ಆನ್‌ಲೈನ್‌ ಕ್ಲಾಸ್‌ಗೆ ತಪ್ಪದೇ ಹಾಜರಾಗುವ ಬೆಕ್ಕು.. ವಿಶ್ವವಿದ್ಯಾಲಯದಿಂದ ಅಭಿನಂದನೆ

ಅಮೆರಿಕದ ವಿಶ್ವವಿದ್ಯಾಲಯವೊಂದು ಬೆಕ್ಕನ್ನು ಅಭಿನಂದಿಸಿದೆ. ಈ ಬೆಕ್ಕು ಪ್ರತಿದಿನ ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿತ್ತು. 

Written by - Chetana Devarmani | Last Updated : Jun 6, 2022, 05:38 PM IST
  • ಆನ್‌ಲೈನ್‌ ಕ್ಲಾಸ್‌ಗೆ ತಪ್ಪದೇ ಹಾಜರಾಗುವ ಬೆಕ್ಕು
  • ಸಾಕಿದ ಯುವತಿಯ ಜೊತೆ ಆನ್‌ಲೈನ್ ಜೂಮ್ ತರಗತಿಗೆ ಹಾಜರಾದ ಬೆಕ್ಕು
  • ಅಮೆರಿಕದ ವಿಶ್ವವಿದ್ಯಾಲಯದಿಂದ ಅಭಿನಂದನೆ
ಆನ್‌ಲೈನ್‌ ಕ್ಲಾಸ್‌ಗೆ ತಪ್ಪದೇ ಹಾಜರಾಗುವ ಬೆಕ್ಕು.. ವಿಶ್ವವಿದ್ಯಾಲಯದಿಂದ ಅಭಿನಂದನೆ  title=
ಬೆಕ್ಕು

ಅಮೆರಿಕದಲ್ಲಿ ಬೆಕ್ಕೊಂದು ವಿಚಿತ್ರ ಕೆಲಸ ಮಾಡಿದೆ. ಈ ಬೆಕ್ಕು ನಿರಂತರವಾಗಿ ತನ್ನ ಸಾಕಿದ ಯುವತಿಯ ಜೊತೆ ಆನ್‌ಲೈನ್ ಜೂಮ್ ತರಗತಿಗೆ ಹಾಜರಾಗುತ್ತಿತ್ತು. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಅಧ್ಯಯನವನ್ನು ಪೂರ್ಣಗೊಳಿಸಲು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲಾಗಿದೆ. ಈ ವೇಳೆ ಫ್ರಾನ್ಸೆಸ್ಕಾ ಬಾರ್ಡೆರಿಯರ್ ತನ್ನ ಹೆಚ್ಚಿನ ಕಾಲೇಜು ಸಮಯವನ್ನು ಮನೆಯಲ್ಲಿಯೇ ಕಳೆಯಬೇಕಾಯಿತು. ಸಾಂಕ್ರಾಮಿಕ ಸಮಯದಲ್ಲಿ ಅವರು ಆನ್‌ಲೈನ್ ತರಗತಿಗಳಿಗೆ ಜೂಮ್ ಅಪ್ಲಿಕೇಶನ್ ಅನ್ನು ಬಳಸಿದರು.

ಇದನ್ನೂ ಓದಿ: Valley Of Flowers: ವರ್ಷಕ್ಕೊಮ್ಮೆ ಕಂಗೊಳಿಸುವ ಹೂವಿನ ಕಣಿವೆ: ನೀವೂ ಭೇಟಿ ನೀಡಿ

ತನ್ನ ಅಪಾರ್ಟ್ಮೆಂಟ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕಾಗಿತ್ತು ಎಂದು ಫ್ರಾನ್ಸೆಸ್ಕಾ ಹೇಳುತ್ತಾರೆ. ಆ ಸಮಯದಲ್ಲಿ ನನ್ನ ಬೆಕ್ಕು ಮಾತ್ರ ನನ್ನೊಂದಿಗೆ ಇತ್ತು. ಅವಳ ಹೆಸರು ಸೂಕಿ. ನಾನು ಈ ಸಮಯದಲ್ಲಿ, ಅವಳು ಯಾವಾಗಲೂ ನನ್ನೊಂದಿಗೆ ಲ್ಯಾಪ್‌ಟಾಪ್ ಬಳಿ ಕುಳಿತುಕೊಳ್ಳುತ್ತಿದ್ದಳು, ಅವಳು ಸಹ ಕ್ಲಾಸ್‌ ಕೇಳಲು ಬಯಸುತ್ತಿದ್ದಳು.

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಸಂತಸ ವ್ಯಕ್ತಪಡಿಸಿರುವ ಫ್ರಾನ್ಸೆಸ್ಕಾ ಬಾರ್ಡೆರಿಯರ್, ಇನ್ನು ಮುಂದೆ ನಾನು ಒಬ್ಬಳೇ ಪದವೀಧರ ಅಲ್ಲ ಎಂದು ಬರೆದುಕೊಂಡಿದ್ದಾರೆ. ನನ್ನ ಬೆಕ್ಕು ನಾನು ಹೊಂದಿರುವ ಪ್ರತಿಯೊಂದು ಜೂಮ್ ಕ್ಲಾಸ್‌ನ್ನು ಹಾಜರಾಗಿದೆ, ಆದ್ದರಿಂದ ನಾವಿಬ್ಬರೂ ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಒಟ್ಟಿಗೆ ಪದವಿ ಪಡೆಯುತ್ತೇವೆ ಎಂದಿದ್ದಾರೆ. ಅವರ ಈ ಪೋಸ್ಟ್ ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್‌ನಲ್ಲಿ ವೈರಲ್ ಆಗಿದೆ ಮತ್ತು 600 ಕ್ಕೂ ಹೆಚ್ಚು ಲೈಕ್ಸ್ ಮತ್ತು 75 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಳಿಸಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News