Vehicle Documents:ವಾಹನ ಚಲಾಯಿಸುವಾಗ ಎಲ್ಲಾ ದಾಖಲೆಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಬೇಕು ಎನ್ನುವುದು ನಿಯಮ.ಒಂದು ವೇಳೆ ದಾಖಲೆಗಳನ್ನು ನಿಮ್ಮ ಜೊತೆ ಇರಿಸಿಕೊಳ್ಳಲು ಮರೆತರೆ,ದಂಡ ತೆರಬೇಕಾಗುತ್ತದೆ. ಟ್ರಾಫಿಕ್ ಪೊಲೀಸರು ವಾಹನ ತಡೆದು ತಪಾಸಣೆ ಮಾಡುವಾಗ ದಾಖಲೆಯನ್ನು ಹೊಂದಿರುವುದು ಬಹಳ ಮುಖ್ಯ. ಹೀಗೆ ಟ್ರಾಫಿಕ್ ಪೊಲೀಸರು ಕೇಳುವಾಗ ದಾಖಲೆಗಳಿಲ್ಲದಿದ್ದರೆ ಚಲನ್ ನೀಡಲಾಗುತ್ತದೆ. ಆದರೆ,ನಿಮ್ಮ ಫೋನ್ನಲ್ಲಿ ಈ ಆಪ್ ಇದ್ದರೆ ನೀವು ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಬಹುದು. ಪ್ರತಿಯೊಬ್ಬ ವಾಹನ ಸವಾರರು ಈ ಆಪ್ ಬಗ್ಗೆ ತಿಳಿದುಕೊಳ್ಳಬೇಕು.
ದಂಡ ಕಟ್ಟುವುದರಿಂದ ಉಳಿಸುತ್ತದೆ ಡಿಜಿ ಲಾಕರ್ :
ಡಿಜಿಲಾಕರ್ ಅಪ್ಲಿಕೇಶನ್ ಪ್ರತಿ ವಾಹನ ಮಾಲೀಕರಿಗೆ ಬಹಳ ಟ್ರೆಂಡಿಂಗ್ ಮತ್ತು ಅಗತ್ಯವಾದ ಅಪ್ಲಿಕೇಶನ್ ಆಗಿದೆ.ನಿಮ್ಮ ಫೋನ್ ನಲ್ಲಿ ಇದಿದ್ದರೆ ನೀವು ದಂಡ ಕಟ್ಟುವುದರಿಂದ ಪಾರಾಗಬಹುದು.ನೀವು ನಿಮ್ಮ ವಾಹನವನ್ನು ಕೊಂಡೊಯ್ಯುವಾಗ ನಿಮ್ಮ ಬಳಿ ಅಗತ್ಯ ದಾಖಲೆಗಳು ಇಲ್ಲದಿದ್ದಾಗ, ಅಂದರೆ ಮಾಲಿನ್ಯ ಅಥವಾ ವಾಹನ ನೋಂದಣಿ, ಡ್ರೈವಿಂಗ್ ಲೈಸೆನ್ಸ್ ಹೀಗೆ ಯಾವುದೇ ದಾಖಲೆಗಳಿಲ್ಲದಿದ್ದರೆ, ಟ್ರಾಫಿಕ್ ಪೋಲೀಸ್ ದಂಡ ವಿಧಿಸುತ್ತಾರೆ. ಒಂದು ವೇಳೆ ಈ ದಂಡದಿಂದ ಪಾರಾಗಬೇಕಾದರೆ ನೀವು 19 MB ಅಪ್ಲಿಕೇಶನ್ ಅನ್ನು Google Play Storeನಿಂದ ಡೌನ್ಲೋಡ್ ಮಾಡಬಹುದು.ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ,ಪ್ರಮುಖ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ಇದನ್ನೂ ಓದಿ : ನೀವು ಈ ಪಿನ್ ಗಳನ್ನು ಬಳಸುತ್ತಿದ್ದರೆ ಕೂಡಲೇ ಬದಲಾಯಿಸಿ, ಇಲ್ಲದಿದ್ದರೆ ಹ್ಯಾಕ್ ಗ್ಯಾರಂಟಿ...!
ಟ್ರಾಫಿಕ್ ಪೊಲೀಸರು ನಿಮ್ಮನ್ನು ತಡೆದು ನಿಲ್ಲಿಸಿದರೆ ಏನು ಮಾಡಬೇಕು? :
ಟ್ರಾಫಿಕ್ ಪೊಲೀಸರು ನಿಮ್ಮನ್ನು ತಡೆದು ನಿಲ್ಲಿಸಿದರೆ,ಮೊದಲು ನೀವು ನಿಮ್ಮ ಸ್ಮಾರ್ಟ್ಫೋನ್ನ ಡಿಜಿಲಾಕರ್ ಅಪ್ಲಿಕೇಶನ್ನಲ್ಲಿರುವ ಈ ದಾಖಲೆಗಳನ್ನು ಟ್ರಾಫಿಕ್ ಪೊಲೀಸರಿಗೆ ತೋರಿಸಬೇಕು.ಇದು ಸರ್ಕಾರಿ ಮಾನ್ಯತೆ ಪಡೆದ ಅಪ್ಲಿಕೇಶನ್ ಆಗಿದೆ. ಆದ್ದರಿಂದ ಯಾವುದೇ ಟ್ರಾಫಿಕ್ ಪೊಲೀಸರು ಇದನ್ನು ಸ್ವೀಕರಿಸಲು ನಿರಾಕರಿಸುವಂತಿಲ್ಲ.ನೀವು ಭೌತಿಕ ಪ್ರತಿಯನ್ನು ಹೊಂದಿದ್ದರೆ ಅದನ್ನು ಕೂಡಾ ತೋರಿಸಬಹುದು. ಆದರೆ ನಿಮ್ಮ ಬಳಿ ಭೌತಿಕ ಪ್ರತಿ ಇಲ್ಲ ಎಂದಾದರೆ ಅಪ್ಲಿಕೇಶನ್ನಲ್ಲಿ ಲಭ್ಯವಿರುವ ದಾಖಲೆಗಳನ್ನು ತೋರಿಸುವ ಮೂಲಕ ದಂಡವನ್ನು ಉಳಿಸಿಕೊಳ್ಳಬಹುದು.
ಇದನ್ನೂ ಓದಿ : Upcoming smartphones: ಮುಂದಿನ ವಾರ ಬಿಡುಗಡೆಯಾಗಲಿರುವ ಸ್ಮಾರ್ಟ್ಫೋನ್ಗಳು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.