chat ಓಪನ್ ಮಾಡದೆಯೇ ಕಳುಹಿಸಬಹುದು WhatsApp ಮೆಸೇಜ್ , ಈ ಟ್ರಿಕ್ ಬಳಸಿ

ಬಂದಿರುವ ಮೆಸೇಜ್ ಗೆ ರಿಪ್ಲೈ ಮಾಡಲು, WhatsApp ಓಪನ್ ಮಾಡುವ ಅಗತ್ಯವಿಲ್ಲ. ಕೆಲವು ಶಾರ್ಟ್‌ಕಟ್‌ಗಳ ಸಹಾಯದಿಂದ, ಚಾಟ್ ಓಪನ್ ಮಾಡದೆಯೇ ರಿಪ್ಲೈ ಮಾಡಬಹುದು.

Written by - Ranjitha R K | Last Updated : Aug 2, 2021, 06:55 PM IST
  • ವಾಟ್ಸಾಪ್ ಒಂದು ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿದೆ
  • WhatsApp ಓಪನ್ ಮಾಡದೆಯೇ ಸಂದೇಶಗಳನ್ನು ಕಳುಹಿಸಬಹುದು
  • ಇದಕ್ಕಾಗಿ ನೀವು ಕೆಲವು ಸರಳ ಸಲಹೆಗಳನ್ನು ಅನುಸರಿಸಬೇಕು.
chat ಓಪನ್ ಮಾಡದೆಯೇ ಕಳುಹಿಸಬಹುದು WhatsApp ಮೆಸೇಜ್ , ಈ ಟ್ರಿಕ್ ಬಳಸಿ  title=
WhatsApp ಓಪನ್ ಮಾಡದೆಯೇ ಸಂದೇಶಗಳನ್ನು ಕಳುಹಿಸಬಹುದು (file photo)

ನವದೆಹಲಿ : ಇನ್ಸ್ಟಂಟ್ ಮೆಸೇಜಿಂಗ್ ಆ್ಯಪ್, ವಾಟ್ಸಾಪ್ ಬಳಕೆದಾರರಲ್ಲಿ ಬಹಳ ಜನಪ್ರಿಯವಾಗಿದೆ. ಇದನ್ನು ಎಲ್ಲಾ ವಯಸ್ಸಿನ ಜನರು ಬಳಸುತ್ತಾರೆ. ವಾಟ್ಸಾಪ್ (Whatsapp) ಜನಪ್ರಿಯತೆಯ ಹಿಂದಿನ ಮುಖ್ಯ ಕಾರಣವೆಂದರೆ, ಬಳಕೆದಾರರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಇದರಲ್ಲಿ ಹಲವು ವಿಶೇಷ ಮತ್ತು ಉಪಯುಕ್ತ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಕಂಪನಿಯು, ಹೊಸ ಹೊಸ ವೈಶಿಷ್ಟ್ಯಗಳನ್ನು (Whatsapp new features) ಪರಿಚಯಿಸುವುದು ಮಾತ್ರವಲ್ಲ, ಅದನ್ನು ಅಪ್ಡೇಟ್ ಮಾಡುತ್ತಲೇ ಬಂದಿದೆ. ಅವುಗಳಲ್ಲಿ ಒಂದು,  ವಾಟ್ಸಾಪ್ ಓಪನ್ ಮಾಡದೆಯೇ, ಸಂದೇಶಕ್ಕೆ ರಿಪ್ಲೈ ಮಾಡಬಹುದು. 

WhatsApp ಓಪನ್ ಮಾಡದೆಯೇ ಸಂದೇಶಗಳನ್ನು ಕಳುಹಿಸಬಹುದು : 
ಬಂದಿರುವ ಮೆಸೇಜ್ ಗೆ ರಿಪ್ಲೈ ಮಾಡಲು, WhatsApp ಓಪನ್ ಮಾಡುವ ಅಗತ್ಯವಿಲ್ಲ. ಕೆಲವು ಶಾರ್ಟ್‌ಕಟ್‌ಗಳ ಸಹಾಯದಿಂದ, ಚಾಟ್ ಓಪನ್ ಮಾಡದೆಯೇ ರಿಪ್ಲೈ ಮಾಡಬಹುದು. ಇದಕ್ಕಾಗಿ ನೀವು ಕೆಲವು ಸರಳ ಸಲಹೆಗಳನ್ನು ಅನುಸರಿಸಬೇಕು. 

ಇದನ್ನೂ ಓದಿ : ಈ Smartphoneಗಳಲ್ಲಿ ಮುಂದಿನ ತಿಂಗಳಿನಿಂದ ಕಾರ್ಯ ನಿರ್ವಹಿಸುವುದಿಲ್ಲ Gmail, YouTube ಸೇರಿದಂತೆ ಈ ಆ್ಯಪ್ ಗಳು

-ವಾಟ್ಸಾಪ್ ತೆರೆಯದೆ ಸಂದೇಶಕ್ಕೆ ಉತ್ತರಿಸಲು, ನೀವು ಯಾರಲ್ಲಿ ಹೆಚ್ಚು ಚಾಟ್ ಮಾಡುತ್ತಿರೋ ಅವರ ಚಾಟ್ ಅನ್ನು ಮೊದಲು ಹೋಮ್ ಸ್ಕ್ರೀನ್‌ಗೆ ಸೇರಿಸಬೇಕು.
-ಇದಕ್ಕಾಗಿ, WhatsApp ತೆರೆಯಿರಿ ಮತ್ತು ಶಾರ್ಟ್ ಕಟ್ ಗೆ ಸೇರಿಸಲು ಬಯಸುವ ವ್ಯಕ್ತಿಯ ಚಾಟ್ ಐಕಾನ್ ಮೇಲೆ ಒತ್ತಿರಿ.
-ಐಕಾನ್ ಒತ್ತಿದಾಗ, ಬಲಬದಿಯಲ್ಲಿ ಮೂರು ಡಾಟ್ ಕಾಣಿಸುತ್ತವೆ. ಅವುಗಳಲ್ಲಿ, ನೀವು 'add chat shortcut' ಐಕಾನ್ ಮೇಲೆ ಕ್ಲಿಕ್ ಮಾಡಬೇಕು.
-'ಆಡ್ ಚಾಟ್ ಶಾರ್ಟ್‌ಕಟ್' ಮೇಲೆ ಕ್ಲಿಕ್ ಮಾಡಿದ ನಂತರ, ನಿಮ್ಮ ಫೋನ್‌ನ ಹೋಮ್ ಸ್ಕ್ರೀನ್‌ಗೆ ಆ ಚಾಟ್ ಬಾಕ್ಸ್ (Chat box) ಆಡ್ ಆಗುತ್ತದೆ. 
-ಆ ಸಂಖ್ಯೆಯಿಂದ ಸಂದೇಶ ಬಂದಾಗಲೆಲ್ಲಾ, ನೀವು WhatsApp ತೆರೆಯದೆ ನೇರ ಶಾರ್ಟ್‌ಕಟ್‌ನೊಂದಿಗೆ ಸಂದೇಶಕ್ಕೆ ಉತ್ತರಿಸಲು ಸಾಧ್ಯವಾಗುತ್ತದೆ.
-ಈ ಪ್ರಕ್ರಿಯೆಯನ್ನು ಮತ್ತೊಮ್ಮೆ ಪುನರಾವರ್ತಿಸುವ ಮೂಲಕ, ಹೋಮ್ ಬಟನ್‌ನಿಂದ ಶಾರ್ಟ್‌ಕಟ್ ಅನ್ನು ರಿಮೂವ್ ಮಾಡಬಹುದು.

ಇದನ್ನೂ ಓದಿ :  ಒಂದು ಆಧಾರ್ ಕಾರ್ಡ್ ನಿಂದ ನೀವು ಎಷ್ಟು 'SIM cards' ಖರೀದಿಸಬಹುದು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News