ಟೊಮೆಟೋ ಜೊತೆ ಈ 3 ಮಿಶ್ರಣ ಮಾಡಿ ಹಚ್ಚಿಕೊಂಡ್ರೆ ಕೂದಲು ಉದರಲ್ಲ, ದಡ್ಡವಾಗಿ ಬೆಳೆಯುತ್ತವೆ..!

Hair care tips in Kannada : ಚಳಿಗಾಲದಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು. ಇವುಗಳನ್ನು ತೊಡೆದುಹಾಕಲು ಟೊಮೆಟೊವನ್ನು ವಿವಿಧ ವಸ್ತುಗಳನ್ನು ಬೆರೆಸಿ ಬಳಸಬಹುದು.. ಇದು ನಿಮ್ಮ ಕೂದಲು ಹಾಗೂ ನೆತ್ತಿಯನ್ನು ಆರೋಗ್ಯಕರವಾಗಿಸುತ್ತದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
 

1 /7

ಚಳಿಗಾಲದಲ್ಲಿ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕ, ಏಕೆಂದರೆ ಈ ಋತುವಿನಲ್ಲಿ ಕೂದಲು ಶುಷ್ಕತೆ, ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಹೆಚ್ಚಾಗಿ ಸಂಭವಿಸುತ್ತವೆ. ಈ ಸಮಸ್ಯೆಗಳನ್ನು ಕಡಿಮೆ ಮಾಡಲು ಟೊಮೆಟೊ ಉತ್ತಮ ಆಯ್ಕೆಯಾಗಿದೆ.   

2 /7

ಟೊಮೆಟೊದಲ್ಲಿ ವಿಟಮಿನ್ ಎ, ಸಿ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೂದಲಿನ ಬೇರುಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ ಮತ್ತು ಅವುಗಳನ್ನು ಆರೋಗ್ಯಕರವಾಗಿಡುತ್ತದೆ.   

3 /7

ವಿಟಮಿನ್ ಸಿ ಕಾಲಜನ್ ಅನ್ನು ಹೆಚ್ಚಿಸುತ್ತದೆ ಮತ್ತು ಒಡೆಯುವಿಕೆಯನ್ನು ತಡೆಯುತ್ತದೆ. ಪೊಟ್ಯಾಸಿಯಮ್ ನೆತ್ತಿಯನ್ನು ಪೋಷಿಸುತ್ತದೆ ಮತ್ತು ತೇವಗೊಳಿಸುತ್ತದೆ, ಇದು ತಲೆಹೊಟ್ಟು ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ. ಬನ್ನಿ ಟೊಮೆಟೋ ಜೊತೆ ಯಾವ ವಸ್ತುಗಳನ್ನು ಬೆರೆಸಬೇಕು ಎಂದು ತಿಳಿಯೋಣ..   

4 /7

ಟೊಮೇಟೊ ಮತ್ತು ಅಲೋವೆರಾ : ಟೊಮೇಟೊದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಗಳು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ. ಅದಕ್ಕಾಗಿ ನೀವು ಟೊಮೇಟೊ ರುಬ್ಬಿ ಅದಕ್ಕೆ ಅಲೋವೆರಾ ಜೆಲ್ ಮಿಕ್ಸ್‌ ಮಾಡಿ ಹೈಡ್ರೇಟಿಂಗ್ ಪೇಸ್ಟ್ ತಯಾರಿಸಿ.. ಹಚ್ಚಿಕೊಳ್ಳಿ. ನಂತರ ಅದನ್ನು 30 ನಿಮಿಷಗಳ ಕಾಲ ಬಿಟ್ಟು, ತೊಳೆಯಿರಿ. ಇದು ಕೂದಲು ಬೆಳವಣಿಗೆ ಮತ್ತು ಕಾಂತಿ ನೀಡುತ್ತದೆ..   

5 /7

ಟೊಮೇಟೊ ಮತ್ತು ಮೊಸರು : ಮೊಸರು- ಟೊಮ್ಯಾಟೊ ಮಿಶ್ರಣ ಕೂದಲನ್ನು ತೇವಗೊಳಿಸುತ್ತದೆ. ಇದಕ್ಕಾಗಿ, ಮೊಸರಿನಲ್ಲಿ ಟೊಮೆಟೊ ಪೇಸ್ಟ್ ಅನ್ನು ಚೆನ್ನಾಗಿ ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಅದನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ. ಇದು ನಿಮ್ಮ ಕೂದಲನ್ನು ರೇಷ್ಮೆಯಂತೆ ಮೃದುವಾಗಿಸುತ್ತದೆ.  

6 /7

ಟೊಮೆಟೊ ಮತ್ತು ಮೊಟ್ಟೆಯ ಬಿಳಿ ಪೇಸ್ಟ್ : ಟೊಮೆಟೊ ಮತ್ತು ಮೊಟ್ಟೆಯ ಬಿಳಿಭಾಗದಿಂದ ಹೇರ್ ಮಾಸ್ಕ್ ಮಾಡಿ.. ಮೊದಲು ಟೊಮೆಟೊವನ್ನು ರುಬ್ಬಿಕೊಂಡು ಪೇಸ್ಟ್‌ ಮಾಡಿಕೊಳ್ಳಿ. ನಂತರ ಮೊಟ್ಟೆಯ ಬಿಳಿಭಾಗವನ್ನು ಅದಕ್ಕೆ ಮಿಶ್ರಣ ಮಾಡಿ.. ಚನ್ನಾಗಿ ಮಿಶ್ರಣಮಾಡಿ ಪೇಸ್ಟ್ ತಯಾರಿಸಿ. ನಂತರ ಕೂದಲಿನಲ್ಲಿ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ.   

7 /7

ಟೊಮೇಟೊದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಮೊಟ್ಟೆಯ ಪ್ರೊಟೀನ್ ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ, ಇದು ಕೂದಲನ್ನು ಗಟ್ಟಿಯಾಗಿಸುತ್ತದೆ. ಇದಲ್ಲದೆ, ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ..