ನೀವು ಮಾಡುವ ಸಣ್ಣ ತಪ್ಪು ಗೀಸರ್ ಸ್ಪೋಟಕ್ಕೂ ಕಾರಣವಾಗಬಹುದು.!

ವಾಟರ್ ಹೀಟರ್ ಬಳಸುವಾಗ ನಾವು ಜಾಗರೂಕರಾಗಿರುತ್ತೇವೆ ನಿಜ. ಆದರೆ ಖರೀದಿಸುವಾಗ ಅನೇಕ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಗೀಸರ್‌ ಖರೀದಿಸುವಾಗ ಅದರ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ. 

Written by - Ranjitha R K | Last Updated : Jan 17, 2023, 10:11 AM IST
  • ಇದೀಗ ಎಲ್ಲೆಡೆ ಚಳಿ ಹೆಚ್ಚುತ್ತಿದೆ.
  • ಚಳಿಗಾಲದಲ್ಲಿ ವಾಟರ್ ಹೀಟರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
  • ಗೀಸರ್‌ ಖರೀದಿಸುವಾಗ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಗಮನ ಹರಿಸಿ.
ನೀವು ಮಾಡುವ ಸಣ್ಣ ತಪ್ಪು ಗೀಸರ್ ಸ್ಪೋಟಕ್ಕೂ ಕಾರಣವಾಗಬಹುದು.!  title=

ಬೆಂಗಳೂರು : ಇದೀಗ ಎಲ್ಲೆಡೆ ಚಳಿ ಹೆಚ್ಚುತ್ತಿದೆ. ಚಳಿಗಾಲದಲ್ಲಿ ವಾಟರ್ ಹೀಟರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಎಲ್ಲಾ ಕೆಲಸಗಳಿಗೂ ಬಿಸಿ ನೀರಿನ ಬಳಕೆಯನ್ನೇ ಮಾಡಲಾಗುತ್ತದೆ.  ಈ ಪರಿಸ್ಥಿತಿಯಲ್ಲಿ ಗೀಸರ್ ಬಳಕೆ ಕೂಡಾ ಹೆಚ್ಚೇ. ಈ ಹಿನ್ನೆಲೆಯಲ್ಲಿ ಯಾವ ರೀತಿಯ ವಾಟರ್ ಹೀಟರ್  ಖರೀದಿಸಬೇಕು ಮತ್ತು ಗೀಸರ್‌ಗಳಿಂದ ಸುರಕ್ಷಿತವಾಗಿರುವುದು ಹೇಗೆ  ಎನ್ನುವುದನ್ನು ತಿಳಿದುಕೊಂಡಿರುವುದು ಕೂಡಾ ಬಹಳ ಮುಖ್ಯ. 

ವಾಟರ್ ಹೀಟರ್ ಬಳಸುವಾಗ ನಾವು ಜಾಗರೂಕರಾಗಿರುತ್ತೇವೆ ನಿಜ. ಆದರೆ ಖರೀದಿಸುವಾಗ ಅನೇಕ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಗೀಸರ್‌ ಖರೀದಿಸುವಾಗ ಅದರ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ. ಸುರಕ್ಷತಾ ವೈಶಿಷ್ಟ್ಯಗಳು ಯಾವುವೆಂದರೆ ಲೀಕೆಜ್ ಆಗುತ್ತಿದ್ದರೆ, ವಿದ್ಯುತ್ ಸರಬರಾಜು ಸಂಪೂರ್ಣವಾಗಿ ನಿಲ್ಲಬೇಕು. ಪ್ಲಗ್ ಗೆ ನೀರು ಪ್ರವೇಶಿಸಿದ ನಂತರವೂ ಯಾವುದೇ ಆಘಾತವಾಗಬಾರದು. ವಾಟರ್ ಹೀಟರ್ ಉತ್ತಮ ವಸ್ತುಗಳಿಂದ ಮಾಡಲ್ಪಟ್ಟಿತಬೇಕು. ಅಲ್ಲದೆ, ಬಹು ಮುಖ್ಯವಾಗಿ ವಾಟರ್ ಹೀಟರ್ ಶಾಕ್ ಪ್ರೂಫ್ ಆಗಿರಬೇಕು. ಈ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳಿದ್ದರೆ ಸ್ಪೋಟದಂಥಹ ಸಮಸ್ಯೆಯನ್ನು ತಡೆಯಬಹುದು.

ಇದನ್ನೂ ಓದಿ :  ಅಗ್ಗದ ಬೆಲೆಗೆ ಮಾರುಕಟ್ಟೆಗೆ ಕಾಲಿಡುತ್ತಿದೆ ಹೋಂಡಾ ಆಕ್ಟಿವಾ 7ಜಿ

ನಿಮ್ಮ ಬಾತ್ ರೂಂ ನಲ್ಲಿ ಯಾವ ಗೀಸರ್ ಇರಬೇಕು? : 
ಸಾಮಾನ್ಯವಾಗಿ ಜನರು ಅಗ್ಗದ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಸಣ್ಣ ಗಾತ್ರದ ಹೀಟರ್ ಗಳನ್ನು ಖರೀದಿಸುತ್ತಾರೆ. ಆದರೆ ಈ ಗೀಸರ್ ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಸಿ ನೀರು ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಾಟರ್ ಹೀಟರ್ ಖರೀದಿಸುವಾಗ, ಯಾವ ಉದ್ದೇಶಕ್ಕಾಗಿ ವಾಟರ್ ಹೀಟರ್ ಖರೀದಿಸುತ್ತಿದ್ದೀರಿ  ಎನ್ನುವುದು  ಸ್ಪಷ್ಟವಾಗಿರಲಿ. ಅಡುಗೆಮನೆಗೆ ಗೀಸರ್ ಹಾಕುವುದಾದರೆ 1 ಲೀಟರ್, 3 ಲೀಟರ್ ಮತ್ತು 6 ಲೀಟರ್ ಗೀಸರ್ ಉತ್ತಮ ಆಯ್ಕೆ. 10 ಲೀಟರ್ - 35 ಲೀಟರ್ ಗೀಸರ್‌ಗಳನ್ನು ಸ್ನಾನಗೃಹಗಳಿಗೆ  ಅಳವಡಿಸಿಕೊಳ್ಳಿ. 

ಖರೀದಿ ಮೊದಲು ಪ್ರಾಡಕ್ಟ್ ರೇಟಿಂಗ್ ನೋಡಿಕೊಳ್ಳಿ : 
ಹೊಸ ತಂತ್ರಜ್ಞಾನದ ವಾಟರ್ ಹೀಟರ್ ಹೆಚ್ಚು ವಿದ್ಯುತ್ ಬಳಸುತ್ತದೆ.  ಹೊಸ ವಾಟರ್ ಹೀಟರ್ ಖರೀದಿಸುವುದಾದರೆ ಸ್ಟಾರ್ ರೇಟಿಂಗ್ ಬಗ್ಗೆ ಗಮನ ಹರಿಸಿ. ಇದರಿಂದ ವಿದ್ಯುತ್ ಉಳಿಸಲು ಸಹಾಯವಾಗುತ್ತದೆ. 5 ಸ್ಟಾರ್ ರೇಟೆಡ್ ಗೀಸರ್‌ಗಳು 25 ಪ್ರತಿಶತದಷ್ಟು ವಿದ್ಯುತ್ ಅನ್ನು ಉಳಿಸುತ್ತವೆ. 

ಇದನ್ನೂ ಓದಿ :  ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಐಫೋನ್ 14ರ ಮೇಲೆ ಬಂಪರ್ ಡಿಸ್ಕೌಂಟ್

 ಖರೀದಿ ನಂತರದ ಸರ್ವಿಸ್  :
ಅನೇಕ ಜನರು ಗೀಸರ್ ಅನ್ನು ಖರೀದಿಸುತ್ತಾರೆ. ಆದರೆ ಕಂಪನಿ ಅದರ ಸರ್ವಿಸ್  ಮಾಡುತ್ತದೆಯೇ ಇಲ್ಲವೇ ಎನುವುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಕಂಪನಿಯು ಎಷ್ಟು ವರ್ಷಗಳ ವಾರಂಟಿಯನ್ನು ನೀಡುತ್ತದೆ ಎನ್ನುವುದನ್ನು ಕೂಡಾ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ವಾಟರ್ ಹೀಟರ್‌ಗಳ ಮೇಲೆ ದೀರ್ಘಾವಧಿಯ ವಾರಂಟಿ ನೀಡುವ ಹೆಸರಾಂತ ಬ್ರ್ಯಾಂಡ್‌ಗಳನ್ನು ಮಾತ್ರ ಆಯ್ಕೆಮಾಡಿಕೊಳ್ಳಿ . 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News