ನವದೆಹಲಿ: QR Code Scanning - ಇಂದಿನ ತಂತ್ರಜ್ಞಾನದ ಯುಗದಲ್ಲಿ ಬಹುತೇಕ ಜನರು ತಮ್ಮ ಕೆಲಸಗಳಿಗಾಗಿ ಆನ್ಲೈನ್ ಪೇಮೆಂಟ್ ಉಪಯೋಗಿಸುತ್ತಿದ್ದಾರೆ. ತರಕಾರಿ-ಹಣ್ಣು ಖರೀದಿಯಿಂದ ಹಿಡಿದು ಶಾಪಿಂಗ್ ಮಾಲ್ ಹಾಗೂ ಪೆಟ್ರೋಲ್ ಪಂಪ್ ಗಳಲ್ಲಿಯೂ ಕೂಡ ಜನರು QR CODE ಬಳಸಿ ಹಣ ಪಾವತಿಸುತ್ತಿದ್ದಾರೆ. ಆದರೆ, ಇನ್ಮುಂದೆ ನೀವು ಭಾರಿ ಎಚ್ಚರಿಕೆ ವಹಿಸುವ ಆವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು QR ಕೋಡ್ ಗಳ ಮೂಲಕ ದೊಡ್ಡ ವಂಚನೆಯನ್ನು ಎಸಗುತ್ತಿದ್ದಾರೆ. ಸೈಬರ್ ಅಪರಾಧಿಗಳು ಇದನ್ನು ಒಂದು ದೊಡ್ಡ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ಹಾಗಾದರೆ ಬನ್ನಿ QR ಕೋಡ್ ಫಿಶಿಂಗ್ ಕುರಿತು ತಿಳಿದುಕೊಳ್ಳೋಣ.
ಎಲ್ಲಕ್ಕಿಂತ ಮೊದಲು ಜಪಾನ್ನಲ್ಲಿ QR ಕೋಡ್ ಸಿದ್ಧಗೊಂಡಿತ್ತು. ಅಪನಗದೀಕರಣದ ಬಳಿಕ ಭಾರತದಲ್ಲಿಯೂ ಕೂಡ ಇದರ ವ್ಯಾಪಕ ಬಳಕೆ ಆರಂಭಗೊಂಡಿದೆ. ಇಂತಹುದರಲ್ಲಿ ಒಂದು ವೇಳೆ ನೀವೂ ಕೂಡ QR ಕೋಡ್ ಬಳಸಿ ಪೇಮೆಂಟ್ ಮಾಡುತ್ತಿದ್ದರೆ ಭಾರಿ ಎಚ್ಚರಿಕೆಯಿಂದ ಪೇಮೆಂಟ್ ಮಾಡಿ. ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. QR ಕೋಡ್ ಬಳಸಿ ಅಪರಾಧಿಗಳು ಕೋಟ್ಯಂತರ ರೂ. ವಂಚನೆ ಎಸಗುತ್ತಿದ್ದಾರೆ. ಆದರೆ, ಒಂದು ವೇಳೆ ನೀವು ಎಚ್ಚರಿಕೆ ವಹಿಸಿದರೆ ನಿಮ್ಮ ಹಣವನ್ನು ನೀವು ಕಾಪಾಡಬಹುದು.
QR Code ವಂಚನೆ ಹೇಗೆ ಎಸಗಲಾಗುತ್ತದೆ?
ಇತ್ತೀಚಿನ ದಿನಗಳಲ್ಲಿ ಜನರು ಡಿಜಿಟಲ್ ವಹಿವಾಟಿನತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಆದರೆ ಇದರೊಂದಿಗೆ ಸೈಬರ್ ಅಪರಾಧವೂ ವೇಗವಾಗಿ ಹೆಚ್ಚುತ್ತಿದೆ. ಸೈಬರ್ ವಂಚನೆಯ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಸಂಪರ್ಕ ರಹಿತ ಪಾವತಿಗಳನ್ನು ಮಾಡುವಾಗ, ನಾವು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತೇವೆ ಮತ್ತು ಹಣವನ್ನು ವರ್ಗಾಯಿಸುತ್ತೇವೆ. ವಂಚಕರು ಇದರಿಂದಲೇ ಲಾಭ ಪಡೆದುಕೊಳ್ಳುತ್ತಾರೆ. ಅಂತಹ ಜನರು ಕ್ಯೂಆರ್ ಕೋಡ್ ಅನ್ನು ಬದಲಾಯಿಸುತ್ತಾರೆ. ನಿಮ್ಮ ಪಾವತಿ ವಂಚಕನ ಖಾತೆಗೆ ಹೋಗುತ್ತದೆ. ಮತ್ತೊಂದು ಕ್ಯೂಆರ್ ಕೋಡ್ ಸೇರಿಸಲು ಕ್ಯೂಆರ್ ಕೋಡ್ ಅನ್ನು ಬದಲಾಯಿಸುವುದನ್ನು ಕ್ಯೂಆರ್ ಕೋಡ್ ಫಿಶಿಂಗ್ ಎಂದು ಕರೆಯಲಾಗುತ್ತದೆ. ಇದರೊಂದಿಗೆ, ನಿಮ್ಮ ಹಣವು ಅಂಗಡಿಯವರಿಗೆ ಹೋಗುವುದಿಲ್ಲ ಮತ್ತು ಮೋಸಗಾರನ ಖಾತೆಗೆ ಹೋಗುತ್ತದೆ.
ಇದನ್ನು ಓದಿ- QR Code On Wedding Card: ಮದುವೆ ಕರೆಯೋಲೆ ಮೇಲೆ QR Code,ವಧು-ವರರ ಖಾತೆಗೆ DBT,ಅತಿಥಿಗಳಿಗೆ ಮನೆಯಲ್ಲೇ ಊಟ
ಹೇಗೆ ಎಚ್ಚರಿಕೆ ವಹಿಸಬೇಕು?
- ಅಪರಾಧಿಗಳು ಮೆಸೇಜ್ ಅಥವಾ ಇ- ಮೇಲ್ ಮೂಲಕ QR ಕೋಡ್ ಕಳುಹಿಸಬಹುದು. ನಿಮಗೆ 10000 ರೂ. ಲಾಟರಿ ಬಂದಿದೆ ಎಂದು ಹೇಳಿ, ನಿಮಗೆ UPI ಪಿನ್ ನೀಡಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಯೇ ಟ್ರಾನ್ಸ್ಫಾರ್ ಪಡೆಯಲು ಹೇಳುತ್ತಾರೆ. ಇಂತಹ ಸಂಗತಿಗಳಿಂದ ದೂರವಿರಿ.
- ಯಾರಾದರು ನಿಮಗೆ UPI ಕೋಡ್ ಕೇಳಿದರೆ ಹಂಚಿಕೊಳ್ಳಬೇಡಿ.
- ಅಂಗಡಿ ಹೊರಗೆ ಅಥವಾ ಪೆಟ್ರೋಲ್ ಪಂಪ್ ಗಳ ಮೇಲೆ ನೀಡಲಾಗಿರುವ QR ಕೋಡ್ ಸ್ಕ್ಯಾನ್ ಮಾಡುವಾಗ ಎಚ್ಚರಿಕೆವಹಿಸಿ. ಏಕೆಂದರೆ ಸ್ಕ್ಯಾಮರ್ ಗಳು ಮೂಲ QR ಕೋಡ್ ಅನ್ನು ಕೂಡ ಬದಲಿಸಬಹುದು.
ಇದನ್ನು ಓದಿ-Aadhaar Cardನಲ್ಲಿ ಜೋಡಿಸಲಾಗಿರುವ ಈ ನೂತನ ವೈಶಿಷ್ಟ್ಯದ ಕುರಿತು ನಿಮಗೆ ತಿಳಿದಿದೆಯೇ?
-QR ಕೋಡ್ ಮೂಲಕ ಸ್ಯಾನ್ ಮಾಡಿ ಹಣ ಪಾವತಿಸುವಾಗ ನೀವು ಹಣ ನೀಡುವವರ ಹೆಸರು ಮೊಬೈಲ್ ಸ್ಕ್ರೀನ್ ಮೇಲೆ ಖಚಿತಪಡಿಸಿಕೊಳ್ಳಿ.
- ಮೆಸೇಜ್ ಅಥವಾ ಇ-ಮೇಲ್ ಗಳ ಮೂಲಕ ಬಂದ QR ಕೋಡ್ ಸ್ಕ್ಯಾನ್ ಮಾಡುವುದರಿಂದ ಪಾರಾಗಿ.
- ನಿಮ್ಮ ಮೊಬೈಲ್ ಫೋನ್ ಕ್ಯಾಮರಾ ಮೂಲಕ QR ಕೋಡ್ ಸ್ಕ್ಯಾನ್ ಮಾಡುವ ಬದಲು ಆಪ್ ಬಳಕೆ ಮಾಡಿ. QR ಕೋಡ್ ಡಿಟೇಲ್ಸ್ ಹೇಳುವ ಆಪ್ ಗಳ ಬಳಕೆ ಮಾಡಿ.
- ಯಾವುದೇ ರೀತಿಯ ತಪ್ಪು ಹಣ ವರ್ಗಾವಣೆಯ ಕುರಿತು ತಕ್ಷಣ ವರದಿ ಮಾಡಿ. ವಂಚನೆಗೆ ಒಳಗಾದ ತಕ್ಷಣ ಅದರ ದೂರನ್ನು ಸೈಬರ್ ಸೆಲ್ ಗೆ ನೀಡಿ.
ಇದನ್ನು ಓದಿ-ರೈಲು ಪ್ರಯಾಣಿಕರಿಗೆ ಮಹತ್ವದ ಸೂಚನೆ, ಶೀಘ್ರವೇ ಜಾರಿಗೆ ಬರಲಿದೆ ಈ ನೂತನ ನಿಯಮ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.