Viral Video: 10 ಸೆ. ಗಳಲ್ಲಿ 2 ಬಾರಿ ಜೀವ ಉಳಿಸಿದ ಹೆಲ್ಮೆಟ್! ಎದೆಝಲ್‌ ಎನ್ನುವ ದೃಶ್ಯ..

Helmet saves motoryclist: ನೀವೂ ಕೂಡ ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಬಳಸದಿದ್ದರೆ ಅಥವಾ ಸರಿಯಾಗಿ ಧರಿಸದೇ ಇದ್ದರೆ ತಪ್ಪದೇ ವಿಡಿಯೋ ನೋಡಿ. 

Written by - Chetana Devarmani | Last Updated : Sep 17, 2022, 01:24 PM IST
  • 10 ಸೆ. ಗಳಲ್ಲಿ 2 ಬಾರಿ ಜೀವ ಉಳಿಸಿದ ಹೆಲ್ಮೆಟ್
  • ದೆಹಲಿ ಪೊಲೀಸರು ಹಂಚಿಕೊಂಡ ವಿಡಿಯೋ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video: 10 ಸೆ. ಗಳಲ್ಲಿ 2 ಬಾರಿ ಜೀವ ಉಳಿಸಿದ ಹೆಲ್ಮೆಟ್! ಎದೆಝಲ್‌ ಎನ್ನುವ ದೃಶ್ಯ..  title=
ವಿಡಿಯೋ ವೈರಲ್‌

Helmet saves motoryclist: ನೀವೂ ಕೂಡ ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಬಳಸದಿದ್ದರೆ ಅಥವಾ ಸರಿಯಾಗಿ ಧರಿಸದೇ ಇದ್ದರೆ ತಪ್ಪದೇ ವಿಡಿಯೋ ನೋಡಿ. ದೆಹಲಿ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಅದನ್ನು ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ. ಈ ವಿಡಿಯೋವನ್ನು ಪೊಲೀಸರು ವಿಶೇಷವಾಗಿ ಶೇರ್ ಮಾಡಿದ್ದು, ಜನರು ಜಾಗೃತರಾಗುವಂತೆ ಮನವಿ ಮಾಡಿದ್ದಾರೆ. ಇದರಲ್ಲಿ 10 ಸೆಕೆಂಡ್‌ಗಳಲ್ಲಿ ಎರಡು ಬಾರಿ ವ್ಯಕ್ತಿಯ ಪ್ರಾಣಕ್ಕೆ ಅಪಾಯ ತಂದರೂ ಹೆಲ್ಮೆಟ್‌ನಿಂದಾಗಿ ಆತ ಬದುಕುಳಿದಿದ್ದಾನೆ. ವಿಡಿಯೋವನ್ನು ಶೇರ್ ಮಾಡಿದ ದೆಹಲಿ ಪೊಲೀಸರು, ಹೆಲ್ಮೆಟ್ ಧರಿಸುವವರಿಗೆ ದೇವರು ಸಹಾಯ ಮಾಡುತ್ತಾನೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: Viral News: 43 ವರ್ಷಗಳಲ್ಲಿ 53 ಮದುವೆಯಾದ 63ರ ವೃದ್ಧ!

ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಿಡಿಯೋ ತೋರಿಸುತ್ತದೆ. ಈ ವೇಳೆ ವಾಹನವನ್ನು ತಪ್ಪಿಸುವ ಯತ್ನದಲ್ಲಿ ದ್ವಿಚಕ್ರವಾಹನ ಸವಾರ ರಸ್ತೆಯಲ್ಲಿ ಜಾರಿ ಬಿದ್ದಿದ್ದಾರೆ. ಅವರು ಸಂಪೂರ್ಣ ಮುಖವನ್ನು ಮುಚ್ಚುವ ಹೆಲ್ಮೆಟ್ ಧರಿಸಿದ್ದರು, ಇದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಎದ್ದುನಿಂತ ತಕ್ಷಣ ವಿದ್ಯುತ್ ಕಂಬ ಅವರ ಮೇಲೆ ಬೀಳುತ್ತದೆ. ಆದರೆ, ಈ ಬಾರಿಯೂ ಹೆಲ್ಮೆಟ್‌ನಿಂದ ಗಂಭೀರ ಗಾಯದಿಂದ ಪಾರಾಗಿದ್ದಾರೆ.

 

 

ಹೆಲ್ಮೆಟ್ ಧರಿಸದ ಕಾರಣ ರಸ್ತೆ ಅಪಘಾತದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ದೆಹಲಿ ಪೊಲೀಸರು ಹೆಲ್ಮೆಟ್ ಧರಿಸುವಂತೆ ಪ್ರಚಾರ ಮಾಡುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಬಾರಿಯೂ ಹೆಲ್ಮೆಟ್ ಧರಿಸುವುದರಿಂದ ಆಗುವ ಲಾಭವನ್ನು ತೋರಿಸಲು ಪೊಲೀಸರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ. ಭಾರತದಲ್ಲಿ ರಸ್ತೆ ಅಪಘಾತಗಳಿಂದ ಸಾವನ್ನಪ್ಪುವವರ ಸಂಖ್ಯೆ ತುಂಬಾ ಹೆಚ್ಚಾಗಿದೆ, ಇದರಿಂದಾಗಿ ರಸ್ತೆ ಸುರಕ್ಷತೆಯು ಚರ್ಚೆಯ ವಿಷಯವಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಶೀಘ್ರದಲ್ಲೇ ಕಾರುಗಳಿಗೆ 6 ಏರ್ ಬ್ಯಾಗ್ ಕಡ್ಡಾಯವಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಎಕ್ಸ್‌ಪ್ರೆಸ್‌ವೇಗಳನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Monkey Video : ಶಾಲೆಗೆ ಬಂದ ಮಂಗಣ್ಣ.! ವಿದ್ಯಾರ್ಥಿ ಪಕ್ಕ ಕುಳಿತು ಮಾಡಿದ ಕಿತಾಪತಿ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News