ತೆಂಗಿನೆಣ್ಣೆಗೆ ಈ ಎರಡು ವಸ್ತುಗಳನ್ನು ಬೆರೆಸಿ ಹಚ್ಚಿದರೆ ದಟ್ಟ ನೀಳ ಉದ್ದ ಕೂದಲು ನಿಮ್ಮದಾಗುವುದು !

Home Remedies For Hair Growth:ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಈ ಪರಿಹಾರಗಳಲ್ಲಿ ತೆಂಗಿನ ಎಣ್ಣೆ ಕೂಡಾ ಸೇರಿದೆ.   

Written by - Ranjitha R K | Last Updated : Jun 6, 2024, 01:02 PM IST
  • ಹೆಣ್ಣಾಗಲಿ ಗಂಡಾಗಲಿ ಕೂದಲಿನ ಮೇಲಿನ ಮೋಹ ಇದ್ದೇ ಇರುತ್ತದೆ.
  • ಉದ್ದ,ದಪ್ಪ ಮತ್ತು ಬಲವಾದ ಕೂದಲು ಸೌಂದರ್ಯಕ್ಕೆ ವಿಶೇಷ ಕಳೆ ನೀಡುತ್ತದೆ.
  • ಈ ಪರಿಹಾರಗಳಲ್ಲಿ ತೆಂಗಿನ ಎಣ್ಣೆ ಕೂಡಾ ಸೇರಿದೆ.
ತೆಂಗಿನೆಣ್ಣೆಗೆ ಈ ಎರಡು ವಸ್ತುಗಳನ್ನು ಬೆರೆಸಿ ಹಚ್ಚಿದರೆ ದಟ್ಟ ನೀಳ ಉದ್ದ ಕೂದಲು ನಿಮ್ಮದಾಗುವುದು !  title=

Home Remedies For Hair Growth : ಹೆಣ್ಣಾಗಲಿ ಗಂಡಾಗಲಿ ಕೂದಲಿನ ಮೇಲಿನ ಮೋಹ ಇದ್ದೇ ಇರುತ್ತದೆ. ಉದ್ದ,ದಪ್ಪ ಮತ್ತು ಬಲವಾದ ಕೂದಲು ಸಾಮಾನ್ಯವಾಗಿ ನಮ್ಮ  ಸೌಂದರ್ಯಕ್ಕೆ ವಿಶೇಷ ಕಳೆ ನೀಡುತ್ತದೆ. ಕೂದಲನ್ನು ಉದ್ದ ಬೆಳೆಸಲು ಮಹಿಳೆಯರು ಸಾಮಾನ್ಯವಾಗಿ ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ.ಆದರೆ, ಅದು ನಿರೀಕ್ಷೆಯ ಫಲ ನೀಡುವುದಿಲ್ಲ.ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳಲ್ಲಿ ಹಾನಿಕಾರಕ ರಾಸಾಯನಿಕಗಳಿರುತ್ತವೆ.ಕೆಲವೊಮ್ಮೆ ಅವುಗಳ ಅಡ್ಡಪರಿಣಾಮಗಳು ಸಹ ಕಂಡುಬರುತ್ತವೆ.ಹಾಗಾಗಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಈ ಪರಿಹಾರಗಳಲ್ಲಿ ತೆಂಗಿನ ಎಣ್ಣೆ ಕೂಡಾ ಸೇರಿದೆ. 

ಹೌದು, ತೆಂಗಿನ ಎಣ್ಣೆ ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.  ಇದು ನಿಮ್ಮ ಕೂದಲನ್ನು ಆರೋಗ್ಯವಾಗಿಡುವುದರ ಜೊತೆಗೆ,ನೆತ್ತಿಯನ್ನು ಕೂಡಾ ಆರೋಗ್ಯಕರವಾಗಿರಿಸುತ್ತದೆ.ತೆಂಗಿನ ಎಣ್ಣೆಯಲ್ಲಿ ಹಾಲು ಮತ್ತು ಬಾಳೆಹಣ್ಣನ್ನು ಬೆರೆಸಿ ಕೂದಲಿಗೆ ಹಚ್ಚಿದರೆ,ಕೂದಲು ತುಂಬಾ ವೇಗವಾಗಿ ಬೆಳೆಯುತ್ತದೆ. 

ಇದನ್ನೂ ಓದಿ : ನಿಂಬೆ ರಸಕ್ಕೆ ಈ ಎಲೆಯನ್ನು ಬೆರೆಸಿ ಸೇವಿಸಿದರೆ ಕೀಲುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿ ನೀರಾಗುವುದು ! ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗಿ ಹೊರ ಬರುವುದು

ಉದ್ದ ಮತ್ತು ದಪ್ಪ ಕೂದಲಿಗೆ ತೆಂಗಿನೆಣ್ಣೆ, ಹಾಲು ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್ :
ಅಗತ್ಯ ಪದಾರ್ಥಗಳು
ತೆಂಗಿನ ಎಣ್ಣೆ - 4 ಟೀಸ್ಪೂನ್
ಹಾಲು - 3-4 ಚಮಚ
ಬಾಳೆಹಣ್ಣು - 1/2

ಹೇರ್ ಮಾಸ್ಕ್ ತಯಾರಿಸುವ ವಿಧಾನ :
ಮೊದಲನೆಯದಾಗಿ,ಒಂದು ಬಟ್ಟಲಿನಲ್ಲಿ 4 ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ.
ಈಗ 1/2 ಬಾಳೆಹಣ್ಣನ್ನು ಮ್ಯಾಶ್ ಮಾಡಿ ಮಿಶ್ರಣ ಮಾಡಿ.
ಇದರೊಂದಿಗೆ, ಈ ಪೇಸ್ಟ್‌ಗೆ 3-4 ಚಮಚ ಹಾಲನ್ನು ಕೂಡಾ ಸೇರಿಸಬೇಕು.
ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿದರೆ ಹೇರ್ ಮಾಸ್ಕ್ ಸಿದ್ಧವಾಗುವುದು. 

 ಹೇರ್ ಮಾಸ್ಕ್ ಹಚ್ಚುವುದು ಹೇಗೆ ? :
ಈ ಹೇರ್ ಮಾಸ್ಕ್ ಅನ್ನು ನಿಮ್ಮ ಕೂದಲಿಗೆ ಸಂಪೂರ್ಣವಾಗಿ ಹಚ್ಚಿ ಸುಮಾರು 1 ಗಂಟೆಗಳ ಕಾಲ ಬಿಡಿ. ನಂತರ ಸೌಮ್ಯವಾದ ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ.ವಾರದಲ್ಲಿ 2 ರಿಂದ 3 ಬಾರಿ ಹೀಗೆ ಮಾಡುವುದರಿಂದ ಕೂದಲು ಬಹಳ ಬೇಗನೆ ಬೆಳೆಯುತ್ತದೆ. 

ಇದನ್ನೂ ಓದಿ : Raw Mango Benefits: ಜೀರ್ಣಕ್ರಿಯೆಯಿಂದ ತೂಕನಷ್ಟದವರೆಗೆ ತುಂಬಾ ಪ್ರಯೋಜನಕಾರಿ ಮಾವಿನ ಕಾಯಿ

ಹೇರ್ ಮಾಸ್ಕ್ ಪ್ರಯೋಜನಗಳು : 
ತೆಂಗಿನ ಎಣ್ಣೆಯು ಆರ್ಧ್ರಕ ಗುಣಗಳನ್ನು ಹೊಂದಿದೆ.ಇದು ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಇದಲ್ಲದೆ,ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ.  ಇದು ಕೂದಲನ್ನು ಬೇರಿನಿಂದಲೇ ಸ್ವಚ್ಛಗೊಳಿಸುತ್ತದೆ.ಇದು ನೆತ್ತಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ,ಕೊಳೆ ಮತ್ತು ತಲೆಹೊಟ್ಟು ನಿವಾರಿಸುತ್ತದೆ. ಇದರಲ್ಲಿ ಆ್ಯಂಟಿ-ಆಕ್ಸಿಡೆಂಟ್ ಗುಣಗಳೂ ಇದ್ದು,ಇದು ನಮ್ಮ ಕೂದಲ ಪೋಷಣೆಗೆ ಕೆಲಸ ಮಾಡುತ್ತದೆ. ಕೂದಲನ್ನು ಗಟ್ಟಿಯಾಗಿ ಮತ್ತು ದಟ್ಟವಾಗಿ ಮಾಡುತ್ತದೆ. ಅದೇ ಸಮಯದಲ್ಲಿ,ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಬಾಳೆಹಣ್ಣಿನಲ್ಲಿ ಇರುತ್ತವೆ.ಇದು ಕೂದಲಿನ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ.ಅಲ್ಲದೆ,ಕೂದಲನ್ನು ಹೊಳೆಯುವಂತೆ ಮತ್ತು ಮೃದುವಾಗಿಸುತ್ತದೆ. ಇನ್ನು ಹಾಲು ನೆತ್ತಿಯನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ನಮ್ಮ ಕೂದಲು ಸಾಕಷ್ಟು ಪೋಷಣೆಯನ್ನು ಪಡೆಯುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News