ಈ ದಿನಾಂಕದಿಂದ ಪ್ರೀಮಿಯಂ ಲೈಟ್ ಚಂದಾದಾರಿಕೆ ಯೋಜನೆಯನ್ನು ಕೊನೆಗೊಳಿಸಲಿದೆ YouTube

YouTube Premium Lite: ಯೂಟ್ಯೂಬ್‌ನ ಅಗ್ಗದ ಪಾವತಿಯ ಯೋಜನೆಯಾದ ಪ್ರೀಮಿಯಂ ಲೈಟ್ ಚಂದಾದಾರಿಕೆ ಯೋಜನೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. 

Written by - Yashaswini V | Last Updated : Sep 28, 2023, 09:11 PM IST
  • ಯುಟ್ಯೂಬ್ ತನ್ನ ಜಾಹೀರಾತು-ಮುಕ್ತ ಪ್ರೀಮಿಯಂ ಲೈಟ್ ಚಂದಾದಾರಿಕೆ ಯೋಜನೆಯನ್ನು ಕೊನೆಗೊಳಿಸುತ್ತಿದೆ.
  • ವರ್ಜ್ ವರದಿಯ ಪ್ರಕಾರ, ಗ್ರಾಹಕರು ಇದಕ್ಕೆ ಸಂಬಂಧಿಸಿದ ಇಮೇಲ್ ಅನ್ನು ಸ್ವೀಕರಿಸಿದ್ದಾರೆ.
  • ಅದರಲ್ಲಿ ಪ್ರೀಮಿಯಂ ಲೈಟ್ ಅನ್ನು ಸ್ಥಗಿತಗೊಳಿಸಲಾಗುವುದು ಎಂದು ಯೂಟ್ಯೂಬ್ ಹೇಳಿದೆ.
ಈ ದಿನಾಂಕದಿಂದ ಪ್ರೀಮಿಯಂ ಲೈಟ್ ಚಂದಾದಾರಿಕೆ ಯೋಜನೆಯನ್ನು ಕೊನೆಗೊಳಿಸಲಿದೆ YouTube title=

YouTube Premium Lite: ಯುಟ್ಯೂಬ್ ತನ್ನ ಜಾಹೀರಾತು-ಮುಕ್ತ ಪ್ರೀಮಿಯಂ ಲೈಟ್ ಚಂದಾದಾರಿಕೆ ಯೋಜನೆಯನ್ನು ರದ್ದುಗೊಳಿಸುತ್ತಿದೆ. ಯೂಟ್ಯೂಬ್‌ನಲ್ಲಿ ಜಾಹೀರಾತು ಕಿರಿಕಿರಿಯನ್ನು ನಿವಾರಿಸಲು ಉತ್ತಮ ಮಾರ್ಗವಾಗಿದ್ದ  ಪ್ರೀಮಿಯಂ ಲೈಟ್ ಚಂದಾದಾರಿಕೆ ಯೋಜನೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. 

2023ರ ಅಕ್ಟೋಬರ್ 25 ರ ನಂತರ ಯುಟ್ಯೂಬ್ ಪ್ರೀಮಿಯಂ ಲೈಟ್ ಶ್ರೇಣಿಯನ್ನು ಹಂತಹಂತವಾಗಿ ತೆಗೆದುಹಾಕಲಾಗುವುದು ಎಂದು ತಿಳಿದುಬಂದಿದೆ. ಈ ಬಗ್ಗೆ ತನ್ನ ಗ್ರಾಹಕರಿಗೆ ಇಮೇಲ್ ಮೂಲಕ ಮಾಹಿತಿ ನೀಡಿರುವ ಯುಟ್ಯೂಬ್ ಅಕ್ಟೋಬರ್ 25, 2023 ರ ನಂತರ ಪ್ರೀಮಿಯಂ ಲೈಟ್ ಅನ್ನು ನೀಡುವುದಿಲ್ಲ ಎಂದು ಘೋಷಿಸಿದೆ. 

ಇದನ್ನೂ ಓದಿ- Alert:30 ದಿನಗಳ ನಂತರ ಈ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ WhatsApp!ನಿಮ್ಮ ಬಳಿ ಇರುವ ಫೋನ್ ಯಾವುದು ?

ಯೂಟ್ಯೂಬ್‌ನ  ಪ್ರೀಮಿಯಂ ಲೈಟ್ ಯೋಜನೆಯು 2021 ರಲ್ಲಿ ಬೆಲ್ಜಿಯಂ, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಲಕ್ಸೆಂಬರ್ಗ್, ನೆದರ್‌ಲ್ಯಾಂಡ್ಸ್, ನಾರ್ವೆ ಮತ್ತು ಸ್ವೀಡನ್ ಸೇರಿದಂತೆ ಆಯ್ದ ಯುರೋಪಿಯನ್ ದೇಶಗಳಲ್ಲಿ ಮೊದಲು ಪ್ರಾರಂಭವಾಯಿತು. ಇದು ಯೂಟ್ಯೂಬ್‌ನ ಅಪ್ಲಿಕೇಶನ್‌ಗಳು ಮತ್ತು ಫಾರ್ಮ್ಯಾಟ್‌ಗಳ ಸ್ಪೆಕ್ಟ್ರಮ್‌ನಾದ್ಯಂತ ಜಾಹೀರಾತು-ಮುಕ್ತ ವೀಕ್ಷಣೆಯನ್ನು ನೀಡುತ್ತದೆ. 

ಇದನ್ನೂ ಓದಿ- ಎಚ್ಚರ! ಎಚ್ಚರ! ಈ 3 ಅಪ್ಲಿಕೇಶನ್‌ಗಳ ಮೂಲಕ ಭಾರತೀಯರನ್ನು ಟಾರ್ಗೆಟ್ ಮಾಡ್ತೀದ್ದಾರೆ ಪಾಕಿಸ್ತಾನಿ ಹ್ಯಾಕರ್‌ಗಳು

ಆದರೆ ಶೀಘ್ರದಲ್ಲೇ, ಅಸ್ತಿತ್ವದಲ್ಲಿರುವ ಪ್ರೀಮಿಯಂ ಲೈಟ್ ಚಂದಾದಾರರು ಎರಡು ಆಯ್ಕೆಗಳೊಂದಿಗೆ ಉಳಿಯುತ್ತಾರೆ. ಮೊದಲನೆಯದು ಅವರು ಯೂಟ್ಯೂಬ್‌ನ್ನು ಜಾಹೀರಾತುಗಳೊಂದಿಗೆ ವೀಕ್ಷಿಸುವುದು ಅಥವಾ ಯೂಟ್ಯೂಬ್‌ನ ಪ್ರೀಮಿಯಂಗೆ ಬದಲಾಯಿಸುವುದು. ಇದರಲ್ಲಿ ಅವರು ಯೂಟ್ಯೂಬ್‌ ಸಂಗೀತಕ್ಕೆ ಪ್ರವೇಶವನ್ನು ಸಹ ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News