Police vs Lawyer: ಗುರುವಾರ(ನವೆಂಬರ್ 30) ರಾತ್ರಿ 8 ಗಂಟೆ ವೇಳೆಗೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಗರ ಠಾಣೆ ಮುಂಭಾಗ ಯುವ ವಕೀಲ ಪ್ರೀತಂ ಹೆಲ್ಮೆಟ್ ಹಾಕದೆ ಬೈಕಿನಲ್ಲಿ ಹೋಗುತ್ತಿದ್ದರು. ವಕೀಲನನ್ನ ಪ್ರಶ್ನಿಸಿದ ಪೊಲೀಸರು ಹಾಗೂ ವಕೀಲನ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಹೆಲ್ಮೆಟ್ ಜೀವ ರಕ್ಷಾ ಕವಚ ಎಂದು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದ್ದು, ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸಲಾಗುತ್ತದೆ. ನಿಮ್ಮ ಜೀವದ ಮೇಲೆ ಕಾಳಜಿ ಮತ್ತು ಸಮಾಜದ ಸ್ವಾಸ್ಥ್ಯವನ್ನು ಗೌರವಿಸುವವರು ನೀವಾಗಿದ್ದರೆ ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸಿ. ಎಂದಿಗೂ ನಿರ್ಲಕ್ಷಿಸಬೇಡಿ. ಆ ವಿಚಾರ ಆಗಿರಲಿ ಕೆಲವು ಜನ ತಮ್ಮ ಹೆಲ್ಮೆಟ್ ಚನ್ನಾಗಿದ್ದಾಗಲೇ ಹೊಸ ಹೆಲ್ಮೆಟ್ಗಳನ್ನು ಖರೀದಿಸುತ್ತಾರೆ, ಕೆಲವರು ಪೊಲೀಸರ ಕಾಟಕ್ಕೆಂದು ಒಂದನ್ನೇ ದೀರ್ಘಕಾಲದವರೆಗೆ ಬಳಸುತ್ತಿರುತ್ತಾರೆ. ಅದು ಒಳ್ಳೆಯದಲ್ಲ. ಹಾಗಿದ್ರೆ ಹಳೆಯ ಹೆಲ್ಮೆಟ್ ಅನ್ನು ಯಾವಾಗ ಬದಲಾಯಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಕೋಲಾರದ ಮಾಲೂರು ತಾ. ಲಿಂಗಾಪುರ ಗ್ರಾಮದಲ್ಲಿ ಕೃಷ್ಣಪ್ಪ ಎಂಬೋರು ಮಗನ ಸಾವಿನ ನೆನಪಲ್ಲಿ ಹೆಲ್ಮೆಟ್ ನೀಡಿ ಜಾಗೃತಿ ಮೂಡಿಸಿದ್ದಾರೆ. ಇವರ ಮಗ ಬೈಕ್ ಆಕ್ಸಿಡೆಂಟ್ನಲ್ಲಿ ಸಾವನ್ನಪ್ಪಿದ್ದ..
ನಾವು ಮಾತನಾಡುತ್ತಿರುವ ಸಾಧನವು ಹೆಲ್ಮೆಟ್ ಕೂಲಿಂಗ್ ಸಾಧನವಾಗಿದೆ, ಇದು ಬೇಸಿಗೆಯಲ್ಲಿ ಸವಾರಿ ಮಾಡುವಾಗ ನಿಮಗೆ ಪರಿಹಾರವನ್ನು ನೀಡುತ್ತದೆ. ಈ ಸಾಧನವು ಎಷ್ಟು ಶಕ್ತಿಯುತವಾಗಿದೆ ಎಂದರೆ ಅದು ಹೆಲ್ಮೆಟ್ ಅನ್ನು ತಣ್ಣಗಾಗಿಸುತ್ತದೆ ಮತ್ತು ನೀವು ಒಂದು ನಿಮಿಷವೂ ಶಾಖದಲ್ಲಿ ಸವಾರಿ ಮಾಡುತ್ತಿದ್ದೀರಿ ಎಂದು ನಿಮಗೆ ಅನಿಸುವುದಿಲ್ಲ.
ಈ ವ್ಯವಸ್ಥೆಯು ಮೊದಲೇ ಇತ್ತು ಮತ್ತು ಈಗ ಕೋಲ್ಕತಾ ಪೊಲೀಸರು ಇದನ್ನು ಮತ್ತೆ ಜಾರಿಗೆ ತರಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು ಡಿಸೆಂಬರ್ 8 ರಿಂದ 'ಹೆಲ್ಮೆಟ್ ಇಲ್ಲ, ಪೆಟ್ರೋಲ್ ಇಲ್ಲ' ಎಂಬ ನಿಯಮ ಅನ್ವಯವಾಗಲಿದೆ ಮತ್ತು ಮುಂದಿನ 60 ದಿನಗಳವರೆಗೆ ಇದು ಮುಂದುವರಿಯಲಿದೆ ಎಂದು ಹೇಳಿದರು.
ಗುಜರಾತ್ ಜಿಲ್ಲೆಯ ವಡೋದರದ ಇನ್ಶ್ಯುರೆನ್ಸ್ ಏಜೆಂಟ್ ಆಗಿರುವ 50 ವರ್ಷದ ರಾಂಪಾಲ್ ಎಂಬುವರು ರಸ್ತೆ ಸಂಚಾರಕ್ಕೆ ಅಗತ್ಯವಾದ ಲೈಸನ್ಸ್, ವಿಮೆ ಸೇರಿದಂತೆ ಮೊದಲಾದ ದಾಖಲೆಗಳನ್ನುಹೆಲ್ಮೆಟ್ ಗೆ ಅಂಟಿಸಿಕೊಂಡು ವಾಹನ ಸಂಚಾರ ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.