Made in India Smartphones: ಚೀನಾದ ಬ್ರಾಂಡ್‌ಗಳಿಗೆ ಟಕ್ಕರ್ ನೀಡುವ ಟಾಪ್ 5 ಭಾರತೀಯ ಫೋನ್ ತಯಾರಕರಿವರು

Made in India Smartphones: ಬಳಕೆದಾರರಲ್ಲಿ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್‌ನ ವ್ಯಾಮೋಹವನ್ನು ನೋಡಿ, ಅನೇಕ ದೇಶೀಯ ಕಂಪನಿಗಳು ಮಾರುಕಟ್ಟೆಯಲ್ಲಿ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಅಂತಹ ಭಾರತೀಯ ಬ್ರ್ಯಾಂಡ್‌ಗಳ ಬಗ್ಗೆ ತಿಳಿಯೋಣ...

Written by - Yashaswini V | Last Updated : Jul 24, 2021, 11:34 AM IST
  • ಭಾರತವು ಸ್ಮಾರ್ಟ್‌ಫೋನ್ ಉದ್ಯಮಕ್ಕೆ ದೊಡ್ಡ ಮಾರುಕಟ್ಟೆಯಾಗಿದೆ
  • ಅನೇಕ ಬ್ರಾಂಡ್‌ಗಳು ತಮ್ಮ ಸಾಧನಗಳನ್ನು ಭಾರತದಲ್ಲಿ ಪ್ರಾರಂಭಿಸಲು ಇದು ಕಾರಣವಾಗಿದೆ
  • ಆದರೆ ಬೇರೆ ದೇಶದ ಬ್ರಾಂಡ್‌ಗಳಿಗೆ ಸ್ಪರ್ಧೆ ನೀಡುವ ವಿಷಯದಲ್ಲಿ ಭಾರತೀಯ ಬ್ರಾಂಡ್ ಕೂಡ ಹಿಂದುಳಿದಿಲ್ಲ
Made in India Smartphones: ಚೀನಾದ ಬ್ರಾಂಡ್‌ಗಳಿಗೆ ಟಕ್ಕರ್ ನೀಡುವ ಟಾಪ್ 5 ಭಾರತೀಯ ಫೋನ್ ತಯಾರಕರಿವರು title=
Made In India Smartphones

Made in India Smartphones: ಕಳೆದ ವರ್ಷ ಹೆಚ್ಚಿನ ಸಂಖ್ಯೆಯ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ನಂತರ, ಭಾರತೀಯ ಬಳಕೆದಾರರು ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್‌ಗಳನ್ನು ಬಳಸಲು ಪ್ರಾರಂಭಿಸಿದರು. ಈ ಸಮಯದಲ್ಲಿ, ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್‌ಗಳು ಸಹ ಬಳಕೆದಾರರಲ್ಲಿ ಬಹಳ ಜನಪ್ರಿಯವಾಯಿತು. ಅಂದಹಾಗೆ, ಭಾರತವು ಸ್ಮಾರ್ಟ್‌ಫೋನ್ ಉದ್ಯಮಕ್ಕೆ ದೊಡ್ಡ ಮಾರುಕಟ್ಟೆಯಾಗಿದೆ ಮತ್ತು ಅನೇಕ ಬ್ರಾಂಡ್‌ಗಳು ತಮ್ಮ ಸಾಧನಗಳನ್ನು ಭಾರತದಲ್ಲಿ ಪ್ರಾರಂಭಿಸಲು ಇದು ಕಾರಣವಾಗಿದೆ. ಈ ಎಲ್ಲಾ ಬ್ರಾಂಡ್‌ಗಳು ಭಾರತದಲ್ಲಿ ಬಲವಾದ ಸ್ಥಾನವನ್ನು ಪಡೆದಿವೆ. ಆದರೆ ಅವರಿಗೆ ಸ್ಪರ್ಧೆಯನ್ನು ನೀಡುವ ವಿಷಯದಲ್ಲಿ ಭಾರತೀಯ ಬ್ರಾಂಡ್ ಕೂಡ ಹಿಂದುಳಿದಿಲ್ಲ. ಇದರ ಭಾಗವಾಗಿ ಮೇಡ್ ಇನ್ ಇಂಡಿಯಾ (Made in India) ಬ್ರಾಂಡ್ ಜಿಯೋ ವಿಶ್ವದ ಅಗ್ಗದ 5 ಜಿ ಫೋನ್ ಅನ್ನು ಬಿಡುಗಡೆ ಮಾಡಿದೆ. ಅದೇ ಸಮಯದಲ್ಲಿ, ಬಹಳ ಸಮಯದ ನಂತರ, ಮೈಕ್ರೋಮ್ಯಾಕ್ಸ್ (Micromax) ಸಹ ಅಬ್ಬರದಿಂದ ಮಾರುಕಟ್ಟೆಗೆ ಪ್ರವೇಶಿಸಿದೆ. ಮೇಡ್ ಇನ್ ಇಂಡಿಯಾ ಫೋನ್ ತಯಾರಕ ಕಂಪನಿಗಳು ತಮ್ಮ ಬಳಕೆದಾರರ ಅನುಕೂಲತೆ ಮತ್ತು ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ದಿನದಿಂದ ದಿನಕ್ಕೆ ಹೊಸ ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಇವು ಬೆಲೆ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಚೀನೀ ಬ್ರಾಂಡ್‌ನೊಂದಿಗೆ ಸ್ಪರ್ಧಿಸಬಹುದು. ಆದರೆ ಬಹುಶಃ ಕೆಲವು ಬಳಕೆದಾರರು ಮೇಡ್ ಇನ್ ಇಂಡಿಯಾ ಕಂಪನಿಗಳ ಹೆಸರಿನ ಬಗ್ಗೆ ಗೊಂದಲದಲ್ಲಿರುವುದು ವಿಪರ್ಯಾಸ. ಹಾಗಾಗಿ ಇಂದು ನಾವು ನಿಮಗೆ ಭಾರತೀಯ ಫೋನ್ ತಯಾರಕ ಕಂಪನಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

Micromax Mobile:
ಭಾರತದಲ್ಲಿ ಚೀನೀ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳ ಆಗಮನದ ಮೊದಲು, ಮೈಕ್ರೋಮ್ಯಾಕ್ಸ್ ಪ್ರಾಬಲ್ಯ ಹೊಂದಿತ್ತು ಮತ್ತು ಈ ಕಂಪನಿಯ ಫೋನ್‌ಗಳು ಸಹ ಬಳಕೆದಾರರಲ್ಲಿ ಜನಮನ್ನಣೆ ಪಡೆದಿದ್ದವು. ಆದರೆ ಚೀನಾದ ಕಂಪನಿಗಳು ಭಾರತದಲ್ಲಿ ಪದಾರ್ಪಣೆ ಮಾಡಿದ ಬಳಿಕ ಬಳಕೆದಾರರಲ್ಲಿ ಭಾರತೀಯ ಕಂಪನಿಗಳ ಬಗೆಗಿನ ಬಾಂಧವ್ಯ ಕಡಿಮೆಯಾಯಿತು. ಅದೇ ಸಮಯದಲ್ಲಿ, ಮೇಡ್ ಇನ್ ಇಂಡಿಯಾ (Made in India) ಬ್ರಾಂಡ್‌ನ ಹೆಚ್ಚುತ್ತಿರುವ ಕ್ರೇಜ್ ಅನ್ನುನೋಡಿದ ಕಂಪನಿಯು ಮತ್ತೆ ಮಾರುಕಟ್ಟೆಗೆ ಪ್ರವೇಶಿಸಿದೆ. ಪ್ರವೇಶದೊಂದಿಗೆ, ಅನೇಕ ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಾಗಿದೆ. ಅದೇ ಸಮಯದಲ್ಲಿ, ಜುಲೈ 30 ರಂದು ಮತ್ತೊಂದು ಹೊಸ ಸ್ಮಾರ್ಟ್ಫೋನ್ ಮೈಕ್ರೋಮ್ಯಾಕ್ಸ್ ಇನ್ 2 ಬಿ (Micromax In 2b) ಅನ್ನು ಬಿಡುಗಡೆ ಮಾಡಲು ಕಂಪನಿಯು ಸಿದ್ಧತೆ ನಡೆಸಿದೆ.

ಇದನ್ನೂ ಓದಿ-  Reliance Jio: Buy 1 Get 1 ಉಚಿತ ಕೊಡುಗೆ ಪರಿಚಿಯಿಸಿದ ಜಿಯೋ, ಸಿಗುತ್ತೆ ಡಬಲ್ ಲಾಭ

Reliance jio: 
ರಿಲಯನ್ಸ್ ಜಿಯೋ ಟೆಲಿಕಾಂ ಉದ್ಯಮದಲ್ಲಿ ಬಲವಾದ ಗುರುತು ಮತ್ತು ಸ್ಥಾನವನ್ನು ಗಳಿಸಿದೆ. ಅಷ್ಟೇ ಅಲ್ಲ, ಕಂಪನಿಯು ಬಳಕೆದಾರರಿಗೆ ಕಡಿಮೆ ಬೆಲೆಯ ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು 4 ಜಿ ಬೆಂಬಲದೊಂದಿಗೆ ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಅನ್ನು ಬಿಡುಗಡೆ ಮಾಡಿದೆ. ಅದೇ ಸಮಯದಲ್ಲಿ, ಇತ್ತೀಚೆಗೆ ಕಂಪನಿಯು ವಿಶ್ವದ ಅಗ್ಗದ 5 ಜಿ ಸ್ಮಾರ್ಟ್ಫೋನ್ ಜಿಯೋ ಫೋನ್ ನೆಕ್ಸ್ಟ್ ( Jio Phone Next) ಅನ್ನು ಬಿಡುಗಡೆ ಮಾಡಿದೆ. ಆದರೆ ಅದರ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

Intex Mobile: 
ಭಾರತದಲ್ಲಿ ಜನಪ್ರಿಯ ಬ್ರಾಂಡ್ ಆಗಿರುವ ಇಂಟೆಕ್ಸ್ (Intex) ಅನ್ನು ಕೆಲವು ಬಳಕೆದಾರರು ಹೊರಗಿನ ಕಂಪನಿಯಾಗಿದೆ ಎಂದು ಭಾವಿಸುತ್ತಾರೆ, ಆದರೆ ಇದು ಭಾರತದ  ಕಂಪನಿಯಾಗಿದೆ. ಇಂಟೆಕ್ಸ್ ಇನ್ನೂ ಫೀಚರ್ ಫೋನ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದೆ ಮತ್ತು ಅದನ್ನು ಅಗ್ಗದ ಫೋನ್‌ಗಳಲ್ಲಿ ಮಾರಾಟ ಮಾಡುತ್ತದೆ. ಕಂಪನಿಯು ಸ್ಮಾರ್ಟ್ಫೋನ್ ಉದ್ಯಮದ ಓಟದಲ್ಲಿ ಭಾಗವಹಿಸಲಿಲ್ಲ ಮತ್ತು ಅದಕ್ಕಾಗಿಯೇ ಇತರ ಕಂಪನಿಗಳಿಗೆ ಹೋಲಿಸಿದರೆ ಇದು ಇನ್ನೂ ಹಿಂದುಳಿದಿದೆ. ಅಂದಹಾಗೆ, ನೀವು ಮೇಡ್ ಇನ್ ಇಂಡಿಯಾ ಬ್ರಾಂಡ್‌ನ ಫೀಚರ್ ಫೋನ್ ಪಡೆಯಲು ಬಯಸಿದರೆ, ನೀವು ಇಂಟೆಕ್ಸ್‌ನಲ್ಲಿ ಹಲವು ಉತ್ತಮ ಆಯ್ಕೆಗಳನ್ನು ಕಾಣಬಹುದು.

Lava Mobiles:
ಲಾವಾ ಇನ್ನೂ ಬಳಕೆದಾರರಲ್ಲಿ ಜನಪ್ರಿಯ ಬ್ರಾಂಡ್ ಆಗಿದೆ. ಈ ಹಿಂದೆ ಕಂಪನಿಯು ಫೀಚರ್ ಫೋನ್‌ಗಳಲ್ಲಿ ಮಾತ್ರ ಕೆಲಸ ಮಾಡುತ್ತಿತ್ತು. ಆದರೆ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಬಳಕೆದಾರರ ಒಲವನ್ನು ನೋಡಿದ ಕಂಪನಿಯು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಸಹ ಬಿಡುಗಡೆ ಮಾಡಲು ಪ್ರಾರಂಭಿಸಿತು. ಅಷ್ಟೇ ಅಲ್ಲ, ಲಾವಾ ಇನ್ನೂ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಕಂಪನಿಯು ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಲಾವಾ ಜಡ್ 2 ಎಸ್ (Lava Z2s) ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ- ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ OnePlus Nord 2 5G...!

Karbonn Mobiles:
ಕಾರ್ಬನ್ ಕಂಪನಿ ಮೊಬೈಲ್‌ಗಳು ಭಾರತದಲ್ಲಿ ಮಾರುಕಟ್ಟೆಯಲ್ಲಿನ ಫೀಚರ್ ಫೋನ್‌ಗಳಿಗೆ ಪ್ರಸಿದ್ಧವಾಗಿದೆ. ಆದರೆ ಈಗ ಕ್ರಮೇಣ ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಬಳಕೆದಾರರಲ್ಲಿ ಸಾಕಷ್ಟು ಮೆಚ್ಚುಗೆಯನ್ನು ಪಡೆಯುತ್ತಿದೆ. ಕಾರ್ಬನ್ ಮೊಬೈಲ್‌ಗಳ (Karbonn Mobiles ) ವಿಶೇಷತೆಯೆಂದರೆ ಕಂಪನಿಯು ತನ್ನ ಬಳಕೆದಾರರೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮಗಳ ಮೂಲಕ ಬಹಳ ಸಕ್ರಿಯವಾಗಿದೆ ಮತ್ತು ಪ್ರತಿದಿನ ಹೊಸ ನವೀಕರಣಗಳನ್ನು ನೀಡುತ್ತಲೇ ಇರುತ್ತದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News