BMTC Conductor: ನಮ್ಮ ದೇಶದಲ್ಲಿ ಪ್ರತಿ ನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಚಿಲ್ಲರೆಯೇ ದೊಡ್ಡ ಸಮಸ್ಯೆ. ಬೀದಿ ಬದಿಯ ವ್ಯಾಪಾರಿಯೊಂದಿಗಾಗಲಿ, ಬಸ್ ಚಾಲಕನೊಂದಿಗಾಗಲಿ ಅಥವಾ ಆಟೋ ರಿಕ್ಷಾ ಚಾಲಕನೊಂದಿಗಾಗಲಿ ಪ್ರತಿದಿನ ಈ ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತೇವೆ. ಚಿಲ್ಲರೆ ಸರಿದೂಗಿಸಲು ಅಂಗಡಿಯಲ್ಲಿ ಚಾಕೋಲೇಟ್ ಕೊಟ್ಟರೆ, ತರಕಾರಿ ಅಂಗಡಿಯಲ್ಲಿ ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಕೊಡುತ್ತಾರೆ. ಆದರೆ, ಬಸ್ನಲ್ಲಿ ಪ್ರಯಾಣಿಸುವಾಗಲೂ ಚಿಲ್ಲರೆ ಸಮಸ್ಯೆ ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಟಿಕೆಟ್ನ ಹಿಂಭಾಗದಲ್ಲಿ ಎಷ್ಟು ಚಿಲ್ಲರೆ ನೀಡಬೇಕೆಂದು ಕಂಡಕ್ಟರ್ ಬರೆದಿರುತ್ತಾರೆ. ಆದಾಗ್ಯೂ, ಕೆಲವೊಮ್ಮೆ ಬಸ್ ಇಳಿಯುವಾಗ ಚಿಲ್ಲರೆ ಕೇಳಿ ಪಡೆಯುವುದನ್ನೇ ನಾವು ಮರೆಯುತ್ತೇವೆ. ಇತ್ತೀಚೆಗೆ ಅಂತಹುದ್ದೇ ಒಂದು ಘಟನೆ ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು ವ್ಯಕ್ತಿಯೊಬ್ಬ ಬಸ್ ಕಂಡಕ್ಟರ್ಗೆ ತಕ್ಕ ಪಾಠ ಕಲಿಸಿದ್ದಾರೆ.
ವಾಸ್ತವವಾಗಿ, ಬೆಂಗಳೂರಿನ ವ್ಯಕ್ತಿಯೊಬ್ಬ ಬಿಎಂಟಿಸಿ ಬಸ್ನಲ್ಲಿ ಟಿಕೆಟ್ (BMTC Bus Ticket) ನೀಡಿ 5 ರೂ. ಚಿಲ್ಲರೆ ವಾಪಸ್ ನೀಡಲು ನಿರಾಕರಿಸಿದ ಕಂಡಕ್ಟರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತಂತೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ನಿತಿನ್ ಕೃಷ್ಣ ಎಂಬ ಪ್ರಯಾಣಿಕರೊಬ್ಬರು ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆ- ಬಿಎಂಟಿಸಿ ಬಸ್ ಟಿಕೆಟ್ನ 15 ರೂಪಾಯಿಗಳ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
I lost my 5 rs as this conductor didnt had even 1 rupee change (?) to return. Is there any solution to this? @BMTC_BENGALURU pic.twitter.com/2KFCCN5EOW
— Nithin Krishna (@N_4_NITHIN) April 14, 2024
ಇದು ಕಂಡಕ್ಟರ್ಗಳು ಹೆಚ್ಚುವರಿ ಹಣ ಗಳಿಸಲು ಕಂಡು ಕೊಂಡಿರುವ ಮಾರ್ಗವೇ?
ನಾನು ಪ್ರಯಾಣಿಸಿದ ಬಿಎಂಟಿಸಿ ಕಂಡಕ್ಟರ್ (BMTC Conductor) ಬಳಿ ಒಂದು ರೂಪಾಯಿ ಚಿಲ್ಲರೆ ಸಹ ಇರಲಿಲ್ಲ. ಹಾಗಾಗಿ, ಕಂಡಕ್ಟರ್ ನನಗೆ ಹಿಂದಿರುಗಿಸಬೇಕಿದ್ದ 5 ರೂಪಾಯಿಯನ್ನು ನಾನು ಕಳೆದುಕೊಂಡಿದ್ದೇನೆ. ಇದಕ್ಕೆ ಏನಾದರೂ ಪರಿಹಾರವಿದೆಯೇ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿರುವ ನಿತಿನ್ ಕೃಷ್ಣ ಇದಕ್ಕೆ @BMTC_BENGALURU ಟ್ಯಾಗ್ ಮಾಡಿದ್ದಾರೆ.
Either you should provide them with sufficient change before the start of the trip or else use technology to do online payments. Should i lose my money everytime? And conductors are using this to earn some silly bucks
— Nithin Krishna (@N_4_NITHIN) April 14, 2024
ಇದನ್ನೂ ಓದಿ- ಬಂಡೀಪುರ ಸಫಾರಿಯಲ್ಲಿ ಗಾಯಗೊಂಡ ವ್ಯಾಘ್ರಗಳ ದರ್ಶನ
ಇನ್ನೂ ನಿತಿನ್ ಕೃಷ್ಣ ಅವರ ಮತ್ತೊಂದು ಪೋಸ್ಟ್ನಲ್ಲಿ, ಪ್ರವಾಸವನ್ನು ಪ್ರಾರಂಭಿಸುವ ಮೊದಲು ಅವರಿಗೆ ಸಾಕಷ್ಟು ಭತ್ಯೆ ನೀಡಬೇಕು ಅಥವಾ ಆನ್ಲೈನ್ ಪಾವತಿಗೆ ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಬಳಸಬೇಕು. ಇಲ್ಲದಿದ್ದರೆ ಪ್ರತಿ ಬಾರಿ ನನ್ನಂತ ಪ್ರಯಾಣಿಕರು ಹಣ ಕಳೆದುಕೊಳ್ಳುತ್ತಾರೆ. ಈ ನೆಪದಲ್ಲಿ ಕಂಡಕ್ಟರ್ಗಳು ಸ್ವಲ್ಪ ಹಣ ಸಂಪಾದಿಸುತ್ತಿದ್ದಾರೆ ಎಂದವರು ಸಲಹೆ ನೀಡಿದ್ದಾರೆ.
ಈ ಪೋಸ್ಟ್ ಗೆ ಕಾಮೆಂಟ್ ಗಳ ಮಹಾಪೂರವೇ ಹರಿದಿದ್ದು, ಕಂಡಕ್ಟರ್ಗಳ ಇಂತಹ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಸದಾ ಕಂಡಕ್ಟರ್ಗಳು ಹೀಗೆಯೇ ಮಾಡುತ್ತಾರೆ ಎಂದು ಬರೆದಿದ್ದರೆ, ಮತ್ತೊಬ್ಬ ಸಾಮಾಜಿಕ ಬಳಕೆದಾರರು, ಕಂಡಕ್ಟರ್ಗಳಿಗೆ ಇದು ಅಭ್ಯಾಸವಾಗಿ ಹೋಗಿದೆ. ಬಹುಶಃ ಅವರು ಹೆಚ್ಚುವರಿ ಹಣವನ್ನು ಗಳಿಸಲು ಈ ರೀತಿ ಮಾಡುತ್ತಿರಬಹುದು ಎಂಬ ಅನುಮಾನಗಳು ಉದ್ಬವಿಸುತ್ತದೆ ಎಂದು ಬರೆದಿದ್ದಾರೆ.
ಇದನ್ನೂ ಓದಿ- Viral Video: FIR ದಾಖಲಿಸದ ಪೊಲೀಸ್ ಅಧಿಕಾರಿಗೆ ಆರತಿ ಎತ್ತಿದ ಮಹಿಳೆ..!
ಈ ಪೋಸ್ಟ್ನಲ್ಲಿ ಇನ್ನೋರ್ವ ಬಳಕೆದಾರರು, "ಸಾರ್ವಜನಿಕ ಸಾರಿಗೆಯಲ್ಲಿ ಯಾವುದೇ ತೊಂದರೆಯಿಲ್ಲದೆ ಪ್ರಯಾಣಿಸಲು, ಪ್ರಯಾಣಿಕರು ಸಹ ಚಿಲ್ಲರೆ ಕೊಟ್ಟು ಸಹಕರಿಸುವುದು ಮುಖ್ಯ. ಇದಕ್ಕಾಗಿ, ನಿಮ್ಮ ಟಿಕೆಟ್ಗಾಗಿ ಎಷ್ಟು ಹಣ ಅಗತ್ಯವಿದೆಯೋ ಅದೇ ಮೊತ್ತದ ಹಣವನ್ನು ಇಡುವುದನ್ನು ಅಭ್ಯಾಸ ಮಾಡಿಕೊಳ್ಳಿ" ಎಂದು ಬರೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.