ಅವರ ಜೊತೆ ರೊಮ್ಯಾಂಟಿಕ್ ಸೀನ್‌ ಎಂದರೇ ಭಯ... ಅರ್ಜುನ್ ರೆಡ್ಡಿ ಬ್ಯೂಟಿ ಸೆನ್ಸೇಷನಲ್‌ ಕಾಮೆಂಟ್!

 Shalini Pandey: ಅರ್ಜುನ್ ರೆಡ್ಡಿ ಸಿನಿಮಾ ತೆಲುಗು ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ ಎಂದೇ ಹೇಳಬಹುದು.. ಅಲ್ಲಿಯವರೆಗೆ ಸ್ಟೀರಿಯೊಟೈಪಿಕಲ್ ಟ್ರೆಂಡ್‌ನಲ್ಲಿ ಸಾಗುತ್ತಿದ್ದ ತೆಲುಗು ಇಂಡಸ್ಟ್ರಿಯನ್ನು ಅರ್ಜುನ್ ರೆಡ್ಡಿ ಸಿನಿಮಾ ಸಂಪೂರ್ಣವಾಗಿ ಬದಲಾಯಿಸಿತು. 

Written by - Savita M B | Last Updated : Jun 29, 2024, 03:49 PM IST
  • ಅರ್ಜುನ್ ರೆಡ್ಡಿ ಚಿತ್ರದ ಮೂಲಕ ವಿಜಯ್ ದೇವರಕೊಂಡ ರಾತ್ರೋರಾತ್ರಿ ಸ್ಟಾರ್ ಹೀರೋ ಆದರು.
  • ಸದ್ಯಕ್ಕೆ ಶಾಲಿನಿ ಪಾಂಡೆ ಕೈಯಲ್ಲಿ ದೊಡ್ಡ ಸಿನಿಮಾ ಇಲ್ಲವಂತೆ.
ಅವರ ಜೊತೆ ರೊಮ್ಯಾಂಟಿಕ್ ಸೀನ್‌ ಎಂದರೇ ಭಯ... ಅರ್ಜುನ್ ರೆಡ್ಡಿ ಬ್ಯೂಟಿ ಸೆನ್ಸೇಷನಲ್‌ ಕಾಮೆಂಟ್! title=

,Shalini Pandey reacts to rape scene: ಅರ್ಜುನ್ ರೆಡ್ಡಿ ಚಿತ್ರದ ಮೂಲಕ ವಿಜಯ್ ದೇವರಕೊಂಡ ರಾತ್ರೋರಾತ್ರಿ ಸ್ಟಾರ್ ಹೀರೋ ಆದರು. ಸಂದೀಪ್ ರೆಡ್ಡಿ ವಂಗ ಟಾಪ್ ನಿರ್ದೇಶಕರ ಪಟ್ಟಿಗೆ ಸೇರಿಕೊಂಡರು. ಆದರೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಶಾಲಿನಿ ಪಾಂಡೆ ಹೆಚ್ಚು ಕ್ಲಿಕ್ ಆಗಲಿಲ್ಲ. ಅರ್ಜುನ್ ರೆಡ್ಡಿ ಚಿತ್ರದ ನಂತರ ಆಕೆಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. 

ನಟಿ ಬಾಲಿವುಡ್‌ನಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರೂ, ಅವರ ವೃತ್ತಿಜೀವನಕ್ಕೆ ಅವು ಹೆಚ್ಚು ಸಹಾಯ ಮಾಡಲಿಲ್ಲ. ಸದ್ಯಕ್ಕೆ ಶಾಲಿನಿ ಪಾಂಡೆ ಕೈಯಲ್ಲಿ ದೊಡ್ಡ ಸಿನಿಮಾ ಇಲ್ಲವಂತೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಶಾಲಿನಿ ಪಾಂಡೆ.. ತಮ್ಮ ವೈಯಕ್ತಿಕ ವಿಷಯಗಳ ಜೊತೆಗೆ ಸಿನಿಮಾಗಳ ವೈಶಿಷ್ಟ್ಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ..

ಇದನ್ನೂ ಓದಿ-ಯುವ ರಾಜ್‌ಕುಮಾರ್ ಆ ನಟಿಯ ಜೊತೆಗೆ ಸಿಕ್ಕಿಬಿದ್ದ ಸಾಕ್ಷಿ ಇದೆಯಾ!? ಶ್ರೀದೇವಿ ಪರ ವಕೀಲರು ಹೇಳಿದ್ದೇನು?

ಶಾಲಿನಿ ಪಾಂಡೆ ಸದ್ಯ ‘ಮಹಾರಾಜ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಜೂನ್ 21 ರಿಂದ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಚಲನಚಿತ್ರವು ನೇರವಾಗಿ ಸ್ಟ್ರೀಮ್ ಆಗುತ್ತಿದೆ. ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಶಾಲಿನಿ ಪಾಂಡೆ ಕುತೂಹಲಕಾರಿ ಸಂಗತಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

 ಚಿತ್ರದಲ್ಲಿ ನಟ ಜೈದೀಪ್ ಅವರೊಂದಿಗೆ ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸಿದ್ದೇನೆ. ಆ ದೃಶ್ಯವನ್ನು ಚಿತ್ರೀಕರಿಸುವ ಮೊದಲು ನಾನು ಓಡಿಹೋದೆ. ತುಂಬಾ ಸ್ಟ್ರೆಸ್ ಅನಿಸಿತು..‌ ಅಲ್ಲದೇ ನನಗೆ ಕತ್ತಲಾದರೆ ಹೆಚ್ಚು ಭಯವಾಗುತ್ತದೆ ಎಂದು ನಿರ್ದೇಶಕರಿಗೆ ಹೇಳಿದ್ದೆ. ಹಾಗಾಗಿ ಶಾಂತ ವಾತಾವರಣವನ್ನು ಕೇಳಿದೆ. ನಿರ್ದೇಶಕರು ನನ್ನನ್ನು ಅರ್ಥಮಾಡಿಕೊಂಡು ನನಗೆ ಜಾಗ ಕೊಟ್ಟಿದ್ದರಿಂದ ಆ ದೃಶ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದಿದ್ದಾರೆ.. ಶಾಲಿನಿ ಕಾಮೆಂಟ್‌ಗಳಿಗೆ ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿದ್ದಾರೆ, ಅರ್ಜುನ್ ರೆಡ್ಡಿಯಲ್ಲಿ ಅಂತಹ ಬೋಲ್ಡ್ ಸೀನ್‌ನಲ್ಲಿ ನಟಿಸಿದ ಶಾಲಿನಿಯ ಈ ಕಾಮೆಂಟ್‌ಗಳು ವೈರಲ್ ಆಗಿವೆ.

ಇದನ್ನೂ ಓದಿ-ತುಂಡು ಬಟ್ಟೆ ಬಿಟ್ಟು ಸೀರೆಯಲ್ಲಿ ಮಿಂಚಿದ ದೀಪಿಕಾ! ಆಹಾ.. ಕನ್ನಡತಿ ಎಂದ ಫ್ಯಾನ್ಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News