ಬರೋಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣ ಧರಿಸುವ ಗೋಲ್ಡ್ ಸುರೇಶ್‌ ಬಿಗ್‌ ಬಾಸ್‌ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Gold Suresh remuneration: ಸದ್ಯ ವೈರಲ್‌ ಆಗುತ್ತಿರುವ ಮಾಹಿತಿ ಪ್ರಕಾರ, ಗೋಲ್ಡ್ ಸುರೇಶ್ ಅವರು  ವಾರಕ್ಕೆ ಕೇವಲ 25 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಮೈಮೇಲೆ ಮೂರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಧರಿಸುವ ಸುರೇಶ್ ಇಷ್ಟು ಕಡಿಮೆ ಸಂಭಾವನೆಗೆ ಬಿಗ್‌ ಬಾಸ್‌ಗೆ ಬಂದಿದ್ದಾರಾ? ಎಂಬುದು ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

Written by - Bhavishya Shetty | Last Updated : Dec 7, 2024, 05:39 PM IST
    • ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಸದ್ದು ಮಾಡುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿ ಗೋಲ್ಡ್‌ ಸುರೇಶ್
    • ಬರೋಬ್ಬರಿ 3 ಕೋಟಿ ರೂ ಮೌಲ್ಯದ ಚಿನ್ನಾಭರಣವನ್ನು ಧರಿಸುತ್ತಾರೆ
    • ಸುರೇಶ್ ಇಷ್ಟು ಕಡಿಮೆ ಸಂಭಾವನೆಗೆ ಬಿಗ್‌ ಬಾಸ್‌ಗೆ ಬಂದಿದ್ದಾರಾ?
ಬರೋಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣ ಧರಿಸುವ ಗೋಲ್ಡ್ ಸುರೇಶ್‌ ಬಿಗ್‌ ಬಾಸ್‌ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? title=
Gold Suresh remuneration

Gold Suresh remuneration: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಸದ್ದು ಮಾಡುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿ ಗೋಲ್ಡ್‌ ಸುರೇಶ್ ಅವರು ದಿನನಿತ್ಯ ಬರೋಬ್ಬರಿ 3 ಕೋಟಿ ರೂ ಮೌಲ್ಯದ ಚಿನ್ನಾಭರಣವನ್ನು ಧರಿಸುತ್ತಾರೆ. ಆದರೆ ಇವರು ಬಿಗ್‌ ಬಾಸ್‌ನಿಂದ ಪಡೆಯುವ ಸಂಭಾವನೆ ಎಷ್ಟೆಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು.

ಇದನ್ನೂ ಓದಿ: ಈ ಎರಡು ಕಾಯಿಲೆ ಇದ್ದವರು ಯಾವತ್ತೂ ಹಸಿರು ಬಟಾಣಿ ಸೇವಿಸಬೇಡಿ...!

ಸದ್ಯ ವೈರಲ್‌ ಆಗುತ್ತಿರುವ ಮಾಹಿತಿ ಪ್ರಕಾರ, ಗೋಲ್ಡ್ ಸುರೇಶ್ ಅವರು  ವಾರಕ್ಕೆ ಕೇವಲ 25 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಮೈಮೇಲೆ ಮೂರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಧರಿಸುವ ಸುರೇಶ್ ಇಷ್ಟು ಕಡಿಮೆ ಸಂಭಾವನೆಗೆ ಬಿಗ್‌ ಬಾಸ್‌ಗೆ ಬಂದಿದ್ದಾರಾ? ಎಂಬುದು ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಗೋಲ್ಡ್ ಸುರೇಶ್‌ ಹಿನ್ನೆಲೆ:
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕ ಹಳ್ಳಿಯಿಂದ ಬಂದ ಸುರೇಶ್‌ ಓದಿದ್ದು ಮೈಸೂರಿನಲ್ಲಿ. 3ನೇ ತರಗತಿಯಿಂದ 7ನೇ ತರಗತಿವರೆಗೂ ಓದಿರುವ ಇವರು, ಆ ನಂತರ ತಮ್ಮ ಹುಟ್ಟೂರಾದ ಅಥಣಿಯಲ್ಲಿ ಎಸ್‌ಎಸ್‌ಎಲ್‌ಸಿ ಶಿಕ್ಷಣ ಪೂರ್ಣಗೊಳಿಸಿದ್ದರು. ಪಿಯುಸಿಯಲ್ಲಿ ಅಡ್ಮೀಶನ್‌ ಮಾಡಿದ್ದರೂ ಕೂಡ ಮುಂದೆ ಓದಲು ಸಾಧ್ಯವಾಗಲಿಲ್ಲ. ಕಾಲೇಜು ಬಿಟ್ಟ ನಂತರ ವ್ಯವಸಾಯ ಮಾಡು ಎಂದು ಮನೆಯಲ್ಲಿ ಬಲವಂತ ಮಾಡಿದ್ದ ಕಾರಣದಿಂದ ಗೋಲ್ಡ್‌ ಸುರೇಶ್‌ 2010ರಲ್ಲಿ ಮನೆ ಬಿಟ್ಟು ಓಡಿ ಬರುತ್ತಾರೆ. ಮನೆ ಬಿಟ್ಟು ಓಡಿಬಂದು ಬೆಂಗಳೂರಿನಲ್ಲಿ ಇದ್ದ ಇವರನ್ನು ನೋಡಿದ ಸಂಬಂಧಿಕರೊಬ್ಬರು ಇವರ ಮನೆಯವರಿಗೆ ವಿಷಯವನ್ನು ಮುಟ್ಟಿಸುತ್ತಾರೆ. ನಂತರ ಗೋಲ್ಡ್‌ ಸುರೇಶ್‌ ಅವರ ಅಣ್ಣ ಅವರನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಮನೆಯವರ ಸಮಾಧಾನಕ್ಕೆಂದು ಮನೆಗೆ ವಾಪಸ್‌ ಬರುವ ಗೋಲ್ಡ್‌ ಸುರೇಶ್‌ ಮನೆಯಲ್ಲಿ ಮತ್ತೆ ನಾಲ್ಕು ತಿಂಗಳು ಕಳೆಯುತ್ತಾರೆ, ಆದರೆ ಏನನ್ನಾದರು ಸಾಧಿಸಬೇಕೆಂಬ ಛಲ ಅವರನ್ನು ಮತ್ತೆ ಮನೆ ಬಿಟ್ಟು ಬೆಂಗಳೂರಿಗೆ ಬರುವಂತೆ ಮಾಡುತ್ತದೆ.

ಇದನ್ನೂ ಓದಿ: ತಿರುಪತಿಯಲ್ಲಿ ದೇವರ ದರ್ಶನ ಪಡೆದು, ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಶಿವಣ್ಣ!!

ಸದ್ಯ ಕೆಲಸ ಅರಿಸಿ ಬೆಂಗಳೂರಿಗೆ ಬಂದಿದ್ದ ಗೋಲ್ಡ್‌ ಸುರೇಶ್‌ ಎರಡು ಬ್ಯುಸಿನೆಸ್‌ಗಳ ಓನರ್‌, ಇನ್ಟೀರಿಯರ್‌ ಹಾಗೂ ಕನ್ಸ್ಟ್ರಕ್ಷನ್‌ ಬ್ಯುಸಿನೆಸ್‌ ಅನ್ನು ನಡೆಸುತ್ತಿದ್ದಾರೆ. ಇದೀಗ ಗೋಲ್ಡ್‌ ಸುರೇಶ್‌ ಅವರಿಗೆ ತಾನು ಹೋಟೆಲ್‌ ನಡೆಸಬೇಕು ಎಂಬ ಆಸೆ ಇದ್ದು, ತಮ್ಮ ಹುಟ್ಟೂರಿನಲ್ಲಿಯೂ ಸಹ ಯಾವುದಾದರೂ ಉದ್ಯೋಗವನ್ನು ಆರಂಭಿಸಿ, 500 ಜನಕ್ಕೆ ಕಲಸ ನೀಡಬೇಕೆಂಬುದು ಅವರ ಕನಸಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News