Elephant Video: ಇದು ಆಪರೇಷನ್ ಅವಳಿ ಆನೆಮರಿ ರೋಚಕ ಕಥೆ!

ಕುತ್ತಿಗೆ ತನಕ ನೀರಿದ್ದರಿಂದ  ಅವಳಿ ಮರಿಗಳು ನೀರಿನೊಳಗೆ ಮುಳುಗಿ ಅಸುನೀಗುವ ಆತಂಕವೂ ಇತ್ತು. ಅದಲ್ಲದೆ, ಮರಿಗಳು ನಿರಂತರವಾಗಿ ಮೇಲೆ ಬರಲು ಕಷ್ಟ ಪಡುತ್ತಿದ್ದವು, ಅದಕ್ಕಾಗಿ ತಮ್ಮೆಲ್ಲಾ ಶಕ್ತಿಯನ್ನು ವ್ಯಯಿಸುತ್ತಿದ್ದರಿಂದ  ಬಳಲಿಕೆಯಿಂದ ಮೃತಪಡುವ ಸಾಧ್ಯತೆಯೂ ಇತ್ತು. 

Written by - Yashaswini V | Last Updated : Apr 21, 2022, 11:39 AM IST
  • ಕಾಡಾನೆಯೊಂದು ನೀರಿನ ಹೊಂಡದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದೆ.
  • ಆದರೆ, ಮರಿಗಳ ಕುತ್ತಿಗೆಯ ಎತ್ತರದವರೆಗೆ ನೀರಿದ್ದು ಅವುಗಳು ಮೇಲೇರಲು ನಿರಂತರವಾಗಿ ಹೆಣಗಾಡುತ್ತಿದ್ದವು.‌
  • ತಾಯಿ ಆನೆ ಸಂಕಟದಿಂದ ಮತ್ತು ತನ್ನ ಮರಿಗಳನ್ನು ರಕ್ಷಿಸಲು ಆಗುತ್ತಿಲ್ಲವೆಂಬ ನೋವಿನಿಂದ ಮರಿಗಳನ್ನು ಕಾಯುತ್ತಿತ್ತು.
Elephant Video: ಇದು ಆಪರೇಷನ್ ಅವಳಿ ಆನೆಮರಿ ರೋಚಕ ಕಥೆ! title=
Elephant babies resuced from pond-watch video

ಚಾಮರಾಜನಗರ: ಜನನವೇ ಒಂದು ಹೋರಾಟ ಅಂತಹದರಲ್ಲಿ ಒಂದು ಹೋರಾಟ ಮುಗಿಸಿದ ಈ ಅವಳಿ ಆನೆ ಮರಿಗಳು ಬದುಕಲು ಹೆಣಗಾಡಿ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗೆಲುವಿನ ನಗೆ ಬೀರಿದ ರೋಚಕ ಸ್ಟೋರಿ ಇದು.

ಹೌದು‌..., ಬಂಡೀಪುರದಲ್ಲಿ ಅವಳಿ ಆನೆ ಮರಿಗಳಿಗೆ ಜನ್ಮ ನೀಡಿದ್ದ ಘಟನೆ ನಿಮಗೇ ಗೊತ್ತೇ ಇದೆ. ಆದರೆ, ಜನಿಸಿದ ಕೆಲವೇ ಕ್ಷಣಗಳಲ್ಲಿ ನೀರಿನ ಹೊಂಡದಿಂದ ಬರಲಾಗದೇ ಬಳಿಕ ಅರಣ್ಯ ಇಲಾಖೆಯಿಂದ ರಕ್ಷಿಸಲ್ಪಟ್ಟ ಆಪರೇಷನ್ ಅವಳಿ ಆನೆಮರಿಗಳ ಕಥೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಎಫ್ಒ ರಮೇಶ್ ಕುಮಾರ್ "ಜೀ ಕನ್ನಡ ನ್ಯೂಸ್"ಗೆ ತಿಳಿಸಿದ್ದಾರೆ.‌

ಏನದು ಆಪರೇಷನ್ ಟ್ವಿನ್ಸ್: ಕಳೆದ ಏ. 17 ರಂದು ಬಂಡೀಪುರ ಹಳೇ ಸಫಾರಿ ಕೇಂದ್ರದಿಂದ 200 ಮೀಟರ್ ದೂರದ ಮೂರ್ಕೆರೆ ಎಂಬಲ್ಲಿ ಒಂದು ಸಫಾರಿ ವಾಹನದ ಚಾಲಕ  ಅವಳಿ ಆನೆ ಮರಿಗಳಿಗೆ ಕಾಡಾನೆ ಜನ್ಮ ನೀಡಿರುವ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಮಧ್ಯಾಹ್ನ 3.45 ರ ಹೊತ್ತಿಗೆ ಸ್ಥಳಕ್ಕೆ ತೆರಳಿದಾಗ ಕಾಡಾನೆಯೊಂದು ನೀರಿನ ಹೊಂಡದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ್ದು ಗೊತ್ತಾಗಿದೆ. ಆದರೆ, ಮರಿಗಳ ಕುತ್ತಿಗೆಯ ಎತ್ತರದವರೆಗೆ ನೀರಿದ್ದು ಅವುಗಳು ಮೇಲೇರಲು ನಿರಂತರವಾಗಿ ಹೆಣಗಾಡುತ್ತಿದ್ದವು.‌ ತಾಯಿ ಆನೆ ಸಂಕಟದಿಂದ ಮತ್ತು ತನ್ನ ಮರಿಗಳನ್ನು ರಕ್ಷಿಸಲು ಆಗುತ್ತಿಲ್ಲವೆಂಬ ನೋವಿನಿಂದ ಮರಿಗಳನ್ನು ಕಾವಲು ಮಾಡುತ್ತಿತ್ತು. 

ಇದನ್ನೂ ಓದಿ- ವೈರಲ್ ವಿಡಿಯೋ: ಮಹಿಳೆಯ ಆತ್ಮ ಆಕೆಯ ದೇಹದಿಂದ ಹೊರಬಂದಾಗ...

ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಂಡೀಪುರದ ಅಧಿಕಾರಿಗಳು ಒಂದು ತಾಸಿಗೂ ಹೆಚ್ಚು ಕಾಲ ಕಾಯುತ್ತ ಕುಳಿತಿದ್ದರೂ ಸಕಾರಾತ್ಮಕವಾಗಿ ಏನೂ ಆಗದಿದ್ದರಿಂದ "ಆಪರೇಷನ್ ಟ್ವಿನ್ಸ್" ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ.

ಒಂದು ತಂಡ ತಾಯಿ ಆನೆಯನ್ನು ದೂರಕ್ಕೆ ಓಡಿಸಿದರೇ ಮತ್ತೊಂದು ತಂಡ  ಅವಳಿ ಆನೆ ಮರಿಗಳನ್ನು ಹೊಂಡದಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ‌. ಬಳಿಕ ಕೆಲವೇ ಹೊತ್ತಲ್ಲಿ ತಾಯಿ ಬಂದು ಎರಡೂ ಮರಿಗಳನ್ನು ಕಾಡೊಳಕ್ಕೆ ಕರೆದೊಯ್ದಿದೆ.

ಇದನ್ನೂ ಓದಿ- Snake Video: ಸ್ನಾನದ ಮನೆಯಲ್ಲಿ ಅಡಗಿ ಕೂತಿದ್ದ ಕಾಳಿಂಗ ಸರ್ಪ!

ಮರಿಗಳು ಸಾಯುವ ಸಾಧ್ಯತೆ ಇತ್ತು:
ಕುತ್ತಿಗೆ ತನಕ ನೀರಿದ್ದರಿಂದ  ಅವಳಿ ಮರಿಗಳು ನೀರಿನೊಳಗೆ ಮುಳುಗಿ ಅಸುನೀಗುವ ಆತಂಕವೂ ಇತ್ತು. ಅದಲ್ಲದೆ, ಮರಿಗಳು ನಿರಂತರವಾಗಿ ಮೇಲೆ ಬರಲು ಕಷ್ಟ ಪಡುತ್ತಿದ್ದವು, ಅದಕ್ಕಾಗಿ ತಮ್ಮೆಲ್ಲಾ ಶಕ್ತಿಯನ್ನು ವ್ಯಯಿಸುತ್ತಿದ್ದರಿಂದ  ಬಳಲಿಕೆಯಿಂದ ಮೃತಪಡುವ ಸಾಧ್ಯತೆಯೂ ಇತ್ತು. ಈ ಕಾರಣದಿಂದಾಗಿ ಈ ರಕ್ಷಣಾ ಕಾರ್ಯ ನಡೆಸಿದೆವು ಎಂದು ಸಿಎಫ್ಒ ರಮೇಶ್ ಕುಮಾರ್ ಹೇಳಿದ್ದಾರೆ.

ಈ ರಕ್ಷಣಾ ಕಾರ್ಯ ಅಧಿಕಾರಿಗಳಿಗೆ, ಸಿಬ್ಬಂದಿಗೆ ಒಳ್ಳೆಯ ಅನುಭವ ಮತ್ತು ಸಂತಸ ಕೊಟ್ಟಿದೆ. ಈ ಹಿಂದೆ 1994 ರಲ್ಲಿ, ನಮ್ಮ ಸಿಬ್ಬಂದಿ ಅವಳಿ ಮರಿಗಳೊಟ್ಟಿಗೆ ಆನೆಯನ್ನು ನೋಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಅವರು ಜೀ ಕನ್ನಡ  ನ್ಯೂಸ್ ಗೆ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News