Ulefone Durability Test: ಬಿಲ್ಡಿಂಗ್ ನಿಂದ ಕೆಳಕ್ಕೆ ಎಸೆದು ನಂತರ 24 ಗಂಟೆ ಫ್ರೀಜರ್ ನಲ್ಲಿಟ್ರು, ಎಲ್ಲಾ ಟೆಸ್ಟ್ ನಲ್ಲೂ ಸೈ ಎನಿಸಿಕೊಂಡ ಸ್ಮಾರ್ಟ್ ಫೋನ್

Ulefone Power Armor 14 Durability Test: Ulefone ಇತ್ತೀಚೆಗೆ ತನ್ನ ಅತ್ಯಂತ ಒರಟು ಸ್ಮಾರ್ಟ್‌ಫೋನ್ Ulefone Power Armor 14 ನ ಬಾಳಿಕೆಯ ಪರೀಕ್ಷೆ ನಡೆಸಿದೆ, ಇದರಲ್ಲಿ ಕಂಪನಿಯು ಮೊದಲು ಫೋನ್ ಅನ್ನು ಕಟ್ಟಡದಿಂದ ಕೆಳಗೆ ಎಸೆದು ನಂತರ ಅದನ್ನು ಫ್ರೀಜರ್‌ನಲ್ಲಿ ಇರಿಸಿದೆ. ಈ ಫೋನ್ ಪ್ರತಿ ಪರೀಕ್ಷೆಯಲ್ಲಿ ಹೇಗೆ ಉತ್ತೀರ್ಣವಾಯಿತು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Jan 8, 2022, 02:58 PM IST
  • Ulefone Power Armor 14ನ ಡ್ಯೂರೆಬಲಿಟಿ ಟೆಸ್ಟ್
  • ಐಸ್ ನಲ್ಲಿ ಹೆಪ್ಪುಗಟ್ಟಿಸಲಾಯ್ತು, ಕಟ್ಟಡದಿಂದ ಕೆಳಕ್ಕೆ ಎಸೆಯಲಾಯಿತು
  • ಈ ಸ್ಮಾರ್ಟ್ ಫೋನ್ 10,000 mAh ಬ್ಯಾಟರಿ ಸಪೋರ್ಟ್ ನೊಂದಿಗೆ ಬರಲಿದೆ.
Ulefone Durability Test: ಬಿಲ್ಡಿಂಗ್ ನಿಂದ ಕೆಳಕ್ಕೆ ಎಸೆದು ನಂತರ 24 ಗಂಟೆ ಫ್ರೀಜರ್ ನಲ್ಲಿಟ್ರು, ಎಲ್ಲಾ ಟೆಸ್ಟ್ ನಲ್ಲೂ ಸೈ ಎನಿಸಿಕೊಂಡ ಸ್ಮಾರ್ಟ್ ಫೋನ್ title=
Ulefone Power Armor 14 Durability Test (File Photo)

ನವದೆಹಲಿ: Ulefone Power Armor 14 Results - ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುವವರೇ ಇಲ್ಲ ಎನ್ನುವವರ ಸಂಖ್ಯೆ ತೀರಾ ವಿರಳ. ನಮ್ಮ ಪ್ರತಿಯೊಂದು ಕೆಲಸವೂ ಸ್ಮಾರ್ಟ್‌ಫೋನ್‌ನಲ್ಲಿ ಆಗುವುದರಿಂದ, ಜನರು ಅಂತಹ ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಪ್ರಯತ್ನಿಸುತ್ತಾರೆ, ಬಲವಾದ ಮತ್ತು ಬೇಗನೆ ಹಾಳಾಗದ ಸ್ಮಾರ್ಟ್ ಫೋನ್ ಖರೀಸುವುದು ಜನರ ಗುರಿ. ಸಾಮಾನ್ಯ ಫೋನ್‌ಗಳಿಗಿಂತ ಶಕ್ತಿಯುತವಾದ ಫೋನ್‌ಗಳನ್ನು ರಗೆಡ್ ಸ್ಮಾರ್ಟ್‌ಫೋನ್ (Rugged Smartphones) ಎಂದು ಕರೆಯಲಾಗುತ್ತದೆ. ಚೈನೀಸ್ ಸ್ಮಾರ್ಟ್‌ಫೋನ್ (Smartphone) ಬ್ರ್ಯಾಂಡ್ Ulefone ಇತ್ತೀಚಿನ ತನ್ನ ಒರಟಾದ ಸ್ಮಾರ್ಟ್‌ಫೋನ್ Ulefone Power Armour 14 ನ ಬಾಳಿಕೆ ಪರೀಕ್ಷೆ ನಡೆಸಿದೆ.ಆದರೆ, ಈ ಫೋನ್ ಪ್ರತಿ ಪರೀಕ್ಷೆಯಲ್ಲಿಯೂ ಕೂಡ ಉತ್ತೀರ್ಣವಾಗಿದೆ. ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ..

ಕಟ್ಟಡದಿಂದ ಕೆಳಗೆ ಎಸೆದು ಸ್ಮಾರ್ಟ್ ಫೋನ್ ಪರೀಕ್ಷೆ (Ulefone Rugged Smartphones)
ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್‌ನ ಶಕ್ತಿಯನ್ನು ಪರೀಕ್ಷಿಸಲು, Ulefone ಮೊದಲು ಅದನ್ನು ಎತ್ತರದ ಕಟ್ಟಡದಿಂದ ಕೆಳಗೆ ಎಸೆದಿದೆ. ಅಷ್ಟೇ ಅಲ್ಲ, Ulefone Power Armor 14 ಅನ್ನು ಸಹ ಮೆಟ್ಟಿಲುಗಳ ಕೆಳಗೆ ಎಸೆಯಲಾಯಿತು. ಈ ಫೋನನ್ನು ಎಸೆದು ಕೈಗೆತ್ತಿಕೊಂಡಾಗ ಈ ಫೋನ್‌ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ತಿಳಿದುಬಂದಿದೆ. Ulefone ನ ಈ ಒರಟಾದ ಸ್ಮಾರ್ಟ್‌ಫೋನ್ ಎಷ್ಟು ಪ್ರಬಲವಾಗಿದೆ ಮತ್ತು ಆಘಾತ ನಿರೋಧಕವಾಗಿದೆಯೆಂದರೆ, ಇದೆಲ್ಲದರ ನಂತರವೂ ಅದು ಸರಾಗವಾಗಿ ಕಾರ್ಯನಿರ್ವಹಿಸಿದೆ. 

Ulefone ಪವರ್ ಆರ್ಮರ್ 14 ಅನ್ನು ಫ್ರೀಜರ್‌ನಲ್ಲಿ ಇರಿಸಲಾಯಿತು
ಈ ಸ್ಮಾರ್ಟ್ ಫೋನ್ ನ ಬಾಳಿಕೆ ಪರೀಕ್ಷೆ ಅಲ್ಲಿಗೆ ಮುಗಿದಿಲ್ಲ. ಇದರ ನಂತರ, ಈ ಸ್ಮಾರ್ಟ್‌ಫೋನ್ ಕಂಪನಿಯು Ulefone Power Armor 14 ಅನ್ನು ಬೆಂಟೊ ಬಾಕ್ಸ್‌ನಲ್ಲಿ ಇರಿಸಿ, ಅದರಲ್ಲಿ ನೀರಿನಿಂದ ತುಂಬಿಸಿ ನಂತರ ಫೋನ್ ಅನ್ನು ಫ್ರೀಜರ್‌ನಲ್ಲಿ ಇರಿಸಿದೆ. ಈ ರೀತಿಯಾಗಿ ಕಂಪನಿ ತಮ್ಮ ಫೋನ್ ಜಲನಿರೋಧಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಿದೆ. 24 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇರಿಸಿದ ನಂತರವೂ ಕೂಡ  ಫೋನ್ ಅನ್ನು ತೆರೆದಾಗ, ಅದು ಇನ್ನೂ ಸಾಮಾನ್ಯವಾಗಿ ಕಾರ್ಯನಿರ್ವಹಿಸಿದೆ ಎಂದು ನಿಮಗೆ ತಿಳಿದರೆ ನೀವು ದಂಗಾಗುವಿರಿ. ನಂತರ ಈ ಮಂಜುಗಡ್ಡೆಯ ಪೆಟ್ಟಿಗೆಯನ್ನು ನೆಲದ ಮೇಲೆ ಹೊದೆಯಲಾಗಿದೆ. ಸ್ನೋಫ್ಲೇಕ್‌ಗಳು ಮುರಿದುಹೋಗಿವೆ ಆದರೆ ಫೋನ್‌ನಲ್ಲಿ ಯಾವುದೇ ಗೀರು ಅಥವಾ ಡೆಂಟ್ ಕಂಡುಬಂದಿಲ್ಲ. ಇದರ ನಂತರ, ಹೆಚ್ಚಿನ ಒತ್ತಡದ ನೀರಿನ ಪರೀಕ್ಷೆಯನ್ನು ಸಹ ನಡೆಸಲಾಗಿದ್ದು ಅದರಲ್ಲಿಯೂ ಕೂಡ ಈ ಫೋನ್ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ.

ಇದನ್ನೂ ಓದಿ-Airtel Latest News: ಕೇವಲ ರೂ.99 ಗಳಲ್ಲಿ ನಿಮ್ಮ ಮನೆ ಕಣ್ಗಾವಲು ಮಾಡಲಿದೆ Airtel, ಹೇಗೆ ತಿಳಿಯಲು ಸುದ್ದಿ ಓದಿ

Ulefone ಪವರ್ ಆರ್ಮರ್ 14 ನ ವೈಶಿಷ್ಟ್ಯಗಳು (Ulefone Power Armor 14 Features)
Ulefone ನಿಂದ ಈ ಒರಟಾದ ಸ್ಮಾರ್ಟ್‌ಫೋನ್ IP68/IP69K ರಕ್ಷಣೆಯ ದರ್ಜೆಯೊಂದಿಗೆ ಬರುತ್ತದೆ ಮತ್ತು MIL-STD-810G ಮಿಲಿಟರಿ ಸ್ಟ್ಯಾಂಡರ್ಡ್‌ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ನೀರು, ಧೂಳು ಮತ್ತು ಮಳೆಯ ಜೊತೆಗೆ ಈ ಸ್ಮಾರ್ಟ್‌ಫೋನ್ ಎಲ್ಲಾ ರೀತಿಯ ತಾಪಮಾನವನ್ನು ಸಹಿಸಿಕೊಳ್ಳುತ್ತದೆ. ಅಲ್ಲದೆ, Ulefone ಪವರ್ ಆರ್ಮರ್ 14 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಮತ್ತು 10,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದರಲ್ಲಿ ನೀವು 20MP ಮುಖ್ಯ ರಿಯರ್ ಕ್ಯಾಮೆರಾ ಪಡೆಯುವಿರಿ.

ಇದನ್ನೂ ಓದಿ-ಎಲೆಕ್ಟ್ರಿಕ್ ವಾಹನಗಳ ಅನುಕೂಲತೆಗಳು ನಿಮಗೆ ಗೊತ್ತಾ ?

ನೀವು ಅಂತಹ ಬಲವಾದ ಮತ್ತು ಒರಟಾದ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು  ಬಯುಸುತ್ತಿದ್ದರೆ, ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ Ulefone Power Armor 14 ಅನ್ನು ಖರೀದಿಸಬಹುದು. ಪ್ರಸ್ತುತ ಈ ಫೋನ್ ಭಾರತದಲ್ಲಿ ಲಭ್ಯವಿಲ್ಲ.

ಇದನ್ನೂ ಓದಿ-Reliance Jio: ಜಿಯೋದ ಈ ಅಗ್ಗದ ಯೋಜನೆಯಲ್ಲಿ ನಿತ್ಯ 3GB ಡೇಟಾ, ಡಿಸ್ನಿ + ಹಾಟ್‌ಸ್ಟಾರ್ ಜೊತೆಗೆ ಸಿಗುತ್ತೆ ಇನ್ನೂ ಹಲವು ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News