WhatsAppನಲ್ಲಿ ಡಿಲೀಟ್ ಮಾಡಿರುವ ಮೆಸೇಜ್ ಅನ್ನು ಕೂಡಾ ಸುಲಭವಾಗಿ ಓದಲು ಈ ಟ್ರಿಕ್ ಬಳಸಿ

WhatsAppನಲ್ಲಿರುವ ಅನೇಕ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ.  ಇಂದು ನಾವು ನಿಮಗೆ ಡಿಲೀಟ್ ಮಾಡಿದ ಸಂದೇಶಗಳು, ಆಡಿಯೋಗಳು ಮತ್ತು ವೀಡಿಯೊಗಳನ್ನು ಸಣ್ಣ ಟ್ರಿಕ್ ಮೂಲಕ ಹೇಗೆ ಮತ್ತೆ  ಪಡೆಯಬಹುದು ಎನ್ನುವುದನ್ನು ಹೇಳುತ್ತೇವೆ. 

Written by - Ranjitha R K | Last Updated : Jun 15, 2022, 09:29 AM IST
  • ಡಿಲೀಟ್ ಆದ ಮೆಸೇಜ್ ಓದುವುದು ಹೇಗೆ
  • ಅದಕ್ಕಾಗಿ ಬೇಕು ಥರ್ಡ್ ಪಾರ್ಟಿ ಆಪ್
  • ಸಣ್ಣ ಟ್ರಿಕ್ ಮೂಲಕ ಮತ್ತೆ ಮೆಸೇಜ್ ಪಡೆಯಬಹುದು
WhatsAppನಲ್ಲಿ  ಡಿಲೀಟ್ ಮಾಡಿರುವ ಮೆಸೇಜ್ ಅನ್ನು ಕೂಡಾ ಸುಲಭವಾಗಿ ಓದಲು ಈ ಟ್ರಿಕ್ ಬಳಸಿ  title=
Whatsapp tricks (file photo)

ಬೆಂಗಳೂರು : WhatsApp ಅನ್ನು ಭಾರತದಲ್ಲಿ ಕೋಟಿಗಟ್ಟಲೆ ಜನರು ಬಳಸುತ್ತಾರೆ. ಈ ಅಪ್ಲಿಕೇಶನ್‌ನೊಂದಿಗೆ, ಚಾಟ್, ಆಡಿಯೋ ಮತ್ತು ವೀಡಿಯೊ ಕರೆಗಳಲ್ಲಿ ಮಾತನಾಡಬಹುದು. WhatsApp ಬಳಸುವ ಜನರು ಈ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಹೊಸ ಹೊಸ ತಂತ್ರಗಳನ್ನು ಹುಡುಕುತ್ತಲೇ ಇರುತ್ತಾರೆ. ಈ ಆ್ಯಪ್‌ನಲ್ಲಿ ಅದೆಷ್ಟೋ ವೈಶಿಷ್ಟ್ಯಗಳಿದ್ದು, ಇನ್ನು ಹೆಚ್ಚು ಜನರಿಗೆ ತಿಳಿದಿಲ್ಲ. ಒಂದು ಸಣ್ಣ  ಟ್ರಿಕ್ ಮೂಲಕ ಡಿಲೀಟ್ ಮಾಡಿದ ಸಂದೇಶಗಳು, ಆಡಿಯೋಗಳು ಮತ್ತು ವೀಡಿಯೊಗಳನ್ನು ಮತ್ತೆ ನೋಡಬಹುದು. 

ಕೆಲವರು WhatsAppನಲ್ಲಿ ಮೆಸೇಜ್ ಮಾಡಿ ನಾವು ಓದುವ ಮುನ್ನವೇ ಅದನ್ನು ಡಿಲೀಟ್ ಮಾಡಿ ಬಿಡುತ್ತಾರೆ. ಆಗ ಡಿಲೀಟ್ ಮಾಡಿರುವ ಮೆಸೇಜ್ ನಲ್ಲಿ ಏನಿದ್ದಿರಬಹುದು ಎನ್ನುವ ಕುತೂಹಲ ಇದ್ದೇ ಇರುತ್ತದೆ.  ಆದರೆ ಡಿಲಿಟ್ ಆಗಿರುವ ಮೆಸೇಜ್ ಅನ್ನು ಕೂಡಾ ಓದುವುದು ಸಾಧ್ಯ. ಆದರೆ ಅದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು . 

ಇದನ್ನೂ ಓದಿ : Electricity Bill: ಮನೆಯಲ್ಲಿ ಈ ಪ್ಲಗ್ ಅಳವಡಿಸಿದರೆ ಅರ್ಧಕ್ಕಿಂತ ಕಡಿಮೆ ಆಗುತ್ತೆ ವಿದ್ಯುತ್ ಬಿಲ್

WhatsApp ಡಿಲೀಟ್  ಅಪ್ಲಿಕೇಶನ್ ಡೌನ್ಲೋಡ್ ಮಾಡಿ :
ಈ ಟ್ರಿಕ್ ಅನ್ನು ಬಳಸಲು, ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ.
1. ಮೊದಲನೆಯದಾಗಿ, ನೀವು WhatsApp delete ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಡೌನ್‌ಲೋಡ್ ಆದ ನಂತರ ನ yes ಮೇಲೆ  ಕ್ಲಿಕ್ ಮಾಡಬೇಕು.
2. ನಂತರ ಪರ್ಮಿಶನ್ ಅನ್ನು allow ಮಾಡಬೇಕು. ಆಗ ಮಾತ್ರ ಈ ಆಪ್ ಸರಿಯಾಗಿ ಕೆಲಸ ಮಾಡುತ್ತದೆ.

ಅಳಿಸಿದ ಸಂದೇಶ, ಆಡಿಯೋ ಅಥವಾ ವೀಡಿಯೊ ಈ ರೀತಿ ಕಾಣಿಸುತ್ತದೆ :
ಇದಾದ ನಂತರ  ವಾಟ್ಸಾಪ್‌ನಲ್ಲಿಯೂ ಕೆಲವು ಸೆಟ್ಟಿಂಗ್‌ಗಳನ್ನು ಮಾಡಬೇಕು.

1. ಇದಕ್ಕಾಗಿ WhatsApp ತೆರೆಯಿರಿ ಮತ್ತು ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. 
2.  ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಡೇಟಾ ಅಂಡ್ ಸ್ಟೋರೇಜ್ ಯುಸೇಜ್ ಗೆ ಹೋಗಿ 
3.  ಮಿಡಿಯಾ ಆಟೋ ಡೌನ್ಲೋಡ್ ಗೆ ಹೋಗಿ ಎಲ್ಲಾ ಆಯ್ಕೆಗಳನ್ನು  ಅನುಮತಿಸಬೇಕು. 
4. ಈಗ ಎಲ್ಲಾ ಫೈಲ್‌ಗಳು ಡೌನ್‌ಲೋಡ್ ಆಗುತ್ತವೆ. ಇದಾದ ನಂತರ ಸಂದೇಶ, ಆಡಿಯೋ ಅಥವಾ ವೀಡಿಯೊವನ್ನು  ಮತ್ತೆ ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : SonyLiv Premiumನ ಉಚಿತ ಚಂದಾದಾರಿಕೆ ಹೊಂದಿದ ಅಗ್ಗದ ರೀಚಾರ್ಜ್ ಯೋಜನೆ ಬಿಡುಗಡೆ ಮಾಡಿದ Vi, ಬೆಲೆ ಕೇವಲ ರೂ.100 ಮಾತ್ರ

ಈ ಮೂಲಕ ಯಾರಾದರೂ ಮೆಸೇಜ್ ಕಳುಹಿಸಿ ಡಿಲೀಟ್ ಮಾಡಿದರೆ ಅದನ್ನುಮತ್ತೆ ಪಡೆಯುವುದು ಸಾಧ್ಯವಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
    

Trending News