ಪ್ರವಾಹದಲ್ಲಿ ಈಜಿ ಮಾವುತನ ಪ್ರಾಣ ಉಳಿಸಿದ ಆನೆ - ವಿಡಿಯೋ ವೈರಲ್

ದೇಶದ ಹಲವು ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

Written by - Yashaswini V | Last Updated : Jul 14, 2022, 10:30 AM IST
  • ತನ್ನ ಪ್ರಾಣ ಪಣಕ್ಕಿಟ್ಟು ಮಾವುತನ ಪ್ರಾಣ ಉಳಿಸಿದ ಆನೆ
  • ಸುಮಾರು ಒಂದು ಕಿಲೋಮೀಟರ್ ಪ್ರವಾಹದಲ್ಲಿ ಈಜಿದ ಆನೆ
  • ವೀಕ್ಷಿಸಿ ವೈರಲ್ ವಿಡಿಯೋ
ಪ್ರವಾಹದಲ್ಲಿ ಈಜಿ ಮಾವುತನ ಪ್ರಾಣ ಉಳಿಸಿದ ಆನೆ - ವಿಡಿಯೋ ವೈರಲ್  title=
Elephant saves mahout life in flood- watch amazing video

ಮಾವುತನ ಪ್ರಾಣ ಉಳಿಸಿದ ಆನೆ:  ದೇಶಾದ್ಯಂತ ಮುಂಗಾರು ಅಬ್ಬರ ಜೋರಾಗಿದೆ. ಹಲವೆಡೆ ಭಾರೀ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಕೆಲವು ನದಿಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಆನೆಯೊಂದು ತನ್ನ ಪ್ರಾಣ ಪಣಕ್ಕಿಟ್ಟು ಪ್ರವಾಹದಲ್ಲಿ ಈಜಿ ಮಾವುತನ ಪ್ರಾಣ ಉಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

ವಾಸ್ತವವಾಗಿ, ಬಿಹಾರದ ಕೆಲವು ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆ, ಮಂಗಳವಾರ ಆನೆಯೊಂದು ಪ್ರವಾಹದ ನೀರಿನಲ್ಲಿ ಮಾವುತನನ್ನು ಹೊತ್ತು ಈಜುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿದ್ದು, ಅಂತರ್ಜಾಲದಲ್ಲಿ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

ಇದನ್ನೂ ಓದಿ- ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ ಆನೆ- ಇಲ್ಲಿದೆ ಅದ್ಭುತ ವಿಡಿಯೋ

ಬಿಹಾರದ ಅನೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ವೈಶಾಲಿ ಜಿಲ್ಲೆಯ ರಘೋಪುರದಲ್ಲೂ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಗಂಗಾ ನದಿಯಲ್ಲಿ ಆನೆಯೊಂದು ತನ್ನ ಮೇಲೆ ಮಾವುತನನ್ನು ಹೊತ್ತು ದಾಟಲು ಪ್ರಯತ್ನಿಸುತ್ತಿರುವುದನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು. 

ಈ ವೈರಲ್ ವಿಡಿಯೋದಲ್ಲಿ , ಆನೆಯು ತನ್ನ ಮೇಲೆ ಮಾವುತನನ್ನು ಹೊತ್ತು ಈಜುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಕೆಲ ಕ್ಷಣಗಳು ಆನೆ ನೀರಿನಲ್ಲಿ ಮುಳುಗಿಯೇ ಬಿಟ್ಟಿತು, ಇನ್ನು ಇವರಿಬ್ಬರೂ ದಡ ಸೇರಲಾರರು ಎಂದೆನಿಸುತ್ತದೆ. ಆದಾಗ್ಯೂ, ಆನೆ ಪ್ರವಾಹದಲ್ಲಿ ಈಜಿ ಕೊನೆಗೂ ಮಾವುತನನ್ನು ದಡ ತಲುಪಿಸಿದೆ. ಆನೆಯೂ ಸುರಕ್ಷಿತವಾಗಿ ಹೊರಬಂದಿದೆ.

ಇದನ್ನೂ ಓದಿ- ಆರತಕ್ಷತೆಯಲ್ಲಿ ವಧು-ವರರ ಮಧ್ಯೆ ಬಂದ ಸೋದರ ಸಂಬಂಧಿ ಮಾಡಿದ್ದೇನು ಗೊತ್ತಾ?

ಆನೆಯು ರುಸ್ತಂಪುರ ಘಾಟ್‌ನಿಂದ ಪಾಟ್ನಾ ಕೇತುಕಿ ಘಾಟ್ ನಡುವೆ ಒಂದು ಕಿಲೋಮೀಟರ್ ವರೆಗೆ ಈಜಿ ಮಾವುತನ ಪ್ರಾಣ ಉಳಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News