲೇ ಇದ್ದ ಇನ್ನೊಂದು ನಾಯಿ ಸಹಾಯಕ್ಕೆ ಧಾವಿಸುತ್ತದೆ. ಆದರೆ, ಮಂಗ ಆ ನಾಯಿಯನ್ನು ಕೂಡಾ ಸ್ಥಳದಿಂದ ಓಡಿಸುತ್ತದೆ.

 

ಇದನ್ನೂ ಓದಿ Viral Video: ಪೆಟ್ರೋಲ್ ಹಾಕಿಸಲು ಬಂದ ಮಗನ ಆತುರಕ್ಕೆ ಬಲಿಪಶುವಾಗಿದ್ದು ತಂದೆ!! ವಿಡಿಯೋ ನೋಡಿ

ನಾಯಿಯನ್ನು ಈ ರೀತಿ ಕಾಡುತ್ತಿರುವ ಮಂಗನ ಈ ವಿಡಿಯೋ ಸಾಮಾಜಿಕ ಮಾಧ್ಯಮದ ವಿವಿಧ ಪ್ಲಾಟ್ ಫಾರಂ ಗಳಲ್ಲಿ ಹರಿದಾಡುತ್ತಿದೆ. animals_powers ಎಂಬ ಹೆಸರಿನ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋಗೆ ಬಹಳಷ್ಟು ಮಂದಿ ಲೈಕ್ ಕೂಡಾ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News