WhatsApp Rules: ವಾಟ್ಸಾಪ್ ಪ್ರತಿ ಸ್ಮಾರ್ಟ್ಫೋನ್ ಬಳಕೆದಾರರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈ ಇನ್ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ನ ಬಳಕೆಯು ಇದೀಗ ವೈಯಕ್ತಿಕ ಚಾಟ್, ಕರೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಸ್ತುತ ಕಚೇರಿಗೆ ಸಂಬಂಧಿಸಿದ ಬಹುತೇಕ ಕೆಲಸಗಳು ಸಹ ವಾಟ್ಸಾಪ್ನಲ್ಲಿಯೇ ನಡೆಯುತ್ತಿವೆ. ಅಷ್ಟೇ ಅಲ್ಲ, ಇದು ವ್ಯಾಪಾರಕ್ಕೂ ವೇದಿಕೆಯಾಗಿದೆ. ಒಟ್ಟಾರೆಯಾಗಿ ಈ ಜನಪ್ರಿಯ ಅಪ್ಲಿಕೇಶನ್ ಬಹುದೊಡ್ಡ ಮಾಧ್ಯಮವಾಗಿ ಮಾರ್ಪಟ್ಟಿದೆ. ಆದರೆ ಈ ವೇದಿಕೆಯಲ್ಲಿ, ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವಾಗ ನಾವು ಕೆಲವೊಮ್ಮೆ ಕಾನೂನನ್ನು ಉಲ್ಲಂಘಿಸುತ್ತೇವೆ. ಸಾಮಾನ್ಯವಾಗಿ, ವಾಟ್ಸಾಪ್ನ ಕೆಲವು ನಿಯಮಗಳ ಬಗ್ಗೆ ಎಲ್ಲರಿಗೂ ಸಂಪೂರ್ಣ ಮಾಹಿತಿ ಇಲ್ಲದಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ, ಎಚ್ಚರ! ವಾಟ್ಸಾಪ್ನಲ್ಲಿ ನಿಮಗೆ ಗೊತ್ತೋ/ಗೊತ್ತಿಲ್ಲದೆಯೋ ಕಳುಹಿಸುವ ಕೆಲವು ವಿಷಯಗಳು ನಿಮ್ಮನ್ನು ಜೈಲು ಪಾಲಾಗುವಂತೆ ಮಾಡಬಹುದು. ಅದಕ್ಕಾಗಿ ವಾಟ್ಸಾಪ್ನಲ್ಲಿ ಏನು ಮಾಡಬಾರದು ಎಂಬ ಬಗ್ಗೆ ತಿಳಿದಿರುವುದು ಬಹಳ ಮುಖ್ಯ.
ವಾಟ್ಸಾಪ್ನಲ್ಲಿ ನಿಮಗೆ ಗೊತ್ತಿಲ್ಲದೇ ಮಾಡುವ ಈ ಕೆಲಸಗಳೂ ಸಹ ನಿಮ್ಮನ್ನು ಜೈಲು ಸೇರಿಸಬಹುದು!
ವಾಸ್ತವವಾಗಿ, ಕೆಲವರಿಗೆ ವಾಟ್ಸಾಪ್ನಲ್ಲಿ ಬರುವ ಸಂದೇಶಗಳು, ಫೋಟೋಗಳು, ವಿಡಿಯೋಗಳನ್ನು ಬೇರೆಯವರಿಗೆ ಫಾರ್ವರ್ಡ್ ಮಾಡುವ ಅಭ್ಯಾಸ ಇರುತ್ತದೆ. ಆದರೆ, ಕೆಲವೊಮ್ಮೆ ಇದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ವಾಟ್ಸಾಪ್ ನಿಯಮಗಳ ಪ್ರಕಾರ, ವಾಟ್ಸಾಪ್ನಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದ್ದು, ಇಂತಹ ಕೆಲಸ ಮಾಡುವವರಿಗೆ ಜೈಲು ಶಿಕ್ಷೆ ವಿಧಿಸಲೂ ಸಹ ಅವಕಾಶವಿದೆ.
ಇದನ್ನೂ ಓದಿ- ಬ್ಯಾಂಕ್ ಗ್ರಾಹಕರೇ ಎಚ್ಚರ! ಈ ಒಂದು ಸಣ್ಣ ತಪ್ಪಿನಿಂದ ಚಿಟಿಕೆಯಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಖಾತೆ
* ಮಕ್ಕಳ ಪೋರ್ನೋಗ್ರಫಿ:
ನೀವು ಆಕಸ್ಮಿಕವಾಗಿ ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಫೋಟೋ ಅಥವಾ ವೀಡಿಯೊವನ್ನು ವಾಟ್ಸಾಪ್ನಲ್ಲಿ ಹಂಚಿಕೊಂಡರೆ, ನೀವು ಜೈಲು ಶಿಕ್ಷೆಯನ್ನು ಎದುರಿಸಬೇಕಾಗಬಹುದು. ಈ ಕಾನೂನು ಉಲ್ಲಂಘನೆಯಿಂದಾಗಿ, ಕಳೆದ ಕೆಲವು ವರ್ಷಗಳಲ್ಲಿ, ದೆಹಲಿ ಪೊಲೀಸರು ಅನೇಕ ಜನರನ್ನು ಬಂಧಿಸಿದ್ದಾರೆ. ಆದ್ದರಿಂದ, ತಪ್ಪಾಗಿ, ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ವಿಷಯವನ್ನು ವಾಟ್ಸಾಪ್ನಲ್ಲಿ ಹಂಚಿಕೊಳ್ಳಬೇಡಿ.
* ಸಾಮಾಜಿಕ ತಾರತಮ್ಯವನ್ನು ಉತ್ತೇಜಿಸುವ ವೀಡಿಯೊಗಳು:
ಸಮಾಜದಲ್ಲಿ ತಾರತಮ್ಯವನ್ನು ಹರಡುವ ಅಂತಹ ಯಾವುದೇ ವೀಡಿಯೊ, ಫೋಟೋ ಮತ್ತು ಸಂದೇಶವನ್ನು ವೈರಲ್ ಅಥವಾ ಈ ವೇದಿಕೆಯಲ್ಲಿ ಕಳುಹಿಸಿದರೆ, ನೀವು ಕಾನೂನನ್ನು ಉಲ್ಲಂಘಿಸಿದಂತೆ. ನೀವು ವಾಟ್ಸಾಪ್ನಲ್ಲಿ ಅಂತಹ ಯಾವುದೇ ವೀಡಿಯೊವನ್ನು ಹೊಂದಿದ್ದರೆ, ಅದನ್ನು ಫಾರ್ವರ್ಡ್ ಮಾಡುವ ಬದಲು ತಕ್ಷಣ ಡಿಲೀಟ್ ಮಾಡಿ. ಒಂದೊಮ್ಮೆ ನೀವು ಅಂತಹ ಸಂದೇಶವನ್ನು ಹಂಚಿಕೊಂಡಿದ್ದೇ ಆದರೆ, ಸಮಾಜದಲ್ಲಿ ತಾರತಮ್ಯವನ್ನು ಹರಡುವ ಸಂದೇಶಗಳು, ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಕ್ಕಾಗಿ ನಿಮ್ಮನ್ನು ಜೈಲಿಗೆ ಹಾಕಬಹುದು.
ಇದನ್ನೂ ಓದಿ- WhatsApp Scam: ವಾಟ್ಸಾಪ್ನಲ್ಲಿ ಕೆಬಿಸಿಯ ಇಂತಹ ಸಂದೇಶ ನಿಮಗೂ ಬಂದಿದೆಯೇ? ಹಾಗಿದ್ದರೆ ಎಚ್ಚರ!
* ನಕಲಿ ಸುದ್ದಿಗಳು:
ಫೇಕ್ ನ್ಯೂಸ್ಗೆ ಸಂಬಂಧಿಸಿದಂತೆ ವಾಟ್ಸಾಪ್ ನೀತಿಯೂ ಕಟ್ಟುನಿಟ್ಟಾಗಿದೆ. ಇದರ ಹೊರತಾಗಿ, ಸುಳ್ಳು ಸುದ್ದಿಗಳ ಬಗ್ಗೆ ಸರ್ಕಾರವು ಕ್ರಮ ಕೈಗೊಳ್ಳುತ್ತದೆ. ನಕಲಿ ಸುದ್ದಿಗಳಿಂದಾಗಿ ಸಮಾಜ ಮತ್ತು ದೇಶದಲ್ಲಿ ಹಿಂಸೆ ಅಥವಾ ತಾರತಮ್ಯದಂತಹ ವಿಷಯಗಳು ಹರಡಿದರೆ ಅದು ಕಾನೂನಿನ ಮೂಲಕ ಅಪರಾಧವಾಗುತ್ತದೆ. ಹೀಗಿರುವಾಗ ವಾಟ್ಸ್ಆ್ಯಪ್ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ, ಅದನ್ನು ಹರಿಬಿಟ್ಟರೆ ಜೈಲು ಸೇರಬೇಕಾಗಬಹುದು. ಅದಕ್ಕಾಗಿಯೇ ವಾಟ್ಸಾಪ್ನಲ್ಲಿ ಬರುವ ಪ್ರತಿಯೊಂದು ಸುದ್ದಿಯನ್ನು ತಕ್ಷಣ ಹಂಚಿಕೊಳ್ಳದಿರುವುದು ಮುಖ್ಯವಾಗಿದೆ. ಅದು ಸರಿಯೋ ತಪ್ಪೋ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.