ಪೆಟ್ರೋಲ್ ಅಥವಾ ಡೀಸೆಲ್? ವಿಮಾನ ಹಾರಾಟಕ್ಕೆ ಉಪಯೋಗಿಸುವ ಇಂಧನ ಯಾವುದು? 1 ಲೀಟರ್ ಬೆಲೆ ಎಷ್ಟೆಂದು ತಿಳಿದರೆ ಹುಬ್ಬೇರೋದು ಗ್ಯಾರಂಟಿ

What is aeroplane fuel: ಹಲವಾರು ಮಂದಿ ವಿಮಾನದಲ್ಲಿ ಪ್ರಯಾಣಿಸಿರಬಹುದು, ಇನ್ನೂ ಹಲವರು ಆ ಕನಸು ಕಾಣುತ್ತಿರಬಹುದು. ಆದರೆ ಎಂದಾದರೂ ವಿಮಾನದ ಬಗ್ಗೆ ಅರಿಯುವ ಗೋಜಿಗೆ ಹೋಗಿದ್ದೀರಾ? ಇಲ್ಲವಾದರೆ ನಾವಿಂದು ಈ ವರದಿಯಲ್ಲಿ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇವೆ.

Written by - Bhavishya Shetty | Last Updated : Aug 15, 2024, 07:52 PM IST
    • ದೈನಂದಿನ ಜೀವನದಲ್ಲಿ ನಾವು ಪ್ರತಿದಿನ ನೋಡುವ ಅನೇಕ ವಿಷಯಗಳಿವೆ
    • ಬಾನಲ್ಲಿ ವಿಮಾನ ಹಾರುವುದನ್ನು ಕಂಡಾಗ ಎಲ್ಲಿಲ್ಲದ ಸಂತಸ ಮನದಲ್ಲಾಗುತ್ತದೆ
    • ಹಲವಾರು ಮಂದಿ ವಿಮಾನದಲ್ಲಿ ಪ್ರಯಾಣಿಸಿರಬಹುದು
ಪೆಟ್ರೋಲ್ ಅಥವಾ ಡೀಸೆಲ್? ವಿಮಾನ ಹಾರಾಟಕ್ಕೆ ಉಪಯೋಗಿಸುವ ಇಂಧನ ಯಾವುದು? 1 ಲೀಟರ್ ಬೆಲೆ ಎಷ್ಟೆಂದು ತಿಳಿದರೆ ಹುಬ್ಬೇರೋದು ಗ್ಯಾರಂಟಿ title=
File Photo

What is aeroplane fuel: ನಮ್ಮ ದೈನಂದಿನ ಜೀವನದಲ್ಲಿ ನಾವು ಪ್ರತಿದಿನ ನೋಡುವ ಅನೇಕ ವಿಷಯಗಳಿವೆ. ಆದರೆ ಅವುಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಇವುಗಳು ನಮ್ಮ ಜೀವನದ ಒಂದು ಭಾಗವಾಗಿದ್ದರೂ ಕೂಡ ಅವುಗಳ ಬಗ್ಗೆ ತಿಳಿಯಲು ಹೋಗುವುದಿಲ್ಲ. ಇನ್ನು ವಿಮಾನ ಹಾರಾಡುವುದನ್ನು ನೋಡುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಬಾನಲ್ಲಿ ವಿಮಾನ ಹಾರುವುದನ್ನು ಕಂಡಾಗ ಎಲ್ಲಿಲ್ಲದ ಸಂತಸ ಮನದಲ್ಲಾಗುತ್ತದೆ. ಒಂದು ಬಾರಿ ಬಾಲ್ಯ ಕಣ್ಣ ಮುಂದೆ ಬಂದಂತಾಗುತ್ತದೆ.

ಇದನ್ನು ಓದಿ: ವಿಶ್ವ ಟೆಸ್ಟ್‌ ಚಾಂಪಿಯನ್ಶಿಪ್‌ʼನಲ್ಲಿ ತ್ರಿಶತಕ ಬಾರಿಸಿದ್ದು ಒಬ್ಬನೇ ಒಬ್ಬ ಬ್ಯಾಟ್ಸ್‌ʼಮನ್‌

ಹಲವಾರು ಮಂದಿ ವಿಮಾನದಲ್ಲಿ ಪ್ರಯಾಣಿಸಿರಬಹುದು, ಇನ್ನೂ ಹಲವರು ಆ ಕನಸು ಕಾಣುತ್ತಿರಬಹುದು. ಆದರೆ ಎಂದಾದರೂ ವಿಮಾನದ ಬಗ್ಗೆ ಅರಿಯುವ ಗೋಜಿಗೆ ಹೋಗಿದ್ದೀರಾ? ಇಲ್ಲವಾದರೆ ನಾವಿಂದು ಈ ವರದಿಯಲ್ಲಿ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇವೆ.

ವಿಮಾನ ಹೇಗೆ ಹಾರುತ್ತದೆ? ಅದಕ್ಕೆ ಬಳಸುವ ಇಂಧನ ಯಾವುದು? ಒಂದು ಲೀಟರ್‌ ಬೆಲೆ ಎಷ್ಟು ಎಂಬುದರ ಬಗ್ಗೆ ಈ ವರದಿಯಲ್ಲಿ ಹೇಳಲಾಗಿದೆ.

ವಿಮಾನಗಳು ಪೆಟ್ರೋಲ್ ಅಥವಾ ಡೀಸೆಲ್‌ʼನಿಂದ ಇಂಧನ ಚಲಿಸುವುದಲ್ಲ. ಇದಕ್ಕೆಂದೇ ವಿಶೇಷ ಜೆಲ್ ಇಂಧನವನ್ನು ಬಳಸಲಾಗುತ್ತದೆ. ಇದನ್ನು ಏರ್‌ಕ್ರಾಫ್ಟ್ ಟರ್ಬೈನ್ ಫ್ಯೂಲ್ (ATF) ಎಂದು ಕರೆಯಲಾಗುತ್ತದೆ. ವಿಮಾನಗಳಲ್ಲಿ ಅವುಗಳ ಎಂಜಿನ್ ಮಾದರಿಯ ಆಧಾರದ ಮೇಲೆ, ಅವುಗಳಲ್ಲಿ ಯಾವ ರೀತಿಯ ಇಂಧನವನ್ನು ಬಳಸಲಾಗುವುದು ಎಂದು ನಿರ್ಧರಿಸಲಾಗುತ್ತದೆ. ಇದನ್ನು ಪೆಟ್ರೋಲ್‌ನ ಬಟ್ಟಿ ಇಳಿಸಿದ ದ್ರವದಿಂದ ತಯಾರಿಸಲಾಗುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್‌ನಂತೆ ದಹಿಸಬಲ್ಲದು

ಇದನ್ನು ಓದಿ: 610 ಕೆಜಿಯಿಂದ 63 ಕೆಜಿಗೆ... ಬರೋಬ್ಬರಿ 550 ಕೆಜಿ ತೂಕ ಇಳಿಸಿಕೊಂಡ ವಿಶ್ವದ ಅತ್ಯಂತ ತೂಕದ ವ್ಯಕ್ತಿ

ಇಂಡಿಯನ್ ಆಯಿಲ್‌ ವೆಬ್‌ ಸೈಟ್ ಪ್ರಕಾರ, ದೆಹಲಿಯಲ್ಲಿ ಈ ಇಂಧನದ ಬೆಲೆ 1 ಲಕ್ಷ 11 ಸಾವಿರದ 344 ರೂ. ಅಂದರೆ ಈ ಎಣ್ಣೆಯು ಲೀಟರ್‌ಗೆ ಸುಮಾರು 111 ರೂ.ಗೆ ಲಭ್ಯವಿದೆ. ಈ ಬೆಲೆ ದೇಶೀಯ ಸಂಚಾರಕ್ಕಷ್ಟೇ ಸೀಮಿತ. ಅಂತಾರಾಷ್ಟ್ರೀಯ ವಿಮಾನಗಳಿಗೆ ಇದರ ಬೆಲೆಯನ್ನು ವಿಭಿನ್ನವಾಗಿ ನಿಗದಿಪಡಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News