ಚಂದ್ರನಿಗೆ ಮತ್ತಷ್ಟು ಸನಿಹದಲ್ಲಿ ಚಂದ್ರಯಾನ 3 ! ಹೊಸ ವಿಡಿಯೋ ಬಿಡುಗಡೆ ಮಾಡಿದ ಇಸ್ರೋ

Chandrayaan-3 latest update : ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ 6.45 ಕ್ಕೆ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವ ಪ್ರದೇಶದ ಬಳಿ ಇಳಿಯುವ ನಿರೀಕ್ಷೆಯಿದೆ.

Written by - Ranjitha R K | Last Updated : Aug 23, 2023, 09:45 AM IST
  • ಚಂದ್ರಯಾನಕ್ಕೆ ಸಂಬಧಿಸಿದಂತೆ ಭಾರತ ಮತ್ತೊಂದು ಮೈಲಿಗಲ್ಲು
  • ಚಂದ್ರಯಾನ-3 ತೆಗೆದ ಚಂದ್ರನ ಫೋಟೋ ಮತ್ತು ಹೊಸ ವೀಡಿಯೊವನ್ನು ಬಿಡುಗಡೆ
  • ಸಂಜೆ 6.45 ಕ್ಕೆ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವ ಪ್ರದೇಶದ ಬಳಿ ಇಳಿಯುವ ನಿರೀಕ್ಷೆ
ಚಂದ್ರನಿಗೆ ಮತ್ತಷ್ಟು ಸನಿಹದಲ್ಲಿ ಚಂದ್ರಯಾನ 3 ! ಹೊಸ ವಿಡಿಯೋ ಬಿಡುಗಡೆ ಮಾಡಿದ ಇಸ್ರೋ title=

Chandrayaan-3 : ಚಂದ್ರಯಾನಕ್ಕೆ ಸಂಬಧಿಸಿದಂತೆ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಇಸ್ರೋ ಮಂಗಳವಾರ ಚಂದ್ರಯಾನ-3 ತೆಗೆದ ಚಂದ್ರನ ಫೋಟೋ ಮತ್ತು ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ. ಚಂದ್ರಯಾನ-3 ಮಿಷನ್ ವೇಳಾಪಟ್ಟಿಯಂತೆ ಪ್ರಗತಿಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)   ಹೇಳಿದೆ.

ಮಂಗಳವಾರ ಮಧ್ಯಾಹ್ನ ಚಂದ್ರಯಾನ 3 ಬಗ್ಗೆ ಮಾಹಿತಿಯನ್ನು ನೀಡಿದ ಇಸ್ರೋ, “ಮಿಷನ್ ಪ್ರಗತಿಯಲ್ಲಿದೆ. ವ್ಯವಸ್ಥೆಗಳ ನಿಯಮಿತ ತಪಾಸಣೆ ಮಾಡಲಾಗುತ್ತಿದೆ. ಕಾರ್ಯಾಚರಣೆಗಳು ಸುಗಮವಾಗಿ ಮುಂದುವರಿಯುತ್ತಿವೆ, ”ಎಂದು ಅವರು ಹೇಳದೆ. ಚಂದ್ರಯಾನ -3 ನ ಚಂದ್ರನ ಲ್ಯಾಂಡಿಂಗ್‌ನ ನೇರ ಪ್ರಸಾರವನ್ನು MOX / ISTRAC ನಿಂದ ಬುಧವಾರ ಸಂಜೆ 5.20 ರಿಂದ ಪ್ರಾರಂಭಿಸಲಾಗುವುದು. ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ 6.45 ಕ್ಕೆ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವ ಪ್ರದೇಶದ ಬಳಿ ಇಳಿಯುವ ನಿರೀಕ್ಷೆಯಿದೆ.

ಇದನ್ನೂ ಓದಿ : ಚಂದ್ರಯಾನ-3 ಲ್ಯಾಂಡಿಂಗ್ ಪ್ರಕ್ರಿಯೆ ಅತ್ಯಂತ ಕಷ್ಟಕರ ಯಾಕೆ ಗೊತ್ತಾ? ಇಸ್ರೋ ಮಾಜಿ ಮುಖ್ಯಸ್ಥ ಹೇಳಿದ್ದು ಹೀಗೆ

ಇದಕ್ಕೂ ಮೊದಲು, ಆಗಸ್ಟ್ 19 ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಮಿಷನ್‌ನ 'ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ' (ಎನ್‌ಪಿಡಿಸಿ) ಸುಮಾರು 70 ಕಿ.ಮೀ ಎತ್ತರದಿಂದ ತೆಗೆದ ಚಂದ್ರನ ಚಿತ್ರಗಳನ್ನು ಬಿಡುಗಡೆ ಮಾಡಿತು. LPDC ಯಿಂದ ತೆಗೆದ ಚಿತ್ರಗಳು  ಚಂದ್ರನ ಉಲ್ಲೇಖ ನಕ್ಷೆಯೊಂದಿಗೆ ಹೊಂದಿಸಲು ಮತ್ತು  ಅದರ ಸ್ಥಾನವನ್ನು (ಅಕ್ಷಾಂಶ ಮತ್ತು ರೇಖಾಂಶ) ನಿರ್ಧರಿಸಲು ಲ್ಯಾಂಡರ್ ಮಾಡ್ಯೂಲ್ (LM)ಗೆ ಸಹಾಯ ಮಾಡುತ್ತದೆ ಎಂದು ISRO ಹೇಳಿದೆ. LM ಇಂದು ಚಂದ್ರನ ಮೇಲ್ಮೈಯಲ್ಲಿ 'ಸಾಫ್ಟ್ ಲ್ಯಾಂಡಿಂಗ್' ಮಾಡುವ ನಿರೀಕ್ಷೆಯಿದೆ.

'ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಎವಿಡೆನ್ಸ್ ಕ್ಯಾಮೆರಾ' (ಎಲ್‌ಎಚ್‌ಡಿಎಸಿ) ದಿಂದ ತೆಗೆದ ಚಂದ್ರನ ಚಿತ್ರಗಳನ್ನು ಇಸ್ರೋ ಸೋಮವಾರ ಬಿಡುಗಡೆ ಮಾಡಿದೆ. ಅಹಮದಾಬಾದ್ ಮೂಲದ 'ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್' (ಎಸ್‌ಎಸಿ) ಅಭಿವೃದ್ಧಿಪಡಿಸಿದ ಈ ಕ್ಯಾಮೆರಾ, ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ, ಪ್ರದೇಶವನ್ನು ಸುರಕ್ಷಿತ 'ಲ್ಯಾಂಡಿಂಗ್'ಗೆ ಪತ್ತೆಹಚ್ಚಲು ಸಹಾಯ ಮಾಡುತ್ತದೆ. 

 

ಇದನ್ನೂ ಓದಿ : ಚಂದ್ರಯಾನ-3 ಲ್ಯಾಂಡಿಂಗ್‌ನ ಕ್ಷಣ ಕ್ಷಣದ ಅಪ್ಡೇಟ್, ಮೊಬೈಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ !

ISRO ಪ್ರಕಾರ, ಲ್ಯಾಂಡರ್ ಚಂದ್ರಯಾನ-3 ಮಿಷನ್‌ನ ಉದ್ದೇಶಗಳನ್ನು ಪೂರೈಸಲು LHDAC ನಂತಹ ಹಲವಾರು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದೆ. ಚಂದ್ರಯಾನ-2 ವಿಫಲವಾದ ನಂತರ ಚಂದ್ರಯಾನ-3 ಅನ್ನು ಜುಲೈ 14ರಂದು ಉಡಾವಣೆ ಮಾಡಲಾಯಿತು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News