Wedding Video : ಮದುವೆ ಶಾಸ್ತ್ರ ಮುಗಿಯುತ್ತಿದ್ದಂತೆಯೇ ತಪ್ಪೇ ನಡೆದು ಹೋಯಿತು ಎನ್ನುವಂತೆ ಬಿಕ್ಕಿ ಬಿಕ್ಕಿ ಅತ್ತ ವಧು ವರ

Wedding Video : ಇಲ್ಲೊಂದು ಮದುವೆಯಲ್ಲಿ ವರ ಮತ್ತು ವಧು ಮದುವೆ ವೇದಿಕೆಯಲ್ಲಿ ನಿಂತುಕೊಂಡು ಅತ್ತಿದ್ದಾರೆ.  ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮದುವೆ ಶಾಸ್ತ್ರ ಮುಗಿದು ಆರತಕ್ಷತೆಗೆಂದು ವೇದಿಕೆಗೆ ಬಂದಾಗ ಈ ಘಟನೆ ನಡೆದಿದೆ.   

Written by - Ranjitha R K | Last Updated : Mar 9, 2023, 12:51 PM IST
  • ವೇದಿಕೆಯಲ್ಲಿಯೇ ಅತ್ತ ವಧು ವರ
  • ವೈರಲ್ ಆಯಿತು ವಿಡಿಯೋ
  • ಹರಿದು ಬರುತ್ತಿದೆ ಕಾಮೆಂಟ್
Wedding Video : ಮದುವೆ ಶಾಸ್ತ್ರ ಮುಗಿಯುತ್ತಿದ್ದಂತೆಯೇ ತಪ್ಪೇ ನಡೆದು ಹೋಯಿತು ಎನ್ನುವಂತೆ ಬಿಕ್ಕಿ ಬಿಕ್ಕಿ ಅತ್ತ ವಧು ವರ  title=

Wedding Video : ಮದುವೆಯ ಈ ಬಂಧ ಅನುರಾಗ ಅನುಬಂಧ .... ಈ ಹಾಡನ್ನು  ನಾವು ಕೇಳಿರುತ್ತೇವೆ. ಅದು ಕೂಡಾ ಮದುವೆ ಮನೆಯಲ್ಲಿ ಹೆಚ್ಚಾಗಿ ಈ ಹಾಡನ್ನು ನುಡಿಸುತ್ತಾರೆ. ಹೌದು ಈ ವಿವಾಹ ಬಂಧವೇ ಹಾಗೆ. ಈ ದಿನಕ್ಕಾಗಿ ಪ್ರತಿಯೊಬ್ಬರೂ ಕಾಯುತ್ತಿರುತ್ತಾರೆ. ಮದುವೆ ಮುಹೂರ್ತ ನಿಗದಿಯಾದ ಕ್ಷಣದಿಂದ ಮನಸ್ಸಿನ ತುಂಬೆಲ್ಲಾ ಸಾವಿರ ಕನಸು. 

ಸಾಮಾನ್ಯವಾಗಿ ಮದುವೆ ಎಂದರೆ ಅಲ್ಲಿ ಸಂತೋಷ ಸಡಗರ ಮನೆ ಮಾಡಿರುತ್ತದೆ. ನಗು ಕೇಕೆಯದ್ದೇ ಸದ್ದು. ವಧು- ವರರ ಮುಖದಲ್ಲೂ ನಗು ಎದ್ದು ಕಾಣುತ್ತಿರುತ್ತದೆ. ಆದರೆ ಇಲ್ಲೊಂದು ಮದುವೆಯಲ್ಲಿ ವರ ಮತ್ತು ವಧು ಮದುವೆ ವೇದಿಕೆಯಲ್ಲಿ ನಿಂತುಕೊಂಡು ಅತ್ತಿದ್ದಾರೆ.  ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮದುವೆ ಶಾಸ್ತ್ರ ಮುಗಿದು ಆರತಕ್ಷತೆಗೆಂದು ವೇದಿಕೆಗೆ ಬಂದಾಗ ಈ ಘಟನೆ ನಡೆದಿದೆ. 

ಇದನ್ನೂ ಓದಿ : Viral Video: ಕಾಗೆ ಹಿಡಿದ ಬಾಲಕ ಮುಂದೇನು ಮಾಡಿದ ನೀವೆ ನೋಡಿ.. 

ವರದಿಗಳ ಪ್ರಕಾರ, ಇಬ್ಬರೂ  ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು.  ಸುದೀರ್ಘ ಸಮಯದ ಪ್ರೀತಿಯ ನಂತರ ಇದೀಗ ವಿವಾಹ ಬಂಧದಲ್ಲಿ ಬೆಸೆದುಕೊಂಡಿದ್ದಾರೆ.  ತಾನು ಪ್ರೀತಿಸಿದ ಜೀವ ಜೀನವ ಪರ್ಯಂತಕ್ಕೆ ನನ್ನದಾಯಿತು ಎನ್ನುವ ಸಂತೋಷಕ್ಕೋ ಏನೋ ಗೊತ್ತಿಲ್ಲ ವರ ಭಾವುಕನಾಗಿದ್ದಾನೆ. ವರನನ್ನು ನೋಡಿ ವಧು ಕೂಡಾ ಕಣ್ಣೀರು ಹಾಕಿದ್ದಾಳೆ. ಮೊದಲಿಗೆ ವರನ ಕಣ್ಣಲ್ಲಿ ನೀರು ಬರುವುದನ್ನು ಗಮನಿಸಬಹುದು. ಆದರೆ ಏನು ನಡೆಯುತ್ತಿದೆ ಎಂದು ಕೇಳುವಷ್ಟರಲ್ಲಿ ವಧು ಕೂಡಾ ಅಳಲು ಆರಂಭಿಸುತ್ತಾಳೆ. ಮಾತ್ರವಲ್ಲ, ವಧು ಇಲ್ಲಿ ವರನನ್ನು ಸಂತೈಸುವುದನ್ನು ಕೂಡಾ ಕಾಣಬಹುದು. 

 

ಇದನ್ನೂ ಓದಿ Viral Video : ಪ್ರಿಯತಮನ ಕಂಡು ಕಂಟ್ರೋಲ್‌ ತಪ್ಪಿದ ವಧು.. ವರನ ಎದುರೇ ಮಾಡಿದಳು...!!

ಈ ವೀಡಿಯೊವನ್ನು Instagram ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜನ ಕಮೆಂಟ್ ಮಾಡಲು ಶುರು ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News