ಈ ಬ್ಯಾಟರಿ ಇದ್ದರೆ ಅಗ್ಗದ ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್ ನಲ್ಲಿ ಕ್ರಮಿಸುತ್ತದೆ 1260KM ದೂರ, ಬೆಲೆ ಕೂಡಾ ಕಡಿಮೆ

Sea Salt Battery In EVs:ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ಈ ಬ್ಯಾಟರಿ ಅಗ್ಗವಾಗಿದೆ. ಮಾತ್ರವಲ್ಲ ನಾಲ್ಕು ಪಟ್ಟು ಹೆಚ್ಚು  ಎನರ್ಜಿ ಸ್ಟೋರ್ ಮಾಡುತ್ತದೆ. ಇದನ್ನು " ಸೀ ಸಾಲ್ಟ್ ಬ್ಯಾಟರಿ " ಅಥವಾ "ಸೋಡಿಯಂ-ಸಲ್ಫರ್ ಬ್ಯಾಟರಿ" ಎಂದು ಕರೆಯಲಾಗುತ್ತದೆ. 

Written by - Ranjitha R K | Last Updated : Dec 20, 2022, 08:39 AM IST
  • ಸಂಶೋಧಕರು ಸಮುದ್ರದ ನೀರಿನಿಂದ ಬ್ಯಾಟರಿಗಳನ್ನು ತಯಾರಿಸಿದ್ದಾರೆ
  • ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ಈ ಬ್ಯಾಟರಿ ಅಗ್ಗ
  • ಇದರಲ್ಲಿ ಸೋಡಿಯಂ-ಸಲ್ಫರ್ ಅನ್ನು ಬಳಸಲಾಗಿದೆ.
ಈ ಬ್ಯಾಟರಿ ಇದ್ದರೆ ಅಗ್ಗದ ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್ ನಲ್ಲಿ ಕ್ರಮಿಸುತ್ತದೆ 1260KM ದೂರ,   ಬೆಲೆ ಕೂಡಾ ಕಡಿಮೆ  title=
Sea Salt Battery In EVs

Sea Salt Battery In EVs : ಮಾಧ್ಯಮ ವರದಿಗಳ ಪ್ರಕಾರ, ಸಿಡ್ನಿ ವಿಶ್ವವಿದ್ಯಾನಿಲಯದ ಸಂಶೋಧಕರು ಸಮುದ್ರದ ನೀರಿನಿಂದ ಬ್ಯಾಟರಿಗಳನ್ನು ತಯಾರಿಸಿದ್ದಾರೆ ಎನ್ನಲಾಗಿದೆ.  ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ಈ ಬ್ಯಾಟರಿ ಅಗ್ಗವಾಗಿದೆ. ಮಾತ್ರವಲ್ಲ ನಾಲ್ಕು ಪಟ್ಟು ಹೆಚ್ಚು  ಎನರ್ಜಿ ಸ್ಟೋರ್ ಮಾಡುತ್ತದೆ. ಇದನ್ನು " ಸೀ ಸಾಲ್ಟ್ ಬ್ಯಾಟರಿ " ಅಥವಾ "ಸೋಡಿಯಂ-ಸಲ್ಫರ್ ಬ್ಯಾಟರಿ" ಎಂದು ಕರೆಯಲಾಗುತ್ತದೆ. ಇದರಲ್ಲಿ ಸೋಡಿಯಂ-ಸಲ್ಫರ್ ಅನ್ನು ಬಳಸಲಾಗಿದೆ. ಸೋಡಿಯಂ-ಸಲ್ಫರ್ ಎಂದರೆ ಇದು ಕರಗಿದ ಉಪ್ಪು. ಇದನ್ನು ಸಮುದ್ರದ ನೀರಿನಿಂದ ಪಡೆಯಲಾಗುತ್ತದೆ. ಈ ಸೋಡಿಯಂ ಬ್ಯಾಟರಿಯ ಬೆಲೆ ಈಗಿರುವ ಲಿಥಿಯಂ ಬ್ಯಾಟರಿಗಿಂತ  ಬಹಳ ಅಗ್ಗವಾಗಿರುತ್ತದೆ. ಅಲ್ಲದೆ, ನಾಲ್ಕು ಪಟ್ಟು ಹೆಚ್ಚು  ಪವರ್ ಸ್ಟೋರ್ ಮಾಡುವುದು ಕೂಡಾ ಸಾಧ್ಯವಾಗುತ್ತದೆ ಎಂದು ಪ್ರಧಾನ ಸಂಶೋಧಕ ಡಾ. ಶೋನ್ ಲಾಂಗ್ ಝಾವೋ ಹೇಳಿದ್ದಾರೆ. 

ನಿಜ ಜೀವನದ ಅನುಭವದೊಂದಿಗೆ ಕನೆಕ್ಟ್ ಮಾಡಿದಾಗ : 
ಪ್ರಸ್ತುತ, ಯಾವುದೇ ಎಲೆಕ್ಟ್ರಿಕ್ ಕಾರು ಖರೀದಿಸುವಾಗ ಜನರಿಗೆ ಎರಡು ದೊಡ್ಡ ಸವಾಲುಗಳು ಎದುರಾಗುತ್ತವೆ. ಮೊದಲನೆಯದಾಗಿ, ಎಲೆಕ್ಟ್ರಿಕ್ ಕಾರುಗಳು ಈಗಿರುವ ICE ಕಾರುಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಇನ್ನೊಂದು ಒಂದೇ ಚಾರ್ಜ್‌ನಲ್ಲಿ ಹೆಚ್ಚಿನ ರೇಂಜ್ ನೀಡುವುದು ಈ ಕಾರುಗಳಿಗೆ ಸಾಧ್ಯವಾಗುವುದಿಲ್ಲ. ಆದರೆ ಈಗ ತಂತ್ರಜ್ಞಾನ ಕ್ರಮೇಣ ಸುಧಾರಿಸುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ರೇಂಜ್ ಹೆಚ್ಚಿಸುವಲ್ಲಿ ಯಶಸ್ಸನ್ನು ಸಾಧಿಸಲಾಗುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ 800  ಕಿಲೋ ಮೀಟರ್ ಗಿಂತ ಹೆಚ್ಚು ರೇಂಜ್ ನೀಡುವ ಕಾರುಗಳು ಲಭ್ಯವಿದೆ.  ಆದರೆ ಅದರ ಬೆಲೆ ಕೂಡಾ ದುಬಾರಿಯಾಗಿರುತ್ತದೆ. 

ಇದನ್ನೂ ಓದಿ : IDF: ದೇಶದ ಕೋಟ್ಯಾಂತರ ಮಹಿಳೆಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಗೂಗಲ್

ಈ ಮಧ್ಯೆ, ಟಾಟಾ ಟಿಯಾಗೊ ಇವಿ ನಂತಹ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರುಗಳು ಕೂಡಾ ದೇಶದಲ್ಲಿ ಇವೆ. ಇದು ದೇಶದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು. ಇದರ ಬೆಲೆ 8.49 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ಇದು ಕಡಿಮೆ  ರೇಂಜ್ ವೆರಿಯೇಂಟ್ ನ ಆರಂಭಿಕ ಬೆಲೆಯಾಗಿದೆ. ಇದರ ನೆಕ್ಸ್ಟ್ ವೆರಿಯೇಂಟ್ ನ ಬೆಲೆ , 10.79 ಲಕ್ಷದಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ಈ "ಸೀ ಸಾಲ್ಟ್ ಬ್ಯಾಟರಿ" ಅನ್ನು ಹೆಚ್ಚಿನ  ರೇಂಜ್ ನೀಡುವ ಟಾಟಾ ಟಿಯಾಗೊ EV ಯ ಮೂಲ ರೂಪಾಂತರದಲ್ಲಿ ಬಳಸಿದರೆ, ಈ ಕಾರಿನ ಬೆಲೆ ಸುಮಾರು  ಅರ್ಧದಷ್ಟು  ಇಳಿಯುತ್ತದೆ. ಮಾತ್ರವಲ್ಲ ಮತ್ತು ನಾಲ್ಕು ಪಟ್ಟು ಹೆಚ್ಚು ರೇಂಜ್ ಕೂಡಾ ನೀಡುತ್ತದೆ.  

ಇದನ್ನೂ ಓದಿ : ಎಲ್ಪಿಜಿ, ವಿದ್ಯುತ್ ಅಗತ್ಯವಿಲ್ಲ, ಖರ್ಚಿಲ್ಲದೇ ಆಹಾರ ತಯಾರಿಸಲು ಸಹಾಯಕವಾಗಲಿದೆ ಈ ಸ್ಟವ್‌

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News