Viral Video: ಪಿತ್ತ ನೆತ್ತಿಗೇರಿರುವ ಗೂಳಿಯ ಜೊತೆಗೆ ವ್ಯಕ್ತಿಯ ಚೆಲ್ಲಾಟ.. ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ

Trending Video: ಗೂಳಿ ಸೇಡು ತೀರಿಸಿಕೊಂಡ ಪರಿಯನ್ನು ನೋಡಿದರೆ ನಿಮಗೂ ಕೂಡ ಗೂಳಿ ಮಾಡಿದ್ದು ಸರಿಯೇ ಎಂದೆನೆಸಲಿದೆ. ಅಷ್ಟೇ ಅಲ್ಲ ಗೂಳಿಯ ಜೊತೆಗೆ ಚೆಲ್ಲಾಟವಾಡುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆ ನೀವು ಕೇಳುವಿರಿ.  

Written by - Nitin Tabib | Last Updated : Aug 29, 2022, 04:23 PM IST
  • ಒಂದು ಕ್ಷಣ ತಲೆ ಗಿರಿಕಿ ಹೊಡೆಯುವಂತೆ ಮಾಡುವ ಹಲವಾರು ವಿಡಿಯೋಗಳು ನಿತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
  • ಅಂತಹುದೇ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ.
  • ಈಗ ನೀವೇ ಹೇಳಿ ಬಲಿಷ್ಠ ಪ್ರಾಣಿಯ ಜೊತೆಗೆ ಪಂಗಾಗಿಳಿದರೆ ಏನಾಗಲಿದೆ?
Viral Video: ಪಿತ್ತ ನೆತ್ತಿಗೇರಿರುವ ಗೂಳಿಯ ಜೊತೆಗೆ ವ್ಯಕ್ತಿಯ ಚೆಲ್ಲಾಟ.. ಮುಂದೇನಾಯ್ತು ತಿಳಿಯಲು ವಿಡಿಯೋ ನೋಡಿ title=
Bull Attack Viral Video

Viral Video On Social Media: ಒಂದು ಕ್ಷಣ ತಲೆ ಗಿರಿಕಿ ಹೊಡೆಯುವಂತೆ ಮಾಡುವ ಹಲವಾರು ವಿಡಿಯೋಗಳು ನಿತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅಂತಹುದೇ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈಗ ನೀವೇ ಹೇಳಿ ಬಲಿಷ್ಠ ಪ್ರಾಣಿಯ ಜೊತೆಗೆ ಪಂಗಾಗಿಳಿದರೆ ಏನಾಗಲಿದೆ? ...... ಪಿತ್ತ ನೆತ್ತಿಗೇರಿದ ಗೂಳಿಯ ಮುಂದೆ ಓರ್ವ ವ್ಯಕ್ತಿ ಕೈಬೀಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಅದನ್ನು ಗಮನಿಸಿದರೆ, ಯಾವುದಾದರೊಂದು ರೇಸ್ ನಡೆಯುತ್ತಿದೆ ಎಂದು ನಿಮಗನಿಸಬಹುದು. ವ್ಯಕ್ತಿ ಗೂಳಿಯ ಮುಂದೆ ಕೈಸನ್ನೆ ಮಾಡುತ್ತಾ ಸೂಚನೆಗಳನ್ನು ನೀಡುತ್ತಿದ್ದಾನೆ. ಅಷ್ಟರಲ್ಲೇ ತಲೆಗೆ ತಾಪ ಏರಿಸಿಕೊಂಡ ಗೂಳಿ ವ್ಯಕ್ತಿಗೆ ಜೀವನದಲ್ಲಿ ಮರೆಯಲಾಗದ ಒದೆತ ನೀಡಿದೆ. ಗೂಳಿಯ ಒದೆತದಿಂದ ತತ್ತರಿಸಿ ಹೋಗಿರುವ ಆ ವ್ಯಕ್ತಿ ಸ್ಥಳದಲ್ಲಿಯೇ ಚಿತ್ತಾಗಿದ್ದಾನೆ. 

ಇದನ್ನೂ ಓದಿ-Viral Video: ಪ್ರೇಮಿಗಳಂತೆ ಆಲಿಂಗನದಲ್ಲಿ ಮೈಮರೆತ ಉಡಗಳು: ಅರ್ಧ ಗಂಟೆ ಟ್ರಾಫಿಕ್ ಜಾಮ್!

ವರದಿಗಳ ಪ್ರಕಾರ ಈ ವೈರಲ್ ವಿಡಿಯೋ ಸ್ಪೇನ್ ನಿಂದ ಹೊರಹೊಮ್ಮಿದೆ ಎನ್ನಲಾಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗೂಳಿಯ ಜೊತೆಗೆ ಕಪ್ಪು ಬಣ್ಣದ ಟೀಶರ್ಟ್ ಧರಿಸಿ ನಿಂತಿದ್ದಾನೆ. ನಂತರ ಏಕಾಏಕಿ ವ್ಯಕ್ತಿ ತನ್ನ ಒಂದು ಕೈಯನ್ನು ಗೂಳಿಯ ಕೊಂಬಿನ ಮೇಲೆ ಇಡುತ್ತಾನೆ. ಮರುಕ್ಷಣವೇ ಗೂಳಿಯ ಕೋಪ ನೆತ್ತಿಗೇರುತ್ತದೆ ಮತ್ತು ಗೂಳಿ ತನ್ನ ಕೊಂಬುಗಳಿಂದ ವ್ಯಕ್ತಿಯ ಕೆನ್ನೆಗೆ ಭಾರಿ ರಭಸದಿಂದ ತಿವಿಯುತ್ತದೆ ಮತ್ತು ವ್ಯಕ್ತಿ ಗಾಳಿಯಲ್ಲಿ ಹಾರಿ ನೆಲಕ್ಕೆ ಅಪ್ಪಳಿಸುತ್ತಾನೆ. ಅಷ್ಟಕ್ಕೇ ನಿಲ್ಲದ ಗೂಳಿ ನಂತರ ವ್ಯಕ್ತಿಯ ಹೊಟ್ಟೆ, ಕುತ್ತಿಗೆ ಭಾಗಕ್ಕೆ ಬಲವಾಗಿ ಒದೆತ ನೀಡುತ್ತದೆ. ಇದನ್ನು ನೋಡಿ ಅಕ್ಕಪಕ್ಕದ ಜನರು ಭಯಭೀತರಾಗುತ್ತಾರೆ ಮತ್ತು ಕಿರುಚಾಡಲು ಆರಂಭಿಸುತ್ತಾರೆ... ಮುಂದುವರೆಯುವುದಕ್ಕೂ ಮುನ್ನ ವಿಡಿಯೋ ನೋಡಿ....

ಇದನ್ನೂ ಓದಿ-Snake Attack: ಕಿರುಕುಳ ನೀಡಿದ ವ್ಯಕ್ತಿಯ ಕೈಗೆ ಪದೇ ಪದೇ ದಾಳಿ ಇಟ್ಟ ಹಾವು... ವಿಡಿಯೋ ನೋಡಿ

ಬೆಚ್ಚಿಬೀಳಿಸುವ ಈ ವಿಡಿಯೋವನ್ನು ರಿಂಕಿ ಗೋರ್ವಿಯಸ್ ಎಂಬುವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೃತ್ತಿಯಲ್ಲಿ ರಿಂಕಿ ಗೋರ್ವಿಯಸ್ ಪ್ರಾಣಿಗಳ ಹಕ್ಕು ರಕ್ಷಣೆಯ ಕಾರ್ಯಕರ್ತರಾಗಿದ್ದಾರೆ. ಈ ವಿಡಿಯೋವನ್ನು ಇದುವರೆಗೆ ಸುಮಾರು 1 ಲಕ್ಷ 33 ಸಾವಿರ ಜನರು ನೋಡಿದ್ದಾರೆ. ಅಷ್ಟೇ ಅಲ್ಲ 68 ಸಾವಿರ ಜನರು ಲೈಕ್ ಕೂಡ ಮಾಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News