Viral Video : ಶಾಲೆಗೆಂದು ಹೋಗುವ ಈ ವಿದ್ಯಾರ್ಥಿಗಳು ಮಾರ್ಗ ಮಧ್ಯೆ ಮಾಡುವ ಕೆಲಸ ಇದೇನಾ?

Viral Video : ಮದುವೆ ಎನ್ನುವುದು ಗಂಡು ಮತ್ತು ಹೆಣ್ಣಿನ ನಡುವಿನ ಪವಿತ್ರ ಬಂಧ. ಮದುವೆ ಕೇವಲ ಗಂಡು ಹೆಣ್ಣಿನ ಮಿಲನ ಮಾತ್ರವಲ್ಲ ಎರಡು ಕುಟುಂಬಗಳನ್ನೂ ಬೆಸೆದು ಬಿಡುತ್ತದೆ.   

Written by - Ranjitha R K | Last Updated : Feb 2, 2023, 04:30 PM IST
  • ಮಾರ್ಗ ಮಧ್ಯೆ ತಾಳಿ ಕಟ್ಟುವ ವಿದ್ಯಾರ್ಥಿ
  • ಒಂದು ಚೂರೂ ಅಳುಕಿಲ್ಲದ ವರ್ತನೆ
  • ವಿದ್ಯಾರ್ಥಿಗಳ ವಿಡಿಯೋ ವೈರಲ್ ಆಗುತ್ತಿದೆ
Viral Video : ಶಾಲೆಗೆಂದು ಹೋಗುವ ಈ ವಿದ್ಯಾರ್ಥಿಗಳು ಮಾರ್ಗ ಮಧ್ಯೆ ಮಾಡುವ ಕೆಲಸ ಇದೇನಾ?  title=

Viral Video : ಮದುವೆ ಎನ್ನುವುದು ಗಂಡು ಮತ್ತು ಹೆಣ್ಣಿನ ನಡುವಿನ ಪವಿತ್ರ ಬಂಧ. ಮದುವೆ ಕೇವಲ ಗಂಡು ಹೆಣ್ಣಿನ ಮಿಲನ ಮಾತ್ರವಲ್ಲ ಎರಡು ಕುಟುಂಬಗಳನ್ನೂ ಬೆಸೆದು ಬಿಡುತ್ತದೆ. ಮಗಳದ್ದೇ ಆಗಲಿ ಮಗನದ್ದೇ ಆಗಲಿ ಮದುವೆ ಮಾಡಿ ಮುಗಿಸಬೇಕಾದರೆ ತಂದೆ ತಾಯಿ ಬಹಳ ಕಷ್ಟ ಪಡುತ್ತಾರೆ. ಯಾಕೆಂದರೆ ಇಲ್ಲಿ ಹಣ ಒಂದೇ ವಿಷಯವಾಗಿರುವುದಿಲ್ಲ. ಹಣವನ್ನು ಮೀರಿದ ಅನೇಕ ಸಂಗತಿಗಳು ವಿವಾಹದ ಸುತ್ತ ಬೆಸೆದುಕೊಂಡಿರುತ್ತವೆ. 

ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಕೂಡಾ ಒಂದು ರೀತಿಯ ಆಟವೇ ಆಗಿದೆ. ಇವತ್ತು ಪ್ರೀತಿ ನಾಳೆ ಮದುವೆ, ನಾಡಿದ್ದು ಡೈವೋರ್ಸ್ ಅನ್ನುವ ಮಟ್ಟಕ್ಕೆ  ಇಂದಿನ ಯುವ ಪೀಳಿಗೆ ತಲುಪಿದೆ. ಪ್ರೀತಿ ಎನ್ನುವುದಂತೂ ಮಕ್ಕಳಾಟವೇ ಆಗಿ ಹೋಗಿದೆ. ಶಾಲೆಗೆ ಹೋಗುವ ಮಕ್ಕಳ ಬಾಯಿಯಲ್ಲೂ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಎನ್ನುವ ಮಾತು ಸಲೀಸಾಗಿ ಬಂದು ಬಿಡುತ್ತದೆ. 

ಇದನ್ನೂ ಓದಿ : ಗರಿ ಬಿಚ್ಚಿ ಕುಣಿದಾಡುವ ನವಿಲು ಬಾನೆತ್ತರಕ್ಕೆ ಹಾರುವ ಮನಮೋಹಕ ವಿಡಿಯೋ ಇಲ್ಲಿದೆ

ಆದರೆ ಈ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಬೆಚ್ಚಿ ಬೀಳಿಸುವಂತಿದೆ. ಶಾಲೆಗೆ ಹೋಗುವ ಮಕ್ಕಳು ದಾರಿ ಮಧ್ಯೆ ತಾಳಿ ಕಟ್ಟಿಕೊಳ್ಳುವ ಹಂತಕ್ಕೆ ಬಂದಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ. ಇಷ್ಟು ಮಾತ್ರವಲ್ಲ ಹುಡುಗ ಹುಡುಗಿಯ ಕುತ್ತಿಗೆಗೆ ಬಿಗಿಯುತ್ತಿದ್ದಂತೆಯೇ ಅಲ್ಲಿ ಇರುವ ಮಕ್ಕಳು ಇಬ್ಬರ ಮೇಲೆ ಹೂವನ್ನು ಹಾಕುವುದನ್ನು ಕೂಡಾ ಕಾಣಬಹುದು. ಅಲ್ಲೇ ಇದ್ದ ಯಾರೋ ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡಿದ್ದಾರೆ. 

 

ಫಂಟಾಪ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಲ್ಲದೆ, ಈ ವಿಡಿಯೋಗೆ ನೆಟಿಜನ್‌ಗಳು ಹಲವಾರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಈ ವೀಡಿಯೋವನ್ನು ಇದುವರೆಗೆ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ :Funny Video: ಮಂಗಗಳ ಕೈಗೆ ಸ್ಮಾರ್ಟ್‌ಫೋನ್‌ ಸಿಕ್ರೆ ಹೀಗಿರುತ್ತೆ ನೋಡಿ..

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News