TV ಖರೀದಿಸುವವರಿಗೊಂದು ಗುಡ್ ನ್ಯೂಸ್ : TCL TV ಮೇಲೆ 57 ಶೇ ರಿಯಾಯಿತಿ

ಅಮೆಜಾನ್ ವೆಬ್‌ಸೈಟ್ ಪ್ರಕಾರ, ಟಿಸಿಎಲ್ 100 ಸೆಂ ಅಂದರೆ 40 ಇಂಚು ಟಿವಿ ಮೇಲೆ 51 ಪ್ರತಿಶತ ರಿಯಾಯಿತಿ ಸಿಗುತ್ತಿದೆ.   

Written by - Ranjitha R K | Last Updated : Mar 24, 2021, 11:22 AM IST
  • TV ಖರೀದಿ ಮೇಲೆ ಸಿಗುತ್ತಿದೆ ಭಾರಿ ಡಿಸ್ಕೌಂಟ್
  • 57 ಶೇ ದಷ್ಟು ರಿಯಾಯಿತಿ ದರದಲ್ಲಿ ಮಾರಾಟ
  • ಸೇಲ್ ನಲ್ಲಿ ಸಿಗುತ್ತಿರುವ ಅತ್ಯುತ್ತಮ ಡೀಲ್ ಯಾವುದು ತಿಳಿಯಿರಿ
TV ಖರೀದಿಸುವವರಿಗೊಂದು ಗುಡ್ ನ್ಯೂಸ್ : TCL TV ಮೇಲೆ 57 ಶೇ ರಿಯಾಯಿತಿ  title=
TV ಖರೀದಿ ಮೇಲೆ ಸಿಗುತ್ತಿದೆ ಭಾರಿ ಡಿಸ್ಕೌಂಟ್ (file photo)

ನವದೆಹಲಿ: ಹೋಳಿ ಹಬ್ಬದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಕಂಪನಿ TCL TVಗಳ ಮೇಲೆ ಭಾರೀ ಡಿಸ್ಕೌಂಟ್ (Heavy Discount on TV) ಘೋಷಿಸಿದೆ. TCL TV Days sale ಮಂಗಳವಾರದಿಂದಲೇ ಅಮೆಜಾನ್‌ನಲ್ಲಿ ಪ್ರಾರಂಭವಾಗಿದೆ.  ಈ ಸೇಲ್ ನಲ್ಲಿ ಶೇಕಡಾ 57ಕ್ಕಿಂತ ಹೆಚ್ಚು ರಿಯಾಯಿತಿ ನೀಡುತ್ತಿದೆ. 

100 ಸೆಂ.ಮೀ. TCL TV  ಮೇಲೆ 51 ಪ್ರತಿಶತ ರಿಯಾಯಿತಿ : 
ಅಮೆಜಾನ್ (Amazon) ವೆಬ್‌ಸೈಟ್ ಪ್ರಕಾರ, ಟಿಸಿಎಲ್ 100 ಸೆಂ ಅಂದರೆ 40 ಇಂಚು ಟಿವಿ ಮೇಲೆ 51 ಪ್ರತಿಶತ ರಿಯಾಯಿತಿ ಸಿಗುತ್ತಿದೆ. ಈ ಟಿವಿಯ ಮಾರುಕಟ್ಟೆ ಬೆಲೆ 39,990 ರೂ. ಆದರೆ ಸೇಲ್ ನಲ್ಲಿ (Sale) ಕೇವಲ 19,499 ರೂಗಳಿಗೆ ಟಿವಿಯನ್ನು ಖರೀದಿ ಮಾಡಬಹುದು. 

ಇದನ್ನೂ ಓದಿ : WhatsApp ಮೇಲೆ Spam ಹಾಗೂ Fake ಸಂದೇಶ ತಡೆಗಟ್ಟಲು ಕೇಂದ್ರ ಸರ್ಕಾರದ ಹೊಸ ಯೋಜನೆ

ಟಿಸಿಎಲ್‌ನ 55 ಇಂಚು ಟಿವಿ ಮೇಲೆ 55 ಪ್ರತಿಶತ ರಿಯಾಯಿತಿ: 
ಟಿಸಿಎಲ್ 55 ಇಂಚು  ಟಿವಿ ಮೇಲೆ ಶೇ .55ರಷ್ಟು ರಿಯಾಯಿತಿ (Discount) ಸಿಗುತ್ತಿದೆ. ಈ ಟಿವಿಯ ಮಾರುಕಟ್ಟೆ ಬೆಲೆ 1,29,990 ರೂ. ಆದರೆ ಈ ಸೆಲ್‌ನಲ್ಲಿ 4K Ultra HD Certified Android Smart ಟಿವಿ ಕೇವಲ 70,991 ರೂಗಳಿಗೆ ಖರೀದಿಸಬಹುದು.

ಟಿಸಿಎಲ್ 50 ಇಂಚು ಟಿವಿ ಮೇಲೆ 60 ಸಾವಿರ ರೂಪಾಯಿ ರಿಯಾಯಿತಿ:
ಅಮೆಜಾನ್‌ನ ಈ ವಿಶೇಷ ಸೇಲ್  ನಲ್ಲಿ , ಟಿಸಿಎಲ್‌ನ 50 ಇಂಚು  ಟಿವಿಯ ಮೇಲೆ  60 ಸಾವಿರ ರೂಪಾಯಿಗಳ ರಿಯಾಯಿತಿ  ಪಡೆಯಬಹುದು.  ಈ ಟಿವಿಯನ್ನು ಕೇವಲ 49,990 ರೂಗಳಿಗೆ ಖರೀದಿಸಬಹುದು. ಅದರ ಮಾರುಕಟ್ಟೆ ಬೆಲೆ (Market rate)  1,09,990 ರೂ. ಆಗಿದೆ. 

ಇದನ್ನೂ ಓದಿ : Mobile Battery Life: ಮೊಬೈಲ್ ನಲ್ಲಿ ಚಾರ್ಜ್​ ನಿಲ್ಲುತ್ತಿಲ್ಲವೇ? ಚಿಂತೆ ಬೇಡ ಈ ಆ್ಯಪ್ ಇನ್​ಸ್ಟಾಲ್ ಮಾಡಿ!

43 ಇಂಚಿನ ಟಿವಿ ಮೇಲೆ 22,991 ರೂ  ಡಿಸ್ಕೌಂಟ್ : 
ಕಂಪನಿಯು  (Company) 43 ಇಂಚಿನ ಟಿಸಿಎಲ್ ಟಿವಿ ಮೇಲೆ 22,991 ರೂ.ಗಳ ರಿಯಾಯಿತಿ ನೀಡುತ್ತಿದೆ. ಈ ಟಿವಿಯ ಮಾರುಕಟ್ಟೆ ಬೆಲೆ 51,990 ರೂ. ಈ ಸೆಲ್‌ನಲ್ಲಿ ಕೇವಲ 28,999 ರೂಗಳಿಗೆ ಈ ಟಿವಿಯನ್ನು ಖರೀದಿಸಬಹುದು. 

 ಕೇವಲ 13,999 ರೂಗಳಿಗೆ ಸಿಗಲಿದೆ 32 ಇಂಚಿನ ಟಿವಿ :
ಇನ್ನು ,  ಟಿಸಿಎಲ್ 32 ಇಂಚು ಟಿವಿಯನ್ನು ಕೇವಲ 13,999 ರೂಗಳಿಗೆ ತೆಗೆದುಕೊಳ್ಳಬಹುದು. ಟಿವಿ ಮೇಲೆ ಶೇ 39 ರಷ್ಟು ರಿಯಾಯಿತಿ ಸಿಗುತ್ತಿದೆ. ಇದರ ಮಾರುಕಟ್ಟೆ ಬೆಲೆ 22,990 ರೂ.

ಇದನ್ನೂ ಓದಿ : Samsung ನಿಂದ ಮತ್ತೊಂದು ಬೊಂಬಾಟ್ ಫೋನ್: 7,000mAh ಬ್ಯಾಟರಿ, 64MP ಕ್ಯಾಮೆರಾ!

ಈ ಟಿವಿಯಲ್ಲಿ ಶೇಕಡಾ 57 ರಷ್ಟು ರಿಯಾಯಿತಿ ಲಭ್ಯ : 
ಅಮೆಜಾನ್‌ನ ಈ ಸೇಲ್ ನಲ್ಲಿ , ಟಿಸಿಎಲ್ 55 ಇಂಚು ಟಿವಿ ಮೇಲೆ ಕಂಪನಿಯು ಶೇಕಡಾ 57 ರಷ್ಟು ರಿಯಾಯಿತಿ ನೀಡುತ್ತಿದೆ.   ಸುಮಾರು 1,09,990 ರೂ ಬೆಲೆಯ ಈ ಟಿವಿಯನ್ನು  ಸೇಲ್ ನಲ್ಲಿ (sale) ಕೇವಲ 46,859 ರೂಗಳಿಗೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News