ಕಪಿರಾಯ ಬಟ್ಟೆ ಒಗೆಯುವ ಪರಿ ಇದು ! ನಗು ತಡೆಯಲಾಗದು ಈ ವಿಡಿಯೋ ನೋಡಿ

funny Video : ಕೋತಿಯೊಂದು ಸಾಬೂನಿನಿಂದ ಬಟ್ಟೆ ಒಗೆಯುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

Written by - Ranjitha R K | Last Updated : Jul 7, 2023, 05:07 PM IST
  • ಕೋತಿಗಳು ಬುದ್ಧಿವಂತ ಪ್ರಾಣಿಗಳಲ್ಲಿ ಒಂದಾಗಿದೆ.
  • ಕಪಿರಾಯ ಬಟ್ಟೆ ಒಗೆಯುವ ವಿಡಿಯೋ
  • ನೆಟಿಜನ್‌ಗಳು ಕಾಮೆಂಟ್‌ಗಳ ಮಹಾಪೂರವನ್ನೇ ಹರಿಸಿದ್ದಾರೆ.
 ಕಪಿರಾಯ ಬಟ್ಟೆ ಒಗೆಯುವ ಪರಿ ಇದು ! ನಗು ತಡೆಯಲಾಗದು ಈ  ವಿಡಿಯೋ ನೋಡಿ  title=

funny Video : ಇಂಟರ್ನೆಟ್ ಜಗತ್ತು ಹಲವು ವಿಸ್ಮಯಗಳನ್ನು ಹೊಂದಿರುವ ವಿಚಿತ್ರ ಜಗತ್ತು. ಇಲ್ಲಿ ಅನೇಕ ರೀತಿಯ ವಿಡಿಯೋಗಳನ್ನು ಶೇರ್ ಮಾಡಲಾಗುತ್ತದೆ. ಕೆಲ ವಿಡಿಯೋಗಳು ಹೊಟ್ಟೆ ಹುಣ್ಣಾಗಿಸುವಂತೆ ನಗು ತರಿಸಿದರೆ ಇನ್ನು ಕೆಲವು ಕಣ್ಣಂಚು ಒದ್ದೆ ಮಾಡಿ ಬಿಡುತ್ತದೆ. ಇನ್ನು ಕೆಲವು ಪರಮಾಶ್ಚರ್ಯ ಎನ್ನುವಂತೆ ಇರುತ್ತದೆ. ಅವುಗಳಲ್ಲಿಯೂ ಪ್ರಾಣಿಗಳ ವಿಡಿಯೋಗಳನ್ನು ನೋಡುವುದೇ ಚೆಂದ. ಇದೀಗ ಕೋತಿ ವಿಡಿಯೋವೊಂದು ವೈರಲ್ ಆಗುತ್ತಿದೆ. 

ಕೋತಿಗಳು ಚೇಷ್ಟೆ ಮಾಡುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿರುತ್ತವೆ. ಕೋತಿ ಎಂದರೆ ಚೇಷ್ಟೆ ಇರಲೇ ಬೇಕು. ಚೇಷ್ಟೆ ಮಾಡುವುದು ಕಪಿಗಳ ಬುದ್ದಿ. ಆದರೆ ಇಲ್ಲಿ ಕೋತಿಯೊಂದು ಬಟ್ಟೆಯನ್ನು ಒಗೆಯುತ್ತಿದೆ. 

ಇದನ್ನೂ ಓದಿ : Viral Video: ಮನ್ಯಾಗ ಹೇಳಿ ಬಂದಿ ಏನೋ ತಮ್ಮಾ..? ಯಮನ ಜೊತೆ ಜಲ್ಲಾಟ ಆಡಿದ ಯುವಕ

ಕೋತಿ ಇಲ್ಲಿ ಅದೆಷ್ಟು ಗಂಭೀರವಾಗಿ ಬಟ್ಟೆ ಒಗೆಯುತ್ತಿದೆ ಎಂದರೆ ಊಹಿಸುವುದು ಕೂಡಾ ಕಷ್ಟ. ನಾವು ಯಾವ ರೀತಿ ಬಟ್ಟೆ ಒಗೆಯುತ್ತೇವೋ ಹಾಗೆಯೇ ಈ ಮಂಗ ಕೂಡಾ ಬಟ್ಟೆ ಒಗೆಯುತ್ತಿದೆ. ಮೊದಲು ಕೋತಿ ಬಟ್ಟೆಯನ್ನು ಸಾಬೂನಿನಿಂದ ಒಗೆದು ನಂತರ ನೀರಿನಿಂದ ತೊಳೆಯುತ್ತದೆ. ನಂತರ ಬ್ರಷ್ ತೆಗೆದುಕೊಂಡು ಉಜ್ಜುತ್ತದೆ.  ಈ ವಿಡಿಯೋ ನೋಡಿ ನಗು ಬಾರದವರೂ ನಗಬೇಕು ಎನ್ನವ ಹಾಗಿದೆ. 

 

ಇದನ್ನೂ ಓದಿ : Video : ನಡುರಸ್ತೆಯಲ್ಲಿ ಪೋರನ ಆಟ ! ಸಾಮಾಜಿಕ ಮಾಧ್ಯಮದಲ್ಲಿ ಈ ಬಾಲಕನದ್ದೇ ಹವಾ

ಕೋತಿಯ ಈ ತಮಾಷೆಯ ವೀಡಿಯೊವನ್ನು ಟ್ವಿಟರ್ ಹ್ಯಾಂಡಲ್ @HasnaZarooriHai ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News