ಅತೀ ಹೆಚ್ಚು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ಭಾರತದ ರೈಲ್ವೆ ನಿಲ್ದಾಣ ಯಾವುದು ಗೊತ್ತಾ? ಇಲ್ಲಿವೆ ಬರೋಬ್ಬರಿ 23 ಪ್ಲಾಟ್‌ಫಾರ್ಮ್‌... 26 ಹಳಿಗಳು

Indian railway station with the most platforms: ಭಾರತೀಯ ರೈಲ್ವೇ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸತನವನ್ನು ತರುತ್ತಿರುವುದಕ್ಕೆ ಇದೇ ಕಾರಣ. ಇನ್ನು ದೇಶಾದ್ಯಂತ ಸಾವಿರಾರು ರೈಲು ನಿಲ್ದಾಣಗಳಿದ್ದರೂ, ಗರಿಷ್ಠ ಸಂಖ್ಯೆಯ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ನಿಲ್ದಾಣ ಯಾವುದು ಎಂದು ನಿಮಗೆ ತಿಳಿದಿದೆಯೇ?  

Written by - Bhavishya Shetty | Last Updated : Nov 21, 2024, 05:59 PM IST
    • ಗರಿಷ್ಠ ಸಂಖ್ಯೆಯ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ನಿಲ್ದಾಣ ಯಾವುದು?
    • ದೇಶಾದ್ಯಂತ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಪ್ರಯಾಣಕ್ಕಾಗಿ ಹೆಚ್ಚಾಗಿ ರೈಲುಗಳನ್ನು ಬಳಸುತ್ತಾರೆ
    • ಭಾರತದಲ್ಲಿ ಅತಿ ಹೆಚ್ಚು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ರೈಲು ನಿಲ್ದಾಣ ಹೌರಾ
ಅತೀ ಹೆಚ್ಚು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ಭಾರತದ ರೈಲ್ವೆ ನಿಲ್ದಾಣ ಯಾವುದು ಗೊತ್ತಾ? ಇಲ್ಲಿವೆ ಬರೋಬ್ಬರಿ 23 ಪ್ಲಾಟ್‌ಫಾರ್ಮ್‌... 26 ಹಳಿಗಳು title=
File Photo

Indian railway station with the most platforms: ದೇಶಾದ್ಯಂತ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಪ್ರಯಾಣಕ್ಕಾಗಿ ಹೆಚ್ಚಾಗಿ ರೈಲುಗಳನ್ನು ಬಳಸುತ್ತಾರೆ. ಭಾರತೀಯ ರೈಲ್ವೇ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸತನವನ್ನು ತರುತ್ತಿರುವುದಕ್ಕೆ ಇದೇ ಕಾರಣ. ಇನ್ನು ದೇಶಾದ್ಯಂತ ಸಾವಿರಾರು ರೈಲು ನಿಲ್ದಾಣಗಳಿದ್ದರೂ, ಗರಿಷ್ಠ ಸಂಖ್ಯೆಯ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ನಿಲ್ದಾಣ ಯಾವುದು ಎಂದು ನಿಮಗೆ ತಿಳಿದಿದೆಯೇ?

ಇದನ್ನೂ ಓದಿ: ಈ ದಿನದಂದು ದೈಹಿಕ ಸಂಭೋಗ ಮಾಡಲೇಬೇಡಿ... ಅಪ್ಪಿತಪ್ಪಿ ಮಾಡಿದ್ರೆ ಬೇಗ ಸಾವು ಸಂಭವಿಸುತ್ತೆ!

ಹೌರಾ ರೈಲು ನಿಲ್ದಾಣ: ಭಾರತದಲ್ಲಿ ಅತಿ ಹೆಚ್ಚು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ರೈಲು ನಿಲ್ದಾಣ ಹೌರಾ. ಕೋಲ್ಕತ್ತಾದ ಹೌರಾ ರೈಲು ನಿಲ್ದಾಣವು ಅತಿ ಹೆಚ್ಚು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ನಿಲ್ದಾಣವಾಗಿದೆ. ಈ ನಿಲ್ದಾಣದಲ್ಲಿ 23 ಪ್ಲಾಟ್‌ಫಾರ್ಮ್‌ಗಳಿದ್ದು, ಇದರ ವಿಶೇಷವೆಂದರೆ ಈ ನಿಲ್ದಾಣದಲ್ಲಿ 26 ಹಳಿಗಳ ರೈಲು ಮಾರ್ಗವನ್ನೂ ಹಾಕಲಾಗಿದೆ.

ಸೀಲ್ದಾ ರೈಲ್ವೇ ನಿಲ್ದಾಣ: ಅತಿ ಹೆಚ್ಚು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ದೇಶದ ಎರಡನೇ ಅತಿದೊಡ್ಡ ರೈಲು ನಿಲ್ದಾಣವೆಂದರೆ ಸೀಲ್ದಾ ರೈಲು ನಿಲ್ದಾಣ. ಈ ರೈಲು ನಿಲ್ದಾಣವು ದೇಶದ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಈ ರೈಲು ನಿಲ್ದಾಣದಲ್ಲಿ ಒಟ್ಟು 20 ಪ್ಲಾಟ್‌ಫಾರ್ಮ್‌ಗಳಿವೆ.

ಸಿಎಸ್‌ಟಿ : ದೇಶದ ಆರ್ಥಿಕ ರಾಜಧಾನಿ ಎಂದು ಕರೆಯಲ್ಪಡುವ ಮುಂಬೈ ನಗರದಲ್ಲಿ ನಿರ್ಮಿಸಲಾದ ಛತ್ರಪತಿ ಶಿವಾಜಿ ಟರ್ಮಿನಸ್, ದೇಶದ ಮೂರನೇ ಅತೀ ಹೆಚ್ಚು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ರೈಲು ನಿಲ್ದಾಣವಾಗಿದೆ. ಇಲ್ಲಿ ಒಟ್ಟು 18 ಪ್ಲಾಟ್‌ಫಾರ್ಮ್‌ಗಳಿವೆ. ಅಂದಹಾಗೆ ಈ ನಿಲ್ದಾಣವನ್ನು ಮೊದಲು ವಿಕ್ಟೋರಿಯಾ ಟರ್ಮಿನಸ್ ಎಂದೂ ಕರೆಯಲಾಗುತ್ತಿತ್ತು.

ನವದೆಹಲಿ ರೈಲು ನಿಲ್ದಾಣ: ರಾಜಧಾನಿಯಲ್ಲಿ ನಿರ್ಮಿಸಲಾದ ನವದೆಹಲಿ ರೈಲು ನಿಲ್ದಾಣವು ದೇಶದ ಗರಿಷ್ಠ ಸಂಖ್ಯೆಯ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿನ ಒಟ್ಟು ಪ್ಲಾಟ್‌ಫಾರ್ಮ್‌ಗಳ ಸಂಖ್ಯೆ 16. ವಿಶೇಷವೆಂದರೆ ಹಬ್ಬ ಅಥವಾ ರಜಾದಿನಗಳಲ್ಲಿ ಸುಮಾರು 400 ರೈಲುಗಳು ಈ ನಿಲ್ದಾಣದಿಂದ ಓಡುತ್ತವೆ.

ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್‌ ಕ್ಯೂಟ್‌ ಕಪಲ್‌.. ವಸಿಷ್ಠ ಸಿಂಹ-ಹರಿಪ್ರಿಯಾ ಬೇಬಿಬಂಪ್‌ ಫೋಟೋಶೂಟ್‌ ವೈರಲ್‌

ಚೆನ್ನೈ ರೈಲು ನಿಲ್ದಾಣ: ದೇಶದ ದಕ್ಷಿಣದಲ್ಲಿಯೂ ಸಹ, ಹೆಚ್ಚಿನ ಸಂಖ್ಯೆಯ ಪ್ಲಾಟ್‌ಫಾರ್ಮ್‌ಗಳು ಇರುವ ರೈಲ್ವೆ ನಿಲ್ದಾಣವಿದೆ. ಈ ರೈಲು ನಿಲ್ದಾಣವು ಚೆನ್ನೈನಲ್ಲಿದೆ. ಈ ನಿಲ್ದಾಣದ ಹೆಸರು ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ. ಈ ನಿಲ್ದಾಣದಲ್ಲಿ ಒಟ್ಟು 15 ಪ್ಲಾಟ್‌ಫಾರ್ಮ್‌ಗಗಳಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News