ಇಲ್ಲಿದೆ ವರರನ್ನು ಮಾರುವ ಮಾರುಕಟ್ಟೆ !9 ದಿನಗಳ ಸಂತೆಯಲ್ಲಿ ನಡೆಯುತ್ತದೆ ವರನ ಮಾರಾಟ ! 50 ಸಾವಿರದಿಂದ ಆರಂಭವಾಗುತ್ತದೆ ಖರೀದಿ

Groom market : ಇಲ್ಲಿ ನಾವು ವಿಚಿತ್ರ ಮಾರುಕಟ್ಟೆಯ ಬಗ್ಗೆ ಮಾತನಾಡುತ್ತಿದ್ದೇವೆ. ನಾವಿಲ್ಲಿ ಹೇಳುತ್ತಿರುವುದು ವರರ ಮಾರುಕಟ್ಟೆ ಬಗ್ಗೆ. 

Written by - Ranjitha R K | Last Updated : Dec 2, 2024, 12:34 PM IST
  • ಜಗತ್ತಿನಲ್ಲಿ ಹಲವು ರೀತಿಯ ಮಾರುಕಟ್ಟೆಗಳಿವೆ
  • ಕೆಲವೆಡೆ ಹಳೆಯ ಸಾಮಾನುಗಳನ್ನು ಕೂಡಾ ಮಾರಾಟ ಮಾಡಲಾಗುತ್ತದೆ.
  • ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ.
ಇಲ್ಲಿದೆ ವರರನ್ನು ಮಾರುವ ಮಾರುಕಟ್ಟೆ !9 ದಿನಗಳ ಸಂತೆಯಲ್ಲಿ ನಡೆಯುತ್ತದೆ ವರನ ಮಾರಾಟ ! 50 ಸಾವಿರದಿಂದ ಆರಂಭವಾಗುತ್ತದೆ ಖರೀದಿ  title=

Groom market : ಜಗತ್ತಿನಲ್ಲಿ ಹಲವು ರೀತಿಯ ಮಾರುಕಟ್ಟೆಗಳಿವೆ. ಕೆಲವು ಮಾರುಕಟ್ಟೆಯಲ್ಲಿ ಸೊಪ್ಪು ತರಕಾರಿಗಳನ್ನು ಮಾರಾಟ ಮಾಡಿದರೆ, ಇನ್ನು ಕೆಲವು ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ.ಕೆಲವೆಡೆ ಹಳೆಯ ಸಾಮಾನುಗಳನ್ನು ಕೂಡಾ ಮಾರಾಟ ಮಾಡಲಾಗುತ್ತದೆ. ಇನ್ನು ಕೆಲವೆಡೆ ವಾರದ ಸಂತೆ, ತಿಂಗಳ ಸಂತೆಯಂಥಹ ಮಾರುಕಟ್ಟೆ ಕೂಡಾ ನಡೆಯುತ್ತದೆ.ಕೆಲವು ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ. 

ಇಲ್ಲಿ ನಾವು ವಿಚಿತ್ರ ಮಾರುಕಟ್ಟೆಯ ಬಗ್ಗೆ ಮಾತನಾಡುತ್ತಿದ್ದೇವೆ. ನಾವಿಲ್ಲಿ ಹೇಳುತ್ತಿರುವುದು ವರರ ಮಾರುಕಟ್ಟೆ ಬಗ್ಗೆ. ಈ ಮಾರುಕಟ್ಟೆಯಲ್ಲಿ ಹಣ್ಣು ತರಕಾರಿಗಳಂತೆ ವರನನ್ನು ಮಾರಾಟಕ್ಕೆ ಇಡಲಾಗುತ್ತದೆ. ಅರ್ಹತೆಯ ಆಧಾರದ ಮೇಲೆ ಇಲ್ಲಿ ವರನನ್ನು ಮಾರಾಟ ಮಾಡಲಾಗುತ್ತದೆ. ಹುಡುಗನ ವಿದ್ಯಾರ್ಹತೆ, ಉದ್ಯೋಗ,ಕೌಟುಂಬಿಕ ಹಿನ್ನೆಲೆ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ವರನ ಬೆಲೆಯನ್ನು ನಿರ್ಧರಿಸಲಾಗುತ್ತದೆ. ವರನನ್ನು ಕುಟುಂಬದ ಪರಂಪರೆಯ ಆಧಾರದ ಮೇಲೆಯೂ ಮೌಲ್ಯೀಕರಿಸಲಾಗುತ್ತದೆ.  ಈ ವರರ ಮಾರುಕಟ್ಟೆ ಇರುವುದು ನಮ್ಮದೇ ದೇಶದಲ್ಲಿ ಎನ್ನುವುದು ವಿಶೇಷ.

ಇದನ್ನೂ ಓದಿ : Viral Video: ಮೆಟ್ರೋದಲ್ಲಿ ಯುವತಿಯರ ನಂಗಾ ನಾಚ್‌.. ಹುಡುಗರು ಫುಲ್‌ ಜಾಲಿ..! ಜಾಲಿ..!:   

ಈ ಮಾರುಕಟ್ಟೆಗಿದೆ 700 ವರ್ಷಗಳ ಇತಿಹಾಸ : 
ಪ್ರತಿ ವರ್ಷ, ಬಿಹಾರದ ಮಧುಬನಿಯಲ್ಲಿ ವರ ಮಾರುಕಟ್ಟೆಯನ್ನು ಆಯೋಜಿಸಲಾಗುತ್ತದೆ. ಇಲ್ಲಿ ವರನ ಮೇಲೆ ಬಿಡ್ ಮಾಡಲಾಗುತ್ತದೆ.  ವರ್ಷದಲ್ಲಿ ಒಂಬತ್ತು ದಿನಗಳ ಕಾಲ ಈ ಮಾರುಕಟ್ಟೆ ನಡೆಯುತ್ತದೆ. ಈ ಸಮಯದಲ್ಲಿ, ಅನೇಕ ಅವಿವಾಹಿತ ಹುಡುಗರು ಇಲ್ಲಿಗೆ ಬರುತ್ತಾರೆ. ಧೋತಿ-ಕುರ್ತಾ ಅಥವಾ ಜೀನ್ಸ್-ಶರ್ಟ್ ಧರಿಸಿ ಈ ಮಾರುಕಟ್ಟೆಗೆ ಬರುತ್ತಾರೆ. ಈ ಮಾರುಕಟ್ಟೆಗೆ ಬರುವ ಹುಡುಗಿ ತಮ್ಮನ್ನು ಇಷ್ಟಪಟ್ಟು, ಮದುವೆಯಾಗುತ್ತಾರೆ ಎನ್ನುವ ಉದ್ದೇಶದಿಂದಲೇ ಹುಡುಗರು ಈ ಮಾರುಕಟ್ಟೆಗೆ ಬರುತ್ತಾರೆ. 

ವರದಕ್ಷಿಣೆ ವಿರುದ್ದ ಅಸ್ತಿತ್ವಕ್ಕೆ ಬಂದ ಮಾರುಕಟ್ಟೆ  :
ವರದಕ್ಷಿಣೆ ಪದ್ಧತಿಯನ್ನು ಕೊನೆಗಾಣಿಸುವ ಉದ್ದೇಶದಿಂದ ಈ ಮಾರುಕಟ್ಟೆ ಆಯೋಜಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಮಾರುಕಟ್ಟೆಗೆ ಬರುವ ಕೆಲವು ಹುಡುಗರು ಕೂಡಾ ವರದಕ್ಷಿಣೆಗೆ ಬೇಡಿಕೆಯಿಡುತ್ತಾರೆ ಎನ್ನಲಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಇಲ್ಲಿ ಹುಡುಗರ ವಿದ್ಯಾರ್ಹತೆಗೆ ಅನುಗುಣವಾಗಿ ಅವರ ವಯಸ್ಸು 35 ವರ್ಷಕ್ಕಿಂತ ಹೆಚ್ಚಿದ್ದರೆ ಅವರ ಬೆಲೆ ಐವತ್ತು ಸಾವಿರ ರೂಪಾಯಿಗಳಿಗೆ  ಆರಂಭವಾಗುತ್ತದೆ.ವಯಸ್ಸು ಕಡಿಮೆಯಿದ್ದರೆ ಬೆಲೆ ಎರಡರಿಂದ ಮೂರು ಲಕ್ಷದವರೆಗೆ ಏರುತ್ತದೆ. ಮಾರುಕಟ್ಟೆಯಲ್ಲಿ ಈ ಸಂಬಂಧಗಳನ್ನು ಕೂಡಿಸಿ ಕೊಡುವ ಪಂಡಿತರೂ  ಸಿಗುತ್ತಾರಂತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News