ಬಾಲಿವುಡ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಸೌತ್‌ ಬ್ಯೂಟಿ ಜ್ಯೋತಿಕಾ!

Actress Jyothika Movies : ನಟಿ ಜ್ಯೋತಿಕಾ ಚಿತ್ರರಂಗಕ್ಕೆ ಬಂದು ಹಲವು ವರ್ಷಗಳಾಗಿವೆ. ಜ್ಯೋತಿಕಾ ಬಾಲಿವುಡ್‌ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.   

Written by - Chetana Devarmani | Last Updated : May 10, 2024, 11:53 AM IST
  • ನಟ ಸೂರ್ಯ ಪತ್ನಿ ನಟಿ ಜ್ಯೋತಿಕಾ
  • ಬಾಲಿವುಡ್‌ನಿಂದ ವೃತ್ತಿಜೀವನ ಪ್ರಾರಂಭಿಸಿದ ನಟಿ
  • ಬಾಲಿವುಡ್ ಬಗ್ಗೆ ಜ್ಯೋತಿಕಾ ಶಾಕಿಂಗ್ ಕಾಮೆಂಟ್
ಬಾಲಿವುಡ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಸೌತ್‌ ಬ್ಯೂಟಿ ಜ್ಯೋತಿಕಾ!  title=

Actress Jyothika On Bollywood: ನಟಿ ಜ್ಯೋತಿಕಾ ಚಿತ್ರರಂಗಕ್ಕೆ ಬಂದು ಹಲವು ವರ್ಷಗಳಾಗಿವೆ. ಜ್ಯೋತಿಕಾ ಬಾಲಿವುಡ್‌ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಅವರಿಗೆ ಹಿಂದಿ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅದಕ್ಕೆ ಕಾರಣವನ್ನು ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಜ್ಯೋತಿಕಾ ವಿವರಿಸಿದ್ದಾರೆ. ಬಾಲಿವುಡ್‌ ಬಗ್ಗೆ ಅವರು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ 'ಶೈತಾನ್' ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಜ್ಯೋತಿಕಾ ನಟಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈಗ ಹಿಂದಿಯಲ್ಲಿ ಶ್ರೀಕಾಂತ್ ಚಿತ್ರದಲ್ಲಿ ರಾಜಕುಮಾರ್ ರಾವ್ ಜೊತೆ ನಟಿಸಲಿದ್ದಾರೆ. ಕಳೆದ 27 ವರ್ಷಗಳಿಂದ ಹಿಂದಿ ಚಿತ್ರರಂಗದಿಂದ ನನಗೆ ಯಾವುದೇ ಅವಕಾಶಗಳು ಬಂದಿಲ್ಲ ಎಂದು ಜ್ಯೋತಿಕಾ ಹೇಳಿದ್ದಾರೆ. 

ಇದನ್ನೂ ಓದಿ: ನಟ ಮಂಡ್ಯ ರಮೇಶ್‌ ಹೆಂಡತಿ ಯಾರು ಗೊತ್ತೇ.. ಮಗಳು ಕನ್ನಡದ ಖ್ಯಾತ ನಟಿ ! 

27 ವರ್ಷಗಳ ಹಿಂದೆ ನಾನು ಸೌತ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದೆ. ನಂತರ ಅಲ್ಲಿ ಹೆಚ್ಚು ಸಿನಿಮಾ ಮಾಡಿದೆ. ಹಿಂದಿಯಲ್ಲಿ ನನ್ನ ಮೊದಲ ಚಿತ್ರ ಯಶಸ್ವಿಯಾಗಲಿಲ್ಲ. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ನಾಯಕಿಯರೆಲ್ಲ ದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಸಿನಿಮಾ ಮಾಡುತ್ತಿದ್ದರು. ನನ್ನ ಸಿನಿಮಾವನ್ನು ಸಹ ದೊಡ್ಡ ಪ್ರೊಡಕ್ಷನ್ ಹೌಸ್ ನಿರ್ಮಿಸಿತ್ತು. ಆದರೆ ದುರದೃಷ್ಟವಶಾತ್ ಆ ಸಿನಿಮಾ ಪ್ಲೇ ಆಗಲಿಲ್ಲ ಎಂದಿದ್ದಾರೆ. 

ಆ ನಂತರ ಸೌತ್ ನ ಸಿನಿಮಾ ಒಪ್ಪಿಕೊಂಡೆ. ಬಾಲಿವುಡ್ ಜನ ನಾನು ದಕ್ಷಿಣ ಭಾರತದವಳು ಎಂದು ಭಾವಿಸಿದ್ದರು. ನಾನು ಹಿಂದಿ ಚಿತ್ರಗಳನ್ನು ಮಾಡುವುದಿಲ್ಲ ಎಂದು ಅವರು ಭಾವಿಸಿದ್ದರು.  ಸೌತ್‌ನಲ್ಲಿ ಅದ್ಭುತ ಸಿನಿಮಾ ಮಾಡಿದ್ದೇನೆ. ನಾನು ಹಿಂದಿ ಚಿತ್ರಗಳಿಂದ ದೂರ ಉಳಿದಿಲ್ಲ. ಆದರೆ ನನಗೆ ಯಾವುದೇ ಆಫರ್ ಬಂದಿಲ್ಲ ಎಂದಿದ್ದಾರೆ ಜ್ಯೋತಿಕಾ.

ಇದನ್ನೂ ಓದಿ:  ಟೀಸರ್ ಮೂಲಕ ಸದ್ದು ಮಾಡುತ್ತಿದೆ "ರಣಹದ್ದು"

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News