ನಾಯಿಗಳನ್ನು ಕೂತಲ್ಲಿ ಕೂರಲು ಬಿಡದ ಮಂಗ ! ನಕ್ಕು ನಗಿಸುವ ವಿಡಿಯೋ ಇದು

Dog Monkey Viral Video :ಕೋತಿಗಳು ಯಾರನ್ನಾದರೂ ಕಾಡಬೇಕು ಎಂದು ಅಂದುಕೊಂಡರೆ ಎದುರಿಗಿರುವವರು ಸಾಕು ಸಾಕಪ್ಪ ಅನ್ನುವವರೆಗೆ ಕಾಡಿ ಬಿಡುತ್ತದೆ. ಈ ವಿಡಿಯೋ ನಮ್ಮ ತುಟಿಯಂಚಿನಲ್ಲಿ ಖಂಡಿತಾ ನಗು ತರಿಸುತ್ತದೆ. 

Written by - Ranjitha R K | Last Updated : Jul 21, 2023, 02:05 PM IST
  • ಈ ಅದ್ಭುತ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ Ban Luy ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
  • ಈ ವೀಡಿಯೊಗೆ ಇದುವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲಾಗಿದೆ
  • ಈ ಬಗ್ಗೆ ನೆಟಿಜನ್‌ಗಳು ನಾನಾ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ನಾಯಿಗಳನ್ನು ಕೂತಲ್ಲಿ ಕೂರಲು ಬಿಡದ ಮಂಗ ! ನಕ್ಕು ನಗಿಸುವ ವಿಡಿಯೋ ಇದು  title=

Dog Monkey Viral Video : ಕೋತಿ ಅತ್ಯಂತ ಬುದ್ದಿವಂತ ಪ್ರಾಣಿ. ಒಮ್ಮೊಮ್ಮೆ ಅದರ ನಡವಳಿಕೆ ಮನುಷ್ಯರನ್ನು ಹೋಲುತ್ತದೆ. ಆದರೆ ಕಪಿ ಚೇಷ್ಟೆ ಎನ್ನುವುದಿದೆಯಲ್ಲ ಅದನ್ನು ಸಹಿಸಿಕೊಳ್ಳುವುದು ಬಹಳ ಕಷ್ಟ.  ಕೋತಿ ಕಾಟ ಕೊಡಲು ಆರಂಭಿಸಿದರೆ ಅದನ್ನು ತಡೆದುಕೊಳ್ಳುವುದು ಬಹಳ ಕಷ್ಟ. ಕೋತಿಗಳು ಯಾರನ್ನಾದರೂ ಕಾಡಬೇಕು ಎಂದು ಅಂದುಕೊಂಡರೆ ಎದುರಿಗಿರುವವರು ಸಾಕು ಸಾಕಪ್ಪ ಅನ್ನುವವರೆಗೆ ಕಾಡಿ ಬಿಡುತ್ತದೆ. 

ಮಂಗಗಳು ಅನೇಕ ಪ್ರಾಣಿಗಳೊಂದಿಗೆ ಕಾದಾಡುವುದನ್ನು ನಾವು ನೋಡಿರುತ್ತೇವೆ. ಅದರಲ್ಲೂ ಕೋತಿ-ನಾಯಿಗಳ ಕಾದಾಟವನ್ನು ಹಲವು ಬಾರಿ ನೋಡಿದ್ದೇವೆ. ಆದರೆ ಒಟ್ಟಿಗೆ ಆಡುವುದು, ತಂಟೆ ಮಾಡುವುದು ಮತ್ತೆ ಜಗಳವಾಡುವುದು ಇಂಥಹ ದೃಶ್ಯ ಬಲು ಅಪರೂಪ. ಇದೀಗ ಇಂಥ ವಿಡಿ ಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 

ಇದನ್ನೂ ಓದಿ : Viral News: ಗಿನ್ನೆಸ್ ದಾಖಲೆಯ ಹುಚ್ಚಿಗೆ 4 ದಿನ ಅತ್ತು ದೃಷ್ಟಿಯನ್ನೇ ಕಳೆದುಕೊಂಡ ಯುವಕ!

ಕೋತಿ ಮತ್ತು ಎರಡು ನಾಯಿಗಳ ನಡುವೆ ನಡೆಯುವ ತಮಾಷೆಯ  ಘಟನೆಗಳು ನೋಡುಗರನ್ನು ಸಂತೋಷಪಡಿಸದೆ ಇರಲಾರವು. ಈ ವಿಡಿಯೋ ನಮ್ಮ ತುಟಿಯಂಚಿನಲ್ಲಿ ಖಂಡಿತಾ ನಗು ತರಿಸುತ್ತದೆ. ಇಲ್ಲಿ ಕೋತಿಯು ನಾಯಿಗಳೊಂದಿಗೆ ಆಟವಾಡುವುದು ಮಾತ್ರವಲ್ಲ, ಅವುಗಳ ಕೋಪ ನೆತ್ತಿಗೇರಿಸಿ ಬಿಡುತ್ತದೆ.

ಈ ವೈರಲ್ ವೀಡಿಯೊದಲ್ಲಿ , ವಿಚಿತ್ರವಾದ ಪ್ಯಾಂಟ್ ಧರಿಸಿರುವ ಕೋತಿ ತಮ್ಮ ಪಾಡಿಗೆ ಮಲಗಿಕೊಂಡಿರುವ ಎರಡು ನಾಯಿಗಳ ಪಕ್ಕ ಬಂದು ಮಲಗುತ್ತದೆ. ಆ ಕೋತಿ ಸುಮ್ಮನೆ ಮಲಗುತ್ತದೆ ಅಂದುಕೊಂಡರೆ ಆ ನಾಯಿಗಳ ಮೇಲೇರಿ ತನ್ನ ಮಂಗ ಬುದ್ದಿ ತೋರಿಸಲು ಶುರು ಮಾಡುತ್ತದೆ. ಏನೋ ಆಟವಾಡುತ್ತಿದೆ ಅಂದುಕೊಂಡರೆ ಆಟದ ಮಧ್ಯೆ  ನಾಯಿಗಳ ಕಾಲುಗಳನ್ನು ತಿರುಚಲು ಆರಂಭಿಸುತ್ತದೆ.  ಮೊದಲು ಸುಮ್ಮನಿದ್ದ ನಾಯಿ, ಯಾವಾಗ ತನಗೆ ನೋವಾಗುತ್ತದೆಯೋ ತಿರುಗಿ ಬೀಳುತ್ತದೆ. ಅಲ್ಲಿ ನಾಯಿ ಮತ್ತು ಕೋತಿಯ ಜಗಳ ಆರಂಭವಾಗುತ್ತದೆ. 

 

 ಇದನ್ನೂ ಓದಿ : ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ಮೂರ್ತಿಯಾದ ಯುವತಿ! ವಿಡಿಯೋ ನೋಡಿ..

ಆದರೆ ಯಾವಾಗ ನಾಯಿ ಕಚ್ಚುವುದಕ್ಕೆ ಮುಂದಾಗುತ್ತದೆಯೂ ಆ ಕೋತಿ ಹಾರಿ ಹೋಗಿ ನಾಯಿಯ ಬೆನ್ನೇರಿ ಬಿಡುತ್ತದೆ. ಕೊನೆಗೆ ನಾಯಿ ಬೆನ್ನಿನ ಮೇಲೆ ಕುಳಿತು ಸವಾರಿ ಮಾಡುತ್ತದೆ. ನಾಯಿ ಕೂಡಾ ಏನೂ ನಡೆದೇ ಇಲ್ಲ ಎನ್ನುವ ಹಾಗೆ ಕೋತಿಯನ್ನು ತನ್ನ ಬೆನ್ನ ಮೇಲೇರಿಸಿಕೊಂಡು ಹೆಜ್ಜೆ ಹಾಕುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಈ ಅದ್ಭುತ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ Ban Luy ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊಗೆ ಇದುವರೆಗೆ ಹೆಚ್ಚಿನ ಸಂಖ್ಯೆಯ ವೀಕ್ಷಣೆಗಳು ಮತ್ತು 438Kಲೈಕ್ಸ್ ಬಂದಿವೆ.  

 

Trending News